ಹಣವನ್ನ ಠೇವಣಿ ಮಾಡಲು ಮತ್ತು ಹೂಡಿಕೆ ಮಾಡಲು ಅಂಚೆ ಕಚೇರಿ ಜನರಿಗೆ ಒಂದು ಉತ್ತಮವಾದ ವೇದಿಕೆ ಆಗಿದೆ ಎಂದು ಹೇಳಬಹುದು. ಹೌದು ಅಂಚೆ ಕಚೇರಿ ಜನರಿಗೆ ಅದೆಷ್ಟೋ ವರ್ಷಗಳಿಂದ ಬಹಳ ಒಳ್ಳೆಯ ಸೇವೆಯನ್ನ ಒದಗಿಸುತ್ತ ಬಂದಿದೆ ಮತ್ತು ಈ ಕಾರಣಗಳಿಂದ ಹೆಚ್ಚಿನ ಜನರು ಪೋಸ್ಟ್ ಆಫೀಸ್ ನಲ್ಲಿ ತಮ್ಮ ಖಾತೆಯನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅದೆಷ್ಟೋ ವರ್ಷಗಳಿಂದ ಜನರಿಗೆ ಬಹಳ ಒಳ್ಳೆಯ ಸೇವೆಯನ್ನ ಒದಗಿಸಿಕೊಂಡು ಬಂದಿರುವ ಪೋಸ್ಟ್ ಆಫೀಸ್ ಈಗ ಜನರಿಗೆ ದೊಡ್ಡ ಶಾಕ್ ನೀಡಲು ಮುಂದಾಗಿದೆ ಎಂದು ಹೇಳಬಹುದು. ಹೌದು ಹೊಸ ನಿಯಮವನ್ನ ಭಾರತೀಯ ಅಂಚೆ ಇಲಾಖೆ ಜಾರಿಗೆ ತಂದಿದ್ದು ಈ ಹೊಸ ನಿಯಮ ಹೊಸ ವರ್ಷದಿಂದ ಜಾರಿಗೆ ತರಲಿದೆ ಎಂದು ಹೇಳಬಹುದು.
ಅಂಚೆ ಕಚೇರಿಯಲ್ಲಿ ಯಾವುದೇ ರೀತಿಯ ಖಾತೆ ಹೊಂದಿರುವರಿಗೆ ಈ ಹೊಸ ನಿಯಮ ಅನ್ವಯ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆಂಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೊಸ ನಿಮಯಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ,. ಹೌದು ಸದ್ಯ ಭಾರತ ಹಣದುಬ್ಬರದ ಸಮಸ್ಯೆಯನ್ನ ಅನುಭವಿಸುತ್ತಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ. ಹಣದುಬ್ಬರದ ಕಾರಣ ದೇಶದಲ್ಲಿ ಜನರು ಬಳಕೆ ಮಾಡುವ ಪ್ರತಿಯೊಂದು ವಸ್ತು ಮತ್ತು ಸೇವೆಯ ಬೆಲೆ ಕೂಡ ಏರಿಕೆ ಆಗಿದೆ ಎಂದು ಹೇಳಬಹುದು.
ಈ ಹಣದುಬ್ಬರದ ಕಾರಣ ಹೊಸ ವರ್ಷಾಯಿಂದ ಅಂಚೆ ಕಚೇರಿಯ ವ್ಯವಹಾರ ಕೂಡ ದುಬಾರಿ ಆಗಲಿದೆ. ಸ್ನೇಹಿತರೆ ನೀವು ಭಾರತೀಯ ಅಂಚೆಯಲ್ಲಿ ಮೂಲ ಉಳಿತಾಯ, ಉಳಿತಾಯ ಅಥವಾ ಚಾಲ್ತಿ ಖಾತೆಯನ್ನು ಹೊಂದಿದ್ದರೆ ನೀವು ಜನವರಿ 1 ನೇ ತಾರೀಕಿನಿಂದ ಹಣವನ್ನ ಠೇವಣಿ ಮಾಡಲು ಅಥವಾ ಹಣವನ್ನ ಹಿಂಪಡೆಯಲು ಶುಲ್ಕವನ್ನ ಪಾವತಿ ಮಾಡಬೇಕು. ಅಂಚೆ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಅಂಚೆ ಕಚೇರಿಯಲ್ಲಿ ಮೂಲ ಉಳಿತಾಯ ಖಾತೆ ಹೊಂದಿದವರು ತಿಂಗಳಿಗೆ ನಾಲ್ಕು ಬಾರಿ ಮಾತ್ರ ಹಣವನ್ನ ಉಚಿತವಾಗಿ ಹಿಂಪಡೆಯಬಹುದು ಮತ್ತು ನಾಲ್ಕು ಬಾರಿ ಹಣವನ್ನ ಉಚಿತವಾಗಿ ಹಿಂಪಡೆದ ನಂತರ ನೀವು ಪ್ರತಿ ಹಿಂಪಡೆಯುವಿಕೆಗೆ ಶುಲ್ಕವನ್ನ ಪಾವತಿ ಮಾಡಬೇಕು.
ಇನ್ನು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಯಿಂದ ಪ್ರತಿ ತಿಂಗಳು 25 ಸಾವಿರ ರೂಪಾಯಿಗಳವರೆಗೆ ಹಿಂಪಡೆಯಬಹುದು ಮತ್ತು ಇದಕ್ಕೆ ಯಾವುದೇ ಶುಲ್ಕವಿಲ್ಲ, ಆದರೆ ಈ ಮಿತಿಯನ್ನ ದಾಟಿದ ನಂತರ ನೀವು ಪ್ರತಿ ವಹಿವಾಟಿಗೆ 25 ರೂಪಾಯಿ ಶುಲ್ಕದ ಜೊತೆಗೆ GST ಕೂಡ ಪಾವತಿ ಮಾಡಬೇಕು. ಇನ್ನು ಅದೇ ರೀತಿಯಲ್ಲಿ ಏಟಿಎಂ ಬಳಸುವಿಕೆ, RTGS, NEFT ಮತ್ತು ಇತರೆ ಆನ್ಲೈನ್ ವ್ಯವಹಾರವನ್ನ ಕೂಡ ಅವಧಿಗಿಂತ ಹೆಚ್ಚಿನ ಬಾರಿ ಮಾಡಿದರೆ ಶುಲ್ಕವನ ಅವಶ್ಯಕವಾಗಿ ಪಾವತಿ ಮಾಡಬೇಕು ಎಂದು ಇಲಾಖೆ ಹೇಳಿದೆ.
ಇನ್ನು ಇನ್ನೊಂದು ಶಾಕಿಂಗ್ ಸುದ್ದಿ ಏನು ಅಂದರೆ, ಇನ್ನುಮುಂದೆ ಅಂಚೆ ಕಚೇರಿಯಲ್ಲಿ ಹಣವನ್ನ ಜಮಾ ಮಾಡಲು ಕೂಡ ಶುಲ್ಕವನ್ನ ಪಾವತಿ ಮಾಡಬೇಕು. ಹೌದು ಮುಂದಿನ ವರ್ಷದಿಂದ ಪ್ರತಿ ತಿಂಗಳು 10000 ರೂಪಾಯಿಯನ್ನ ಮಾತ್ರ ಜಮಾ ಮಾಡಬಹುದು ಮತ್ತು ಇದಕ್ಕಿಂತ ಜಾಸ್ತಿ ಹಣವನ್ನ ನೀವು ಜಮಾ ಮಾಡಿದರೆ ಪ್ರತಿಬಾರಿ 25 ರೂಪಾಯಿಯ ಜೊತೆಗೆ GST ಶುಲ್ಕವನ್ನ ಪಾವತಿ ಮಾಡಬೇಕು ಎಂದು ಅಂಚೆ ಇಲಾಖೆ ಹೇಳಿದೆ. ಸ್ನೇಹಿತರೆ ಅಂಚೆ ಇಲಾಖೆಯ ಈ ಹೊಸ ನಿಯಮದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.