POMIS: 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 8,00,000 ರೂಪಾಯಿ, ಇಂದೇ ಅರ್ಜಿ ಸಲ್ಲಿಸಿ ಯೋಜನೆಗೆ ಸೇರಿ.

ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ.

Post Office Monthly Income Scheme: ಭಾರತೀಯ ಅಂಚೆ ಇಲಾಖೆ (Indian Post Office) ಜನಸಾಮಾನ್ಯರಿಗೆ ಉತ್ತಮ ಹೂಡಿಕೆಯ ಸಾಕಷ್ಟು ಯೋಜನೆಯನ್ನು ಪರಿಚಯಿಸಿದೆ. ಮಧ್ಯಮ ವರ್ಗದ ಜನರಿಗೆ ಅಂಚೆ ಕಚೇರಿಯಲ್ಲಿನ ಮಾಸಿಕ ಹೂಡಿಕೆಯು ಬಹು ಮೊತ್ತದ ಲಾಭವನ್ನು ನೀಡುವ ಮಾರ್ಗವಾಗಿದೆ ಎಂದರೆ ತಪ್ಪಾಗಲಾರದು.

ಅಂಚೆ ಇಲಾಖೆ ಈಗಾಗಲೇ ದೇಶದ ನಾಗರೀಕರಿಗಾಗಿ ಸಾಕಷ್ಟು ಯೋಜನೆಯನ್ನು ಪರಿಚಯಿಸುತ್ತಾ ಜನರಿಗೆ ಆರ್ಥಿಕವಾಗಿ ನೆರವಾಗುತ್ತಿದೆ. ಅಂಚೆ ಇಲಾಖೆಯಲ್ಲಿ ಆರ್ ಡಿ ಖಾತೆಯಲ್ಲಿನ ಹೂಡಿಕೆ ಜನರಿಗೆ ಲಾಭವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ ಜನರು ಹೆಚ್ಚಾಗಿ ಆರ್ ಡಿ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ.

ಮರುಕಳುಸುವ ಠೇವಣಿಯಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಅವಕಾಶ ಇರುತ್ತದೆ. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಹೂಡಿಕೆದಾರರಿಗೆ ಖಾತರಿಯ ಮಾಸಿಕ ಆದಾಯವನ್ನು ಒದಗಿಸುವ ಜನಪ್ರಿಯ ಉಳಿತಾಯ ಆಯ್ಕೆಯಾಗಿದೆ.

Post Office Monthly Income Scheme
Image Credit: Wintwealth

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS)
ಪೋಸ್ಟ್ ಆಫೀಸ್ ಮಂಥ್ಲಿ ಇನ್ವೆಸ್ಟ್ಮೆಂಟ್ ಸ್ಕೀಮ್ ಹೂಡಿಕೆದಾರರಿಗೆ ಭದ್ರತೆಯನ್ನು ನೀಡುತ್ತದೆ. ಕಡಿಮೆ ಅಪಾಯದ ಹೂಡಿಕೆಯಲ್ಲಿ ಈ ಯೋಜನೆಯು ಒಂದಾಗಿದೆ. ಪ್ರತಿ ತಿಂಗಳ ಹೂಡಿಕೆಯಲ್ಲಿ ಮೆಚ್ಯುರಿಟಿ ಅವಧಿಯ ನಂತರ ನಿಗದಿತ ಮೊತ್ತವನ್ನು ಪಡೆಯಬಹುದು. ಸ್ಥಿರ ಆದಾಯದ ಯೋಜನೆಗೆ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಉತ್ತಮ ಆಯ್ಕೆಯಾಗಿದೆ. ಇದು ಅಲ್ಪಾವಧಿ ಹಾಗೂ ದೀರ್ಘಾವಧಿಯ ಹೂಡಿಕೆಯಾಗಿದ್ದು ಯೋಜನೆಯ ಅವಧಿಯು 5 ವರ್ಷದ್ದಾಗಿದೆ.

ಮಾಸಿಕ 5000 ಠೇವಣಿಯಲ್ಲಿ ಸಿಗಲಿದೆ 8 ಲಕ್ಷ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಬಡ್ಡಿದರವು ಕಾಲ ಕ್ರಮೇಣ ಬದಲಾಗುತ್ತ ಇರುತ್ತದೆ. ಸೆಪ್ಟೆಂಬರ್ 2021 ರಲ್ಲಿ ಬಡ್ಡಿದರವು 6.6 % ರಷ್ಟು ಆಗಿತ್ತು. ನೀವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ಹತ್ತಿರದ ಅಂಚೆ ಇಲಾಖೆಗೆ ಭೇಟಿ ನೀಡಿ ಬಡ್ಡಿದರದ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Join Nadunudi News WhatsApp Group

Post Office Monthly Income Scheme to get big profit on small investment.
Image Credit: Hindustansupport

ಮಾಸಿಕವಾಗಿ ಕೇವಲ 5000 ಹೂಡಿಕೆ ಮಾಡಿದರೆ 5 ವರ್ಷದ ಮೆಚುರಿಟಿಯ ಬಳಿಕ ಹೂಡಿಕೆದಾರರು ಬರೋಬ್ಬರಿ 8 ಲಕ್ಷ ಹಣವನ್ನು ಪಡೆಯಬಹುದು. ಶೇ. 6.6 ರ ಬಡ್ಡಿದರದಲ್ಲಿ ನೀವು 50 ಸಾವಿರಕ್ಕೂ ಅಧಿಕ ಮೊತ್ತದ ಬಡ್ಡಿದರವನ್ನು ಪಡೆಯಬಹುದು. ನೀವು ಮಾಸಿಕ ಆದಾಯ ಯೋಜನೆಯ ಲಾಭವನ್ನು ಪಡೆಯಲು ಇಂದೇ ಯೋಜನೆಗೆ ಅರ್ಜಿ ಸಲ್ಲಿಸಿ. ನಿಮ್ಮ ಬಳಿ ಇರುವ ಉಳಿತಾಯ ಹಣದಿಂದ ಹೆಚ್ಚಿನ ಲಾಭವನ್ನು ಅಂಚೆ ಇಲಾಖೆಯ ಈ ಯೋಜನೆಯಿಂದ ಪಡೆಯಬಹುದು.

Join Nadunudi News WhatsApp Group