POMIS: ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9000 ರೂ, ಪೋಸ್ಟ್ ಆಫೀಸ್ ನಲ್ಲಿ ಹೊಸ ಸ್ಕೀಮ್.

ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9000 ರೂ

Post Office Monthly Income Scheme: ಅಂಚೆ ಇಲಾಖೆಯ ವಿವಿಧ ಯೋಜನೆಗಳಲ್ಲಿ ಮಾಸಿಕ ಸಣ್ಣ ಮೊತ್ತದ ಹೂಡಿಕೆಯಲ್ಲಿ ದೊಡ್ಡ ಮೊತ್ತದ ಲಾಭ ಪಡೆಯುವ ಅವಕಾಶ ನೀಡುತ್ತಿದೆ. ಮಧ್ಯಮ ವರ್ಗದ ಜನರಿಗೆ ಅಂಚೆ ಕಚೇರಿಯಲ್ಲಿನ ಮಾಸಿಕ ಹೂಡಿಕೆಯು ಬಹು ಮೊತ್ತದ ಲಾಭವನ್ನು ನೀಡುವ ಮಾರ್ಗವಾಗಿದೆ. ಅಂಚೆ ಇಲಾಖೆಯು ನೀಡುತ್ತಿರುವ ಸಣ್ಣ ಉಳಿತಾಯ ಯೋಜನೆಗಳಲ್ಲಿ Post Office Monthly Income Scheme (POMIS) ಕೂಡ ಒಂದಾಗಿದೆ.

POMIS ನಲ್ಲಿ ನೀವು ಒಮ್ಮೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಪೋಸ್ಟ್ ಆಫೀಸ್ ನ ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಸಿಗಲಿದೆ ದಂಪತಿಗಳು ಪಿಂಚಣಿಯನ್ನು ಪಡೆಯಬಹುದು. ಮಾಸಿಕ ಆದಾಯ ನೀಡುವ ಈ ಯೋಜನೆಯ ಬಗ್ಗೆ ನೀವು ಮಾಹಿತಿ ತಿಳಿಯುವ ಮೂಲಕ ಇಂದೇ ಯೋಜನೆಯಲ್ಲಿ ಹೂಡಿಕೆ ಆರಂಭಿಸಿದರೆ ಹೆಚ್ಚು ಲಾಭವನ್ನು ಪಡೆಯಬಹುದು.

Post Office Monthly Income Scheme
Image Credit: Wintwealth

ಪೋಸ್ಟ್ ಆಫೀಸ್ ನಲ್ಲಿ ಹೊಸ ಸ್ಕೀಮ್
ನಾವೀಗ ಈ ಲೇಖನದಲ್ಲಿ ಅಂಚೆ ಇಲಾಖೆ ದಂಪತಿಗಾಗಿ ನೀಡುತ್ತಿರುವ Post Office Monthly Income Scheme ನ ಬಗ್ಗೆ ಮಾಹಿತಿ ನೀಡಲಿದ್ದೇವೆ. Post Office ಮಾಸಿಕ ಯೋಜನೆಯಡಿ ಗಂಡ ಹಾಗು ಹೆಂಡತಿ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ (Post Office Joint Account). ಖಾತೆಯನ್ನು ತೆರೆದ ನಂತರ, ನೀವು ಬಡ್ಡಿಯಿಂದ ಮಾತ್ರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯುತ್ತೀರಿ. ಪೋಸ್ಟ್ ಆಫೀಸ್ ಈ ಯೋಜನೆಯು ಪತಿ ಪತ್ನಿಯರಿಗೆ ಮಾಸಿಕ ಹಣವನ್ನ ಪಿಂಚಣಿ ರೂಪದಲ್ಲಿ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಯೋಜನೆಯಲ್ಲಿ ನೀವು ಏಕ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು.

ಗಂಡ ಮತ್ತು ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9000 ರೂ
ಈ ಯೋಜನೆಯಡಿ ಗಂಡ ಹಾಗು ಹೆಂಡತಿ ಇಬ್ಬರೂ  ಜಂಟಿ ಖಾತೆಯನ್ನು ತೆರೆದು ಅದರಲ್ಲಿ ರೂ. 15 ಲಕ್ಷವನ್ನು ಠೇವಣಿ ಮಾಡಿದರೆ ನೀವು ಮಾಡಿದ ಈ ಹೂಡಿಕೆಯ ಮೇಲೆ 7.4 ಪ್ರತಿಶತದ ದರದಲ್ಲಿ ರೂ. 1,11,000 ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಇನ್ನು ಬಡ್ಡಿಯ ಹಣ ನೀವು ಹೂಡಿಕೆ ಮಾಡಿದ ಹಣದ ಮೇಲೆ ನಿರ್ಧಾರ ಆಗಿರುತ್ತದೆ. ಈಗ ನೀವು ಅದನ್ನು 12 ತಿಂಗಳುಗಳಲ್ಲಿ ವಿತರಿಸಿದರೆ, ನೀವು ಪ್ರತಿ ತಿಂಗಳು 9250 ರೂ. ಬಡ್ಡಿಯನ್ನು ಪಡೆಯುತ್ತೀರಿ.

Post Office Monthly Income Scheme Details
Image Credit: Informalnewz

ಈ ಯೋಜನೆಯಲ್ಲಿ ಮೂರು ಜನರೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಖಾತೆಯಲ್ಲಿ ಪಡೆದ ಬಡ್ಡಿಯನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ. ಈ ಯೋಜನೆಯಡಿ ಠೇವಣಿ ಮಾಡಿದ ದಿನಾಂಕದಿಂದ ಒಂದು ವರ್ಷದ ನಂತರ ನೀವು ಹಣವನ್ನು ಹಿಂಪಡೆಯಬಹುದು. ಆದರೆ ನೀವು ಒಂದು ವರ್ಷದಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂಪಡೆದರೆ, ಠೇವಣಿ ಮೊತ್ತದಿಂದ 2 ಪ್ರತಿಶತವನ್ನು ಕಡಿತಗೊಳಿಸಿದ ನಂತರ ನೀವು ಹಣವನ್ನು ಮರಳಿ ಪಡೆಯುತ್ತೀರಿ. ಹಾಗೆಯೆ ನೀವು 3 ವರ್ಷಗಳ ನಂತರ ಹಣವನ್ನು ಹಿಂಪಡೆದರೆ, 1 ಪ್ರತಿಶತವನ್ನು ಕಡಿತಗೊಳಿಸಿದ ನಂತರ ನೀವು ಹಣವನ್ನು ಪಡೆಯುತ್ತೀರಿ.

Join Nadunudi News WhatsApp Group

Post Office Monthly Income Scheme Investment
Image Credit: Informalnewz

Join Nadunudi News WhatsApp Group