Post India Plans: ಕೇವಲ 5000 ರೂ ಹೂಡಿಕೆ ಮಾಡಿದರೆ ಸಿಗಲಿದೆ 8.45 ಲಕ್ಷ ರೂ, ಪೋಸ್ಟ್ ಆಫೀಸ್ ಈ ಯೋಜನೆಗೆ ಸಕತ್ ಡಿಮ್ಯಾಂಡ್.
5000 ಹೂಡಿಕೆಯಲ್ಲಿ 9 ಲಕ್ಷ ಲಾಭ ಪಡೆಯುವ ಪೋಸ್ಟ್ ಆಫೀಸ್ ನ ಯೋಜನೆ.
Post office RD Account: Indian Post Office ಜನಸಾಮಾನ್ಯರಿಗೆ ವಿವಿಧ ಹೂಡಿಕೆಯ ಯೋಜನೆಯನ್ನು ನೀಡುತ್ತಿದೆ. ಇನ್ನು Post Office ಜನರಿಗಾಗಿ RD ಖಾತೆಯನ್ನು ನೀಡುತ್ತಿರುವುದು ಎಲ್ಲರಿಗು ತಿಳಿದಿರುವ ವಿಚಾರ.
Post Office ನ RD ಖಾತೆಯಲ್ಲಿನ ಹೂಡಿಕೆಯು ಜನರಿಗೆ ಒಂದು ರೀತಿಯಲ್ಲಿ ಹೆಚ್ಚಿನ ಲಾಭವನ್ನು ನೀಡುತ್ತದೆ ಎನ್ನಬಹುದು. ಇನ್ನು ಅಂಚೆ ಕಚೇರಿಯಲ್ಲಿ ನಿಮಗಾಗಿ ಕೇವಲ 5000 ರೂ ಹೂಡಿಕೆಯಲ್ಲಿ 9 ಲಕ್ಷ ಲಾಭ ಪಡೆಯುವಂತ ಹೂಡಿಕೆಯ ವಿಧಾನವಿದೆ. ಅದು ಯಾವ ರೀತಿಯ ಹೂಡಿಕೆ ಎಂದು ಯೋಚಿಸುತ್ತಿದ್ದೀರಾ? ನಿಮ್ಮ ಪ್ರಶ್ನೆ ಇಲ್ಲಿದೆ ಉತ್ತರ.
Post office RD Account
ಪೋಸ್ಟ್ ನ RD ಖಾತೆ ಅಂದರೆ ಮರುಕಳಿಸುವ ಠೇವಣಿ ಯೋಜನೆಯಲ್ಲಿನ ಹೂಡಿಕೆಯು ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡುತ್ತದೆ ಎಂದರೆ ತಪ್ಪಾಗಲಾರದು. ಮರುಕಳಿಸುವ ಠೇವಣಿ (RD) ಬಡ್ಡಿಯು ಈಗ ಸ್ಥಿರ ಆದಾಯ ಯೋಜನೆಯಂತೆ ಲಭ್ಯವಿದೆ. ಮರುಕಳಿಸುವ ಠೇವಣಿ ಯೋಜನೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮೊದಲಿಗಿಂತ ಹೆಚ್ಚು ಲಾಭದಾಯಕವಾಗಿದೆ. ಸರ್ಕಾರವು ಈ ಯೋಜನೆಯ ಬಡ್ಡಿದರವನ್ನು ವಾರ್ಷಿಕ 6.2 ಪ್ರತಿಶತದಿಂದ ವಾರ್ಷಿಕ 6.5 ಪ್ರತಿಶತಕ್ಕೆ ಹೆಚ್ಚಿಸಿದೆ.
ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೆಚ್ಚು ಲಾಭವಿದೆ
ಇನ್ನು ಅಂಚೆ ಇಲಾಖೆ RD ಮತ್ತು FD ಖಾತೆ ಹೂಡಿಕೆಯನ್ನು ನೀಡುತ್ತದೆ. ಈ ಎರಡು ಹೂಡಿಕೆಯು ಭಿನ್ನವಾಗಿದೆ. FD ಯೋಜನೆಯಲ್ಲಿ ಏಕರೂಪದ ಹಣವನ್ನು ಹೂಡಿಕೆ ಮಾಡಬೇಕು. RD ನಲ್ಲಿ ನೀವು SIP ನಂತಹ ವಿವಿಧ ಕಂತುಗಳಲ್ಲಿ ಮಾಸಿಕ ಆಧಾರದ ಮೇಲೆ ಹೂಡಿಕೆ ಮಾಡಬಹುದು.
ಇದರಲ್ಲಿ ತ್ರೈಮಾಸಿಕ ಆಧಾರದ ಮೇಲೆ ಒಟ್ಟುಗೂಡಿಸುವುದರ ಮೂಲಕ ನಿಮ್ಮ ಖಾತೆಗೆ ಬಡ್ಡಿಯನ್ನು ಸೇರಿಸಲಾಗುತ್ತದೆ. RD ಯಲ್ಲಿ ಕನಿಷ್ಠ 100 ರೂ. ಗಳೊಂದಿಗೆ ಖಾತೆಯನ್ನು ತೆರೆಯುವುದು ಅವಶ್ಯಕ. ನೀವು ಪ್ರತಿ ತಿಂಗಳು ಯಾವುದೇ ಗರಿಷ್ಠ ಮೊತ್ತವನ್ನು ಠೇವಣಿ ಮಾಡಬಹುದು. 10 ವರ್ಷ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ಪೋಸ್ಟ್ ಆಫೀಸ್ ನ RD ಖಾತೆಯನ್ನು ತೆರೆಯಲು ಅರ್ಹರಾಗಿರುತ್ತಾರೆ.
ಕೇವಲ 5000 ಹೂಡಿಕೆ ಮಾಡಿದರೆ ಸಿಗಲಿದೆ 8.45 ಲಕ್ಷ ರೂ
RD ಖಾತೆಯ ಮುಕ್ತಾಯ ಅವಧಿಯು 5 ವರ್ಷಗಳು ಹಾಗೆಯೆ ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ಇದಕ್ಕಾಗಿ ಮೆಚ್ಯೂರಿಟಿಗೂ ಮುನ್ನ ಅಂಚೆ ಕಚೇರಿಗೆ ಮಾಹಿತಿ ನೀಡಬೇಕು. ಖಾತೆ ತೆರೆದ 3 ವರ್ಷಗಳ ನಂತರ ಖಾತೆಯನ್ನು ಅಕಾಲಿಕವಾಗಿ ಮುಚ್ಚುವುದು ಸಂಭವಿಸಬಹುದು.
ಆದರೆ ಉಳಿತಾಯ ಖಾತೆಯಲ್ಲಿ ಪಡೆದ ಬಡ್ಡಿಯ ಪ್ರಕಾರ ಮಾತ್ರ ನೀವು ಬಡ್ಡಿಯನ್ನು ಪಡೆಯುತ್ತೀರಿ. ನೀವು RD ಖಾತೆಯಲ್ಲಿ ಮಾಸಿಕವಾಗಿ 5000 ರೂ. ಗಳನ್ನೂ 10 ವರ್ಷದವರೆಗೆ 6,00,000 ಹೂಡಿಕೆ ಮಾಡಿದರೆ, ಪೋಸ್ಟ್ ಆಫೀಸ್ ನೀಡುವ 6.5 % ಬಡ್ಡಿದರದ ಮೂಲಕ ಮೆಚ್ಯುರಿಟಿ ಅವಧಿಯ ನಂತರ ಒಟ್ಟಾಗಿ 8,44,940 ರೂ. ಗಳ ಮೊತ್ತವನ್ನು ಪಡೆಯಬಹುದು. ಈ ಹೂಡಿಕೆಯಲ್ಲಿ ನೀವು ಒಟ್ಟು ರೂ. 2,44,940 ರೂ. ಗಳ ಬಡ್ಡಿಯ ಲಾಭವನ್ನು ಪಡೆಯಬಹುದು.