Post Office: ಅಂಚೆ ಕಚೇರಿಯಲ್ಲಿ 12500 ರೂ ಹೂಡಿಕೆ ಮಾಡಿದರೆ ಸಿಗಲಿದೆ 1.03 ಕೋಟಿ, ಆಗಬಹುದು ಕೋಟ್ಯಾಧಿಪತಿ.
ಪೋಸ್ಟ್ ಆಫೀಸ್ ನಲ್ಲಿ PPF ಯೋಜನೆಯ ಅಡಿಯಲ್ಲಿ ಹಣವನ್ನ ಹೂಡಿಕೆ ಮಾಡಿದರೆ ಸಾಕಷ್ಟು ದೊಡ್ಡ ಮೊತ್ತದ ಲಾಭವನ್ನ ಪಡೆದುಕೊಳ್ಳಬಹುದು.
Post Office PPF Account Benefits: ಸಾಕಷ್ಟು ಜನರು ಅಂಚೆ ಕಚೇರಿ (Post Office) ಯ ಯೋಜನೆಯಿಂದ ಲಾಭವನ್ನು ಪಡೆಯುತ್ತಿದ್ದಾರೆ. ಅಂಚೆ ಕಚೇರಿಯಲ್ಲಿ ಈಗಾಗಲೇ ಸಾಕಷ್ಟು ಯೋಜನೆ ಜಾರಿಗೆ ಬಂದಿದೆ.
ನೀವು ಉಳಿತಾಯ ರೂಪದಲ್ಲಿ ಎಲ್ಲೊ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯು ಅತ್ತ್ಯುತ್ತಮ ಆಯ್ಕೆಯಾಗಿದೆ. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯು ಹೂಡಿಕೆಯ ಮಾರುಕಟ್ಟೆಯ ಅಪಾಯಗಳಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಪೋಸ್ಟ್ ಆಫೀಸ್ PPF ಯೋಜನೆ
ಪೋಸ್ಟ್ ಆಫೀಸ್ ನ PPF ನಲ್ಲಿ ಹೂಡಿಕೆ ಮಾಡಿದ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಈ ಯೋಜನೆಯ ಬಡ್ಡಿದರಗಳನ್ನು ಸರ್ಕಾರವು ನಿಗದಿಪಡಿಸುತ್ತದೆ. ಪ್ರಸ್ತುತ ಈ ಯೋಜನೆಯಲ್ಲಿ ಶೇಕಡಾ 7.1 ರಷ್ಟು ಬಡ್ಡಿ ನೀಡಲಾಗುತ್ತಿದೆ.
ಈ ಯೋಜನೆಯ ಬಡ್ಡಿ ದರವನ್ನು ಪ್ರತಿ ಮೂರೂ ತಿಂಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಇದರಲ್ಲಿ ಒಂದು ವರ್ಷದಲ್ಲಿ 1.50 ಲಕ್ಷ ರೂಪಾಯಿ ವರೆಗೆ ಠೇವಣಿ ಇಡಬಹುದಾಗಿದೆ. ಈ ಖಾತೆಯ ಮುಕ್ತಾಯವು 15 ವರ್ಷಗಳು. ಆದರೆ ಮೆಚ್ಯುರಿಟಿ ನಂತರ ಅದನ್ನು 5 -5 ವರ್ಷಗಳ ಬ್ರಾಕೆಟ್ ನಲ್ಲಿ ವಿಸ್ತರಿಸುವ ಸೌಲಭ್ಯವು ಇದೆ.
ಅಂಚೆ ಕಚೇರಿಯ PPF ಯೋಜನೆಯ ಪ್ರಯೋಜನ
ಅಂಚೆ ಕಚೇರಿಯ PPF ಖಾತೆಯಲ್ಲಿ ನೀವು 12,500 ರೂಪಾಯಿಗಳನ್ನು ಹೂಡಿಕೆ ಮಾಡಿ 15 ವರ್ಷಗಳ ವರೆಗೆ ಇರಿಸಿದರೆ, ನೀವು ಒಟ್ಟು 40.68 ಲಕ್ಷ ರೂಪಾಯಿ ಪಡೆಯಬಹುದು. ಇದರಲ್ಲಿ ನಿಮ್ಮ ಒಟ್ಟು ಹೂಡಿಕೆ ರೂಪಾಯಿ 22.50 ಲಕ್ಷದವರೆಗೆ ಇರುತ್ತದೆ ಮತ್ತು ಬಡ್ಡಿಯ ರೂಪದಲ್ಲಿ ಗಳಿಕೆಯೂ 18.18 ರೂಪಾಯಿ.
ನೀವು ಕೋಟ್ಯಂತರ ರೂಪಾಯಿ ಗಳಿಸುವ ಆಲೋಚನೆ ಇದ್ದರೆ 15 ವರ್ಷಗಳ ನಂತರ ನೀವು 5-5 ವರ್ಷ ಹೆಚ್ಚು ಹೂಡಿಕೆ ಮಾಡಬೇಕು. ಅದರ ನಂತರ ನಿಮ್ಮ ಹೂಡಿಕೆಯ ಸಮಯ 25 ವರ್ಷಗಳು ಆಗಿರುತ್ತದೆ. ಈ ಮೂಲಕ ಒಟ್ಟು ಠೇವಣಿ ಮೊತ್ತ 1.03 ಕೋಟಿ ರೂ. ಇದರಲ್ಲಿ ಒಟ್ಟು 37.50 ಲಕ್ಷ ರೂ. ಈ ಅವಧಿಯಲ್ಲಿ ಬಡ್ಡಿ ರೂಪದಲ್ಲಿ 65.58 ಲಕ್ಷ ರೂ ಆಗಿರುತ್ತದೆ.