Post Office: ಆನ್ಲೈನ್ ನಲ್ಲಿ ಹೂಡಿಕೆ ಮಾಡುವವರಿಗೆ ಪೋಸ್ಟ್ ಆಫೀಸ್ ನಿಂದ ಹೊಸ ಸೇವೆ ಆರಂಭ, ಇಂದೇ ಹೂಡಿಕೆ ಮಾಡಿ.
ಪೋಸ್ಟ್ ಆಫೀಸ್ ನ ಈ ಯೋಜನೆಗಳಿಗೆ ಆನ್ಲೈನ್ ಮೂಲಕ ಹೂಡಿಕೆ ಮಾಡಬಹುದಾಗಿದೆ.
Post Office Saving Account Online Investment: Indian Post Office ಈಗಾಗಲೇ ಜನಸಾಮಾನ್ಯರಿಗಾಗಿ ವಿವಿಧ ಯೋಜನೆಗಳನ್ನು ಪರಿಚಯಿಸುತ್ತಿದೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸಲು ಪೋಸ್ಟ್ ಆಫೀಸ್ ನಲ್ಲಿ ಸಾಕಷ್ಟು ಯೋಜನೆಗಳಿವೆ.
ಇನ್ನು Post Office ದೇಶದ ಮಹಿಳೆಯರಿಗಾಗಿ, ಹಿರಿಯ ನಾಗರೀಕರಿಗಾಗಿ ಕೂಡ ವಿವಿಧ ರೀತಿಯ ಹೂಡಿಕೆಯ ಯೋಜನೆಗಳನ್ನು ಪರಿಚಯಿಸಿದೆ. ಉತ್ತಮ ಆದಾಯವನ್ನು ನೀಡಲು ಅಂಚೆ ಇಲಾಖೆಯ ಯೋಜನೆಗಳು ಸಹಾಯವಾಗುತ್ತದೆ.
ಹಿರಿಯನಾಗರಿಗೆ ಅಂಚೆ ಇಲಾಖೆಯಿಂದ ಹೊಸ ಸೌಲಭ್ಯ
ಅಂಚೆ ಇಲಾಖೆಯು ತನ್ನ ಉಳಿತಾಯ ಯೋಜನೆಗಳಲ್ಲಿ ವಿವಿಧ ಸೌಲಭ್ಯವನ್ನು ನೀಡಲು ಮುಂದಾಗಿದೆ. ಇನ್ನು ಅಂಚೆ ಇಲಾಖೆಯ ಕೆಲವು ಯೋಜನೆಗಳಿಗೆ ನೀವು ಆನ್ಲೈನ್ ನಲ್ಲಿ ಹೂಡಿಕೆಯನ್ನು ಪ್ರಾರಂಭಿಸಬಹುದು. ಈ ಬಗ್ಗೆ ನಿಮಗೆ ತಿಳಿದಿದೆಯೇ..? ಹೌದು, ಉಳಿತಾಯ ಯೋಜನೆ ಮಾಸಿಕ ಆದಾಯ ಯೋಜನೆ ಸೇರಿದಂತೆ ಇನ್ನಿತರ ಅನೇಕ ಯೋಜನೆಗಳಲ್ಲಿ ನೀವು ಆನ್ಲೈನ್ ನಲ್ಲಿ ಹೂಡಿಕೆ ಮಾಡುವ ಅವಕಾಶವಿದೆ. ಈ ಬಗ್ಗರ್ ಸಂಪೂರ್ಣ ಮಾಹಿತಿ ಇಲ್ಲಿದೆ.
ಪೋಸ್ಟ್ ಆಫೀಸ್ ನ ಈ ಯೋಜನೆಗಳಿಗೆ ಆನ್ಲೈನ್ ಹೂಡಿಕೆ ಸಾಧ್ಯ
ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ, ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪಾತ್ರ ಖಾತೆಗಳನ್ನು ಆನ್ಲೈನ್ ನಲ್ಲಿ ತೆರೆಯುವ ಸೌಲಭ್ಯವನ್ನು ಅಂಚೆ ಇಲಾಖೆ ನೀಡಿದೆ. Post Office Saving Account ನ Internet banking ವಿಭಾಗದಲ್ಲಿ, ಸಾಮಾನ್ಯ ಸೇವೆಗಳ ಆಯ್ಕೆಯಲ್ಲಿ ನೀವು ಆನ್ಲೈನ್ ಮೂಲಕ ಹೂಡಿಕೆಯನ್ನು ಮಾಡಬಹುದು.
ಆನ್ಲೈನ್ ಮೂಲಕ ಖಾತೆ ತೆರೆದು ಹೂಡಿಕೆ ಮಾಡುವುದು ಹೇಗೆ..?
*ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿ ಜನರಲ್ ಸರ್ವಿಸ್ ಟ್ಯಾಬ್ ಕ್ಲಿಕ್ ಮಾಡಿ, ಸೇವಾ ವಿನಂತಿ, ಹೊಸ ವಿನಂತಿ ಹಾಗೆಯೆ ಕೊನೆಯದಾಗಿ ಸರಿ ಮೇಲೆ ಕ್ಲಿಕ್ ಮಾಡಿ ಮುಂದವರೆಯಬೇಕು.
*ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮಾಸಿಕ ಆದಾಯ ಯೋಜನೆ, ಮತ್ತು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣ ಪಾತ್ರ ಖಾತೆಯಾ ಮೂರು ಆಯ್ಕೆಗಳಲ್ಲಿ ಒಂದನ್ನು ಕ್ಲಿಕ್ ಮಾಡಿ.
*ನಂತರ ಠೇವಣಿ ಮೊತ್ತವನ್ನು ನಮೂದಿಸಿ, ಅಂಚೆ ಕಚೇರಿಯ ಡೆಬಿಟ್ ಕತೆಯನ್ನು ಆಯ್ಕೆ ಮಾಡಬೇಕು. *ನಿಯಮ ಹಾಗೂ ಷರತ್ತುಗಳನ್ನು ಅಗ್ರಿ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ನಲ್ಲಿ ಸಲ್ಲಿಸಬಹುದು.
*ವಹಿವಾಟು ಪಾಸ್ ವಾರ್ಡ್ ಅನ್ನು ನಮೂದಿಸಿ, ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ಠೇವಣಿ ರಸೀದಿಯನ್ನು ಕೂಡ ನೀವು ಸುಲಭವಾಗಿ ಪಡೆಯಬಹುದು.