Monthly Income: ಗಂಡ ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9250 ರೂ, ಅಂಚೆ ಕಚೇರಿಯಲ್ಲಿ ಇಂದೇ ಅರ್ಜಿ ಸಲ್ಲಿಸಿ ಯೋಜನೆಗೆ ಸೇರಿ.

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ನೀವು ಮನೆಯಲ್ಲಿ ಕುಳಿತು ಉತ್ತಮ ಆದಾಯವನ್ನು ಗಳಿಸಬಹುದು.

Post Office Scheme Monthly Income Scheme: ಅಂಚೆ ಕಚೇರಿ (Post Office) ನಲ್ಲಿ ಹೂಡಿಕೆ ಮಾಡುವ ಕುರಿತು ಕೆಲವರಿಗೆ ಮಾಹಿತಿಯ ಕೊರತೆ ಇರುತ್ತದೆ.  ಅಂಚೆ ಕಚೇರಿ ಯೋಜನೆ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಇದರೊಂದಿಗೆ ಇದು ತುಂಬಾ ಸುರಕ್ಷಿತವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಹಣವನ್ನ ಹೂಡಿಕೆಮ್ ಮಾಡಲು ಬಯಸುತ್ತಿದ್ದು ಹಣವನ್ನ ಹೂಡಿಕೆ ಮಾಡಲು ಅಂಚೆ ಕಚೇರಿ ಈಗ ಬಹಳ ಉತ್ತಮವಾದ ವೇದಿಕೆಯಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ನಿಮಗೆ  ಮನೆಯಲ್ಲಿ ಕುಳಿತು ಹಣ ಸಂಪಾದಿಸಬೇಕೆಂಬ ಬಯಕೆ ಇದ್ರೆ ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ. ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆ ಮಾಡುವ ಜನರು ಅಂಚೆ ಕಚೇರಿಯ ಈ ಯೋಜನೆಗಳ ಲಾಭವನ್ನ ಸಂಪೂರ್ಣವಾಗಿ ಪಡೆದುಕೊಳ್ಳಬಹುದಾಗಿದೆ.

Post office Monthly Income Scheme
Image Credit: Rightsofemployees

ಯಾವ ಯೋಜನೆಯಡಿ ಖಾತೆ ತೆರೆಯಬೇಕು 

Post Office ಮಾಸಿಕ ಯೋಜನೆಯಡಿ ಗಂಡ ಹಾಗು ಹೆಂಡತಿ ಅಂಚೆ ಕಚೇರಿಯಲ್ಲಿ ಜಂಟಿ ಖಾತೆಯನ್ನು ತೆರೆಯಬೇಕಾಗುತ್ತದೆ (Post Office Joint Account). ಖಾತೆಯನ್ನು ತೆರೆದ ನಂತರ, ನೀವು ಬಡ್ಡಿಯಿಂದ ಮಾತ್ರ ಪ್ರತಿ ತಿಂಗಳು ಉತ್ತಮ ಆದಾಯವನ್ನು ಪಡೆಯುತ್ತೀರಿ. ಪೋಸ್ಟ್ ಆಫೀಸ್ ಈ ಯೋಜನೆಯು ಪತಿ ಪತ್ನಿಯರಿಗೆ ಮಾಸಿಕ ಹಣವನ್ನ ಪಿಂಚಣಿ ರೂಪದಲ್ಲಿ ನೀಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.

ಇದರಲ್ಲಿ ಒಟ್ಟು ಹೂಡಿಕೆಯ ಮೊತ್ತದ ಮೇಲೆ  ಪ್ರತಿ ತಿಂಗಳು 9,250 ರೂಪಾಯಿ ಮೊತ್ತವನ್ನು ಪತಿ ಮತ್ತು ಪತ್ನಿ ಪ್ರತ್ಯೇಕವಾಗಿ ಪಡೆಯುತ್ತಾರೆ. ಈ ಯೋಜನೆಯಲ್ಲಿ ನೀವು ಏಕ ಮತ್ತು ಜಂಟಿ ಖಾತೆಗಳನ್ನು ತೆರೆಯಬಹುದು.

Join Nadunudi News WhatsApp Group

Post office Monthly Income Scheme
Image Credit: Naidunia

ಅಂಚೆ ಕಛೇರಿಯ ಮಾಸಿಕ ಆದಾಯ ಯೋಜನೆಯಡಿ ಹೊಡಿಕೆಯ ಕ್ರಮಗಳು ಹೀಗಿದೆ 

ಈ ಯೋಜನೆಯಡಿ ಗಂಡ ಹಾಗು ಹೆಂಡತಿ ಇಬ್ಬರೂ  ಜಂಟಿ ಖಾತೆಯನ್ನು ತೆರೆದು ಅದರಲ್ಲಿ ರೂ 15 ಲಕ್ಷವನ್ನು ಠೇವಣಿ ಮಾಡಿದರೆ ನೀವು ಮಾಡಿದ ಈ ಹೂಡಿಕೆಯ ಮೇಲೆ 7.4 ಪ್ರತಿಶತದ ದರದಲ್ಲಿ ರೂ 1,11,000 ವಾರ್ಷಿಕ ಬಡ್ಡಿಯನ್ನು ಪಡೆಯಬಹುದು. ಇನ್ನು ಬಡ್ಡಿಯ ಹಣ ನೀವು ಹೂಡಿಕೆ ಮಾಡಿದ ಹಣದ ಮೇಲೆ ನಿರ್ಧಾರ ಆಗಿರುತ್ತದೆ.

ಈಗ ನೀವು ಅದನ್ನು 12 ತಿಂಗಳುಗಳಲ್ಲಿ ವಿತರಿಸಿದರೆ, ನೀವು ಪ್ರತಿ ತಿಂಗಳು 9250 ರೂ ಬಡ್ಡಿಯನ್ನು ಪಡೆಯುತ್ತೀರಿ. ಈ ಯೋಜನೆಯಲ್ಲಿ ಮೂರು ಜನರೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಖಾತೆಯಲ್ಲಿ ಪಡೆದ ಬಡ್ಡಿಯನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮಾನವಾಗಿ ನೀಡಲಾಗುತ್ತದೆ.

Monthly Income Scheme Latest Update
Image Credit: Fintrakk

ಮಾಸಿಕ ಆದಾಯ ಯೋಜನೆಯ ಅವಧಿ 
ಈ ಯೋಜನೆಯಡಿ ಠೇವಣಿ ಮಾಡಿದ ದಿನಾಂಕದಿಂದ ಒಂದು ವರ್ಷದ ನಂತರ ನೀವು ಹಣವನ್ನು ಹಿಂಪಡೆಯಬಹುದು. ಆದರೆ ನೀವು ಒಂದು ವರ್ಷದಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂಪಡೆದರೆ, ಠೇವಣಿ ಮೊತ್ತದಿಂದ 2 ಪ್ರತಿಶತವನ್ನು ಕಡಿತಗೊಳಿಸಿದ ನಂತರ ನೀವು ಹಣವನ್ನು ಮರಳಿ ಪಡೆಯುತ್ತೀರಿ.

ಅದೇ ಸಮಯದಲ್ಲಿ, ನೀವು 3 ವರ್ಷಗಳ ನಂತರ ಹಣವನ್ನು ಹಿಂಪಡೆದರೆ, 1 ಪ್ರತಿಶತವನ್ನು ಕಡಿತಗೊಳಿಸಿದ ನಂತರ ನೀವು ಹಣವನ್ನು ಪಡೆಯುತ್ತೀರಿ. ಅಂಚೆ ಕಛೇರಿಯ MIS ಯೋಜನೆಯ ಮುಕ್ತಾಯವು 5 ವರ್ಷಗಳ ನಂತರ ಆಗಿರುತ್ತದೆ.

Join Nadunudi News WhatsApp Group