RD Interest: RD ಖಾತೆ ಹೊಂದಿರುವವರಿಗೆ ಕೇಂದ್ರದಿಂದ ದಿವಾಲಿ ಗಿಫ್ಟ್, ಬಡ್ಡಿದರದಲ್ಲಿ ಮತ್ತೆ ಇಷ್ಟು ಏರಿಕೆ.
RD ಖಾತೆಯ ಬಡ್ಡಿ ದರದಲ್ಲಿ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ.
Post Office RD Interest Hike: ಇನ್ನು Post Office ದೇಶದ ಮಹಿಳೆಯರಿಗಾಗಿ, ಹಿರಿಯ ನಾಗರೀಕರಿಗಾಗಿ ಕೂಡ ವಿವಿಧ ರೀತಿಯ ಹೂಡಿಕೆಯ ಯೋಜನೆಗಳನ್ನು ಪರಿಚಯಿಸಿದೆ. ಉತ್ತಮ ಆದಾಯವನ್ನು ನೀಡಲು ಅಂಚೆ ಇಲಾಖೆಯ ಯೋಜನೆಗಳು ಸಹಾಯವಾಗುತ್ತದೆ. ಅಂಚೆ ಇಲಾಖೆಯು ತನ್ನ ಉಳಿತಾಯ ಯೋಜನೆಗಳಲ್ಲಿ ವಿವಿಧ ಸೌಲಭ್ಯವನ್ನು ನೀಡಲು ಮುಂದಾಗಿದೆ. ಪೋಸ್ಟ್ ಆಫೀಸ್ ನಲ್ಲಿ ಇರುವ FD ಹಾಗೂ RD ಖಾತೆಯಲ್ಲಿನ ಹೂಡಿಕೆ ಜನರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ ಎನ್ನಬಹುದು.
RD ಖಾತೆ ಹೊಂದಿರುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್
ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಹಣವನ್ನು ಹೂಡಿಕೆ ನೀವು ದೊಡ್ಡ ಮೊತ್ತದ ಲಾಭವನ್ನು ಪಡೆದುಕೊಳ್ಳಬಹುದು. ಅಂಚೆ ಇಲಾಖೆಯು RD ಖಾತೆಯನ್ನು ನೀಡುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸದ್ಯ ಕೇಂದ್ರ ಸರ್ಕಾರ ಅಂಚೆ ಇಲಾಖೆಯ RD ಖಾತೆಯಲ್ಲಿ ಹೂಡಿಕೆ ಮಾಡಿದವರಿಗೆ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಸರ್ಕಾರ RD ಖಾತೆಯ ಬಡ್ಡಿದರವನ್ನು ಹೆಚ್ಚಿಸುವ ಮೂಲಕ ಜನರಿಗೆ ಇನ್ನಷು ಖುಷಿ ನೀಡಿದೆ.
ಅಂಚೆ ಇಲಾಖೆಯ RD ಖಾತೆಯ ಬಡ್ಡಿದರ ಹೆಚ್ಚಿಸಿದ ಕೇಂದ್ರ
ಈ ಹಿಂದೆ ಐದು ವರ್ಷಗಳ ಕಾಲ ಆರ್ ಡಿ ಯಲ್ಲಿ ಹಣ ಉಳಿಸಿದವರಿಗೆ ಅಂಚೆ ಕಛೇರಿಯಲ್ಲಿ ಶೇ. 6.5 ಬಡ್ಡಿ ದರವನ್ನು ಸರ್ಕಾರ ನೀಡುತ್ತಿತ್ತು. ಆದರೆ ಈಗ ಸರ್ಕಾರವು ಐದು ವರ್ಷಗಳವರೆಗೆ ನಿಮ್ಮ ಉಳಿತಾಯದ ಮೇಲೆ 6.7 ಶೇಕಡಾ ಬಡ್ಡಿಯನ್ನು ನೀಡುತ್ತದೆ. ಮುಂದಿನ ಐದು ವರ್ಷಗಳವರೆಗೆ ನೀವು ಪ್ರತಿ ತಿಂಗಳು 2000 ರೂಪಾಯಿಗಳನ್ನು ಉಳಿಸುತ್ತೀರಿ. ಅಂದರೆ ನೀವು ವರ್ಷಕ್ಕೆ 24 ಸಾವಿರ ರೂಪಾಯಿಗಳನ್ನು ಮತ್ತು ಐದು ವರ್ಷಕ್ಕೆ 1.2 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲು ಆಯ್ಕೆ ಮಾಡಿಕೊಂಡಿದ್ದೀರಿ.
ಹೂಡಿಕೆಯ ಮೇಲೆ ಲಾಭದ ಲೆಕ್ಕಾಚಾರ ಹೀಗಿದೆ
ಇನ್ನು ಸರ್ಕಾರ ಈ ಹಣದ ಮೇಲೆ ಶೇಕಡಾ 6.7 ಬಡ್ಡಿಯನ್ನು ನೀಡುವುದರಿಂದ, ನೀವು ಹೆಚ್ಚುವರಿ 22,732 ರೂ. ಗಳನ್ನು ಪಡೆಯುತ್ತೀರಿ. ಈ ಹೆಚ್ಚುವರಿ ಬಡ್ಡಿಯಿಂದಾಗಿ ಐದು ವರ್ಷಗಳ ನಂತರ ನೀವು 1,42,732 ರೂ. ಪಡೆಯಲು ಸಾಧ್ಯವಾಗುತ್ತದೆ. ನಿಮಗೆ ಹೆಚ್ಚಿನ ಲಾಭ ಬೇಕೆಂದೆನಿಸಿದರೆ ನೀವು 2000 ಹೂಡಿಕೆಯ ಬದಲಾಗಿ 3000 ಹೂಡಿಕೆಯನ್ನು ಮಾಡಿ. 3000 ರೂ. ಗಳನ್ನೂ ಪ್ರತಿ ತಿಂಗಳು ಹೂಡಿಕೆ ಮಾಡಿ ಐದು ವರ್ಷದಲ್ಲಿ ನಿಮ್ಮ ಹೂಡಿಕೆ 1.80 ಲಕ್ಷ ಆಗುತ್ತದೆ. ನೀವು ಈ ಹೂಡಿಕೆಯಲ್ಲಿ 2,14,097 ರೂ. ಗಳ ಬಡ್ಡಿಯನ್ನು ಪಡೆಯಲು ಸಾಧ್ಯವಾಗುತ್ತದೆ.