MIS: ಗಂಡ ಮತ್ತು ಹೆಂಡತಿಗೆ ವಿಶೇಷ ಸ್ಕೀಮ್ ಜಾರಿಗೆ ತಂದ ಅಂಚೆ ಇಲಾಖೆ, ಈಗಲೇ ಯೋಜನೆಗೆ ಸೇರಿ 15 ಲಕ್ಷ ಲಾಭ ಪಡೆಯಿರಿ.
ಇದೀಗ ಪತಿ ಪತ್ನಿಯರಿಗಾಗಿ ಅಂಚೆ ಇಲಾಖೆ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
Post Office Monthly Income Scheme: ಇತ್ತೀಚಿನ ದಿನಗಳಲ್ಲಿ ಜನರು ಭವಿಷ್ಯದ ಉಳಿತಾಯಕ್ಕಾಗಿ ಹೂಡಿಕೆ ಮಾಡುತ್ತಾರೆ. ಈ ರೀತಿಯಾಗಿ ಹೂಡಿಕೆ ಮಾಡುದರಿಂದ ಭವಿಷ್ಯದಲ್ಲಿ ಅವರು ಹಣಕಾಸಿನ ಸಮಸ್ಯೆ ಯನ್ನು ಎದುರಿಸುದಿಲ್ಲ. ಜನಸಾಮಾನ್ಯರಿಗಾಗಿ ಸರ್ಕಾರ ಅನೇಕ ಹೂಡಿಕೆ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಪತಿ ಪತ್ನಿಯರಿಗಾಗಿ ಅಂಚೆ ಇಲಾಖೆ (Post Office) ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
ಪೋಸ್ಟ್ ಆಫೀಸ್ ಮಂತ್ಲಿ ಇನ್ಕಮ್ ಸ್ಕೀಮ್ (Post Office Monthly Income Scheme)
ಪೋಸ್ಟ್ ಆಫೀಸ್ ನ ಈ ಮಂತ್ಲಿ ಇನ್ಕಮ್ ಸ್ಕೀಮ್ ನಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಏಕ ಅಥವಾ ಜಂಟಿ ಖಾತೆಯನ್ನು ತೆರೆಯಬಹುದಾಗಿದೆ. ಗರಿಷ್ಠ 3 ಜನರ ಖಾತೆಯನ್ನು ಜಂಟಿಯಾಗಿ ತೆರೆಯಬಹುದಾಗಿದೆ. ಇದರ ಮುಕ್ತಾಯದ ಅವಧಿಯು 5 ವರ್ಷಗಳಾಗಿವೆ.
ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆ ಬಡ್ಡಿದರ (Monthly Income Scheme Interest Rate)
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯಲ್ಲಿ ನೀವು ಏಕ ಖಾತೆಯನ್ನು ತೆರೆದರೆ 9 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡಬಹುದು. ಜಂಟಿಯಾಗಿ ಖಾತೆ ತೆರೆದರೆ 15 ಲಕ್ಷ ರೂಪಾಯಿಗಳನ್ನ ಠೇವಣಿ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ಶೇಕಡಾ 7.4 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ನೀವು ಇದನ್ನು 5 ವರ್ಷಗಳಿಗೊಮ್ಮೆ ಮುಂದಕ್ಕೆ ಹಾಕಿದರೆ ನಿಮ್ಮ ಅಸಲನ್ನು ನೀವು ಹಿಂಪಡೆಯಬಹುದು ಹಾಗೆ ಬಡ್ಡಿಯ ಮೊತ್ತವನ್ನು ಪೋಸ್ಟ್ ಆಫೀಸ್ ನ ಉಳಿತಾಯ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಪತ್ನಿಯೊಂದಿಗೆ ಲಾಭ ಪಡೆಯಿರಿ
ಪೋಸ್ಟ್ ಆಫೀಸ್ ನ ಎಂಐಎಸ್ ಯೋಜನೆಯಲ್ಲಿ ಖಾತೆಯನ್ನು ನಿಮ್ಮ ಹೆಂಡತಿಯೊಂದಿಗೆ ತೆರೆದರೆ ನೀವು ಅದರಲ್ಲಿ 15 ಲಕ್ಷವನ್ನು ಠೇವಣಿ ಮಾಡಬೇಕಾಗುತ್ತದೆ. ನಂತರ ನೀವು ಈ ಯೋಜನೆಯ ಮುಕ್ತಾಯದ ದಿನದಂದು ಒಟ್ಟು 1,11,000 ರೂಗಳನ್ನು ಬಡ್ಡಿಯಾಗಿ ಪಡೆಯಬಹುದು. ಅಂಚೆ ಇಲಾಖೆಯ ನಿಯಮದ ಪ್ರಕಾರ ಎಂಐಎಸ್ ಯೋಜನೆಯಲ್ಲಿ ಗರಿಷ್ಠ 2 ರಿಂದ 3 ವ್ಯಕ್ತಿಗಳು ಒಟ್ಟಾಗಿ ಖಾತೆಯನ್ನು ತೆರೆಯಬಹುದು ಮತ್ತು ಸ್ವೀಕರಿಸಿದ ಮೊತ್ತವನ್ನು ಅವರ ನಡುವೆ ಸಮಾನವಾಗಿ ವಿಂಗಡಿಸಲಾಗಿದೆ.