Post Office: ಅಂಚೆ ಕಚೇರಿಯಲ್ಲಿ ಖಾತೆ ಇದ್ದವರಿಗೆ ಇಂದಿನಿಂದ ಹೊಸ ನಿಯಮ, ಮೂರೂ ಹೊಸ ನಿಯಮ ಘೋಷಣೆ.
ಅಂಚೆ ಇಲಾಖೆ ತನ್ನ ಉಳಿತಾಯ ಯೋಜನೆಗಳಲ್ಲಿ ಮೂರು ಮುಖ್ಯ ಬದಲಾವಣೆಯನ್ನು ತಂದಿದೆ.
Post Office Saving Account Rule Change: ಜನಸಾಮಾನ್ಯರಿಗಾಗಿ ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳು ಸಾಕಷ್ಟಿವೆ. ಎಲ್ ಐಸಿ, ಅಂಚೆ ಕಚೇರಿ ಸೇರಿದಂತೆ ಸರ್ಕಾರದ ಅಡಿಯಲ್ಲಿ ಸಾಕಷ್ಟು ಯೋಜನೆಗಳಿವೆ. ಇನ್ನು ಹೂಡಿಕೆದಾರರು ತಮ್ಮ ಹೂಡಿಕೆಯ ಯೋಜನೆಗಳ ಬಗ್ಗೆ ಮಾಹಿತಿ ತಿಳಿಯುತ್ತಲೇ ಇರಬೇಕಾಗುತ್ತದೆ. ಏಕೆಂದರೆ ಇತ್ತೀಚಿಗೆ ಉಚಿತ ಯೋಜನೆಗಳ ನಿಯಮಗಳು ಬದಲಾಗುತ್ತಿದೆ.
ಹೂಡಿಕೆದಾರರ ಭದ್ರತೆಗಾಗಿ ಹೆಚ್ಚಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇದೀಗ ಭಾರತೀಯ ಅಂಚೆ ಇಲಾಖೆ ಉಳಿತಾಯ ಯೋಜನೆಗಳಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಅಂಚೆ ಇಲಾಖೆಯಲ್ಲಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದವರು ಈ ನಿಯಮದ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಅಂಚೆ ಇಲಾಖೆ ತನ್ನ ಉಳಿತಾಯ ಯೋಜನೆಗಳಲ್ಲಿ ಮೂರು ಮುಖ್ಯ ಬದಲಾವಣೆಯನ್ನು ತಂದಿದೆ.
ಅಂಚೆ ಇಲಾಖೆಯ ಉಳಿತಾಯ ಯೋಜನೆಗಳಲ್ಲಿ ಮುಖ್ಯ ಬದಲಾವಣೆ
ಅಂಚೆ ಇಲಾಖೆಯಲ್ಲಿನ ಉಳಿತಾಯ ಯೋಜನೆಯಲ್ಲಿನ ಹೂಡಿಕೆದಾರರಿಗೆ ಅಂಚೆ ಇಲಾಖೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಆರ್ಥಿಕ ವ್ಯವಹಾರಗಳ ಸಚಿವಾಲಯದ ಇ- ಗ್ಯಾಬೆಜ್ ಮೂಲಕ ಈ ಬದಲಾವಣೆಯನ್ನು ತರಲಾಗಿದೆ. 2023 ರ ಜುಲೈ 23 ರಂದು ಹೊಸ ನಿಯಮದ ಬಗ್ಗೆ ಘೋಷಣೆ ಹೊರಡಿಸಲಾಗಿದೆ. ಪೋಸ್ಟ್ ಆಫೀಸ್ ಸೇವಿಂಗ್ ಅಕೌಂಟ್ಸ್ ಸ್ಕಿಮ್ಸ್ ಅಡಿಯಲ್ಲಿ ಬದಲಾವಣೆಯನ್ನು ತರಲಾಗಿದೆ.
ಉಳಿತಾಯ ಖಾತೆಗಳಲ್ಲಿ ಈ ಮೂರು ನಿಯಮಗಳು ಬದಲಾಗಲಿವೆ
*ಖಾತೆದಾರರ ಸಂಖ್ಯೆಯಲ್ಲಿ ಬದಲಾವಣೆ
ಅಂಚೆ ಇಲಾಖೆಯು ಜಂಟಿ ಖಾತೆಯನ್ನು ತೆರೆಯಲು ಅವಕಾಶ ನೀಡಿತ್ತು ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಇದುವರೆಗೆ ಗರಿಷ್ಟ 2 ವಯಸ್ಕರು ಜಂಟಿ ಖಾತೆಯನ್ನು ಹೊಂದಬಹುದಿತ್ತು. ಆದರೆ ಇನ್ನುಮುಂದೆ ಮೂವರು ವಯಸ್ಕರು ಜಂಟಿ ಖಾತೆಯನ್ನು ಹೊಂದಬಹುದಾಗಿದೆ.
*ಖಾತೆಯಿಂದ ವಿತ್ ಡ್ರಾವಲ್ಸ್ ಬದಲಾವಣೆ
ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿ ಖಾತೆಯ ವಿತ್ ಡ್ರಾವಲ್ಸ್ ಫಾರ್ಮ್ 2 ಅನ್ನು ಫಾರ್ಮ್ 3 ಕ್ಕೆ ಬದಲಾಯಿಸಲಾಗಿದೆ. ಇನ್ನು 50 ರೂ. ಗಿಂತ ಮೇಲ್ಪಟ್ಟ ಹಣದ ವಿಥ್ ಡ್ರಾವಲ್ಸ್ ಗೆ ಈ ನಿಯಮ ಅನ್ವಯವಾಗಲಿದೆ.
*ಠೇವಣಿಗಳ ಬಡ್ಡಿದರದಲ್ಲಿ ಬದಲಾವಣೆ
ಅಂಚೆ ಇಲಾಖೆಯ ಉಳಿತಾಯ ಖಾತೆಯಲ್ಲಿನ ಠೇವಣಿಯ ಬಡ್ಡಿದರದಲ್ಲಿ ಬದಲಾವಣೆ ತರಲಾಗಿದೆ. ಉಳಿತಾಯ ಖಾತೆಯಲ್ಲಿನ ಹತ್ತನೇ ದಿನದ ಮುಕ್ತಾಯ ಮತ್ತು ತಿಂಗಳಿನ ಅಂತ್ಯಕ್ಕೆ ವಾರ್ಷಿಕ 4 % ಬಡ್ಡಿದರವನ್ನು ನೀಡಲು ಅನುಮತಿ ನೀಡಲಾಗಿದೆ.