Post Office National Saving Certificate Scheme: ಮುಂದಿನ ಭವಿಷ್ಯ ಉತ್ತಮವಾಗಿರಬೇಕು ಅಂದರೆ ಈಗಲೇ ಹಣ ಉಳಿತಾಯ ಮಾಡುವುದು ಬಹಳ ಅಗತ್ಯವಾಗಿದೆ. ಹಣ ಹೂಡಿಕೆ ಮಾಡಲು ಅನೇಕ ಆಯ್ಕೆಗಳು ಇದೆ, ಆದರೆ ಎಲ್ಲಿ ಸುರಕ್ಷತೆ ಇದೆಯೋ ಅಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ. ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಲು NSC ಯೋಜನೆ ಉತ್ತಮವಾಗಿದೆ. ಸಾಕಷ್ಟು ಜನರಿಗೆ ಇನ್ನೂ ಕೂಡ ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿರುವ NSC Scheme ಬಗ್ಗೆ ಮಾಹಿತಿ ತಿಳಿದಿಲ್ಲ. ಹಾಗಾದರೆ ನಾವೀಗ ಈ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಿ ಎಷ್ಟು ಲಾಭ ಪಡೆದುಕೊಳ್ಳಬಹುದು..? ಹಾಗೆ ಹಾಗೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆ, ದಾಖಲೆ ಮತ್ತು ಯೋಜನೆಯ ಲಾಭದ ಬಗ್ಗ ಸಂಪೂರ್ಣ ಮಾಹಿತಿ ಇಲ್ಲಿದೆ.
Post Office NSC Scheme
ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸುರಕ್ಷಿತವಾದ, ಸರ್ಕಾರಿ ಬೆಂಬಲಿತವಾದ, ಸ್ಥಿರ ಆದಾಯದ ಹೂಡಿಕೆ ಯೋಜನೆ ಆಗಿದ್ದು, ಇದು 2025-26 ನೇ ಹಣಕಾಸು ವರ್ಷಕ್ಕೆ ಪ್ರಸ್ತುತ 7.7% ವಾರ್ಷಿಕ ಬಡ್ಡಿದರವನ್ನು ನೀಡುತ್ತಿದೆ. 5 ವರ್ಷಗಳ ಲಾಕ್-ಇನ್ ಅವಧಿ, ಕನಿಷ್ಠ 1,000 ಹೂಡಿಕೆ (ಗರಿಷ್ಠವಿಲ್ಲ) ಮತ್ತು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆದುಕೊಂಡಿದೆ. ಸಣ್ಣ ಮತ್ತು ಮಧ್ಯಮ ಆದಾಯದ ಹೂಡಿಕೆದಾರರು ಭಾರತದಲ್ಲಿನ ಯಾವುದೇ ಅಂಚೆ ಕಚೇರಿ ಶಾಖೆಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ. ಇದರಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಮಾರುಕಟ್ಟೆ ಅಪಾಯವಿಲ್ಲ ಮತ್ತು ರಿಟರ್ನ್ ಖಚಿತವಾಗಿರುತ್ತದೆ.
ಹೂಡಿಕೆ ಲೆಕ್ಕಾಚಾರ
ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ 10 ಲಕ್ಷವನ್ನು 5 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಒಟ್ಟು 14.49 ಲಕ್ಷವನ್ನು ಮ್ಯಾಚುರಿಟಿ ಮೊತ್ತವಾಗಿ ಪಡೆದುಕೊಳ್ಳಬಹುದು. ಅಂದರೆ ಇಲ್ಲಿ 7.7% ವಾರ್ಷಿಕ ಬಡ್ಡಿದರದ ಮೂಲಕ 10 ಲಕ್ಷಕ್ಕೆ 4,49,034 ರೂಪಾಯಿ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ. ಇದು 5 ವರ್ಷದ ಯೋಜನೆ ಆಗಿದ್ದು, ವಿಶೇಷ ಸಂದರ್ಭದಲ್ಲಿ ಬಿಟ್ಟು, ಮಧ್ಯದಲ್ಲಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
| ವರ್ಷ | ಆರಂಭಿಕ ಮೊತ್ತ | ಬಡ್ಡಿ | ವರ್ಷಾಂತ್ಯ ಮೊತ್ತ |
|---|---|---|---|
| 1 | ₹10,00,000 | ₹77,000 | ₹10,77,000 |
| 2 | ₹10,77,000 | ₹82,929 | ₹11,59,929 |
| 3 | ₹11,59,929 | ₹89,395 | ₹12,49,324 |
| 4 | ₹12,49,324 | ₹96,278 | ₹13,45,602 |
| 5 | ₹13,45,602 | ₹1,03,432 | ₹14,49,034 |
ಒಟ್ಟು ಮೆಚ್ಯೂರಿಟಿ: ₹14,49,034 | ಒಟ್ಟು ಬಡ್ಡಿ: ₹4,49,034
ಯೋಜನೆಯ ಅರ್ಹತೆ
* ಭಾರತದ ನಾಗರಿಕರು ಮಾತ್ರ ಖಾತೆ ತೆರೆಯಬಹುದಾಗಿದೆ
* ವಯಸ್ಸಿನ ಮಿತಿ ಇಲ್ಲ
* ಅಪ್ರಾಪ್ತರ ಖಾತೆಯನ್ನು 18 ವರ್ಷದ ತನಕ ಪೋಷಕರು ನಿರ್ವಹಿಸಬೇಕು
* ಇಬ್ಬರು ಜಂಟಿಯಾಗಿ ಖಾತೆಯನ್ನು ತೆರೆಯಬಹುದಾಗಿದೆ
ಖಾತೆ ತೆರೆಯಲು ಬೇಕಾದ ಅಗತ್ಯ ದಾಖಲೆ
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಪಾಸ್ ಪೋರ್ಟ್
* ಮತದಾರರ ಗುರುತಿನ ಚೀಟಿ
* ಚಾಲನಾ ಪರವಾನಗಿ
* ಯುಟಿಲಿಟಿ ಬಿಲ್ ಗಳು – ವಿದ್ಯುತ್, ದೂರವಾಣಿ, ನೀರಿನ ಬಿಲ್, etc
* ಭಾವಚಿತ್ರ
ಯೋಜನೆಯ ಪ್ರಯೋಜನ
* ಸರ್ಕಾರೀ ಬೆಂಬಲಿತ ಯೋಜನೆ ಆಗಿದೆ
* ಹೂಡಿಕೆ ಮಾಡಿದ ಮೊತ್ತಕ್ಕೆ ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ 1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ.
* ಆಕರ್ಷಕ ಮತ್ತು ಸ್ಥಿರ ಬಡ್ಡಿ ದರ
* ಗರಿಷ್ಠ ಹೂಡಿಕೆ ಮಿತಿ ಇಲ್ಲ
* NSC ಪ್ರಮಾಣ ಪತ್ರಗಳನ್ನು ಬಳಸಿಕೊಂಡು ಹೆಚ್ಚಿನ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳಿಂದ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

