Post Office Best 5 Saving Schemes: ಭಾರತೀಯರು ಉತ್ತಮ ಭವಿಷ್ಯಕ್ಕಾಗಿ ಹೆಚ್ಚು ಹೂಡಿಕೆಯ ಕಡೆ ಮುಖಮಾಡುತ್ತಿದ್ದಾರೆ. ಇದ್ದಕ್ಕಾಗಿಯೇ ಬ್ಯಾಂಕ್, ಪೋಸ್ಟ್ ಆಫೀಸ್, ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿ ಅನೇಕ ಹೂಡಿಕೆ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನೀವು ಕಷ್ಟಪಟ್ಟು ದುಡಿದು ಸಂಪಾದನೆ ಮಾಡಿದ ಹಣವನ್ನು ಹೂಡಿಕೆ ಮಾಡಲು ಉತ್ತಮ ಉಳಿತಾಯ ಯೋಜನೆ ಹುಡುಕುತ್ತಿದ್ದರೆ ಪೋಸ್ಟ್ ಆಫೀಸ್ ನ ಈ 5 ಉಳಿತಾಯ ಯೋಜನೆಗಳು ಉತ್ತಮವಾಗಿದೆ. ಹಾಗಾದರೆ ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿರುವ ಈ 5 ಉಳಿತಾಯ ಯೋಜನೆಗಳ ಬಗ್ಗೆ ಮಾಹಿತಿಯನ್ನ ತಿಳಿದುಕೊಳ್ಳೋಣ.
ಪೋಸ್ಟ್ ಆಫೀಸ್ ನ ಸಣ್ಣ ಉಳಿತಾಯ ಯೋಜನೆಗಳು
Post Office Monthly Income Scheme
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಹೂಡಿಕೆದಾರರಿಗೆ ಸ್ಥಿರ ಮಾಸಿಕ ಆದಾಯವನ್ನು ಒದಗಿಸಿಕೊಡುತ್ತದೆ. ಇದು ಸರ್ಕಾರೀ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಪ್ರಸ್ತುತ ವಾರ್ಷಿಕ ಬಡ್ಡಿ ದರ 7.4% ಆಗಿದೆ. ಇದು 5 ವರ್ಷಗಳ ಉಳಿತಾಯ ಯೋಜನೆಯಾಗಿದೆ. ಈ POMIS ಯೋಜನೆಯಲ್ಲಿ ಒಬ್ಬರು ಅಥವಾ ದಂಪತಿಗಳು ಜಂಟಿ ಖಾತೆ ತೆರೆದು ಹೂಡಿಕೆಯನ್ನ ಮಾಡಬಹುದಾಗಿದೆ. ಒಬ್ಬರು ಖಾತೆ ತೆರೆದರೆ 9 ಲಕ್ಷ ಗರಿಷ್ಠ ಹೂಡಿಕೆಯನ್ನ ಮಾಡಬಹುದು ಆದರೆ ಜಂಟಿ ಖಾತೆ ತೆರೆದರೆ 15 ಲಕ್ಷ ಗರಿಷ್ಠ ಹೂಡಿಕೆ ಮಾಡಬಹುದುದಾಗಿದೆ. ಇದು ಸಂಪೂರ್ಣ ಸರ್ಕಾರೀ ಬೆಂಬಲಿತವಾಗಿದ್ದು ಯಾವುದೇ ಅಂತಕ ವಿಲ್ಲದೆ ಹೂಡಿಕೆ ಮಾಡಬಹುದಾಗಿದೆ.
Public Provident Fund
ಭವಿಷ್ಯದ ಆರ್ಥಿಕ ಭದ್ರತೆಗಾಗಿ ಸುರಕ್ಷಿತ ಹೂಡಿಕೆ ಮಾಡಲು PPF ಯೋಜನೆ ಒಂದು ಉತ್ತಮವಾದ ಆಯ್ಕೆ ಆಗಿದೆ. ವಾರ್ಷಿಕವಾಗಿ 500 ರೂಪಾಯಿಯಿಂದ 1.5 ಲಕ್ಷ ರೂಪಾಯಿಯ ತನಕ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. PPF ಯೋಜನೆಯ ಮುಕ್ತಾಯದ ಅವಧಿ 15 ವರ್ಷಗಳು ಆಗಿದ್ದು ಮತ್ತೆ 5 ವರ್ಷಗಳ ತನಕ ಈ ಯೋಜನೆಯನ್ನು ವಿಸ್ತರಣೆ ಕೂಡ ಮಾಡಬಹುದು. ಒಟ್ಟಾರೆಯಾಗಿ PPF ಯೋಜನೆಯಲ್ಲಿ 25 ವರ್ಷಗಳ ವರೆಗೆ ವಿಸ್ತರಣೆ ಮಾಡಬಹುದು. PPF ಬಡ್ಡಿ ದರವು ವಾರ್ಷಿಕವಾಗಿ 7.1% ಆಗಿದೆ.
Sukanya Samriddhi Yojana
ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರದ ಒಂದು ಸುರಕ್ಷಿತ ಉಳಿತಾಯ ಯೋಜನೆಯಾಗಿದ್ದು, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆಗಾಗಿ ಜಾರಿಗೆ ತರಲಾಗಿದೆ. ಇದನ್ನು 2015 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಪೋಸ್ಟ್ ಆಫೀಸ್ ಅಥವಾ ಅಧಿಕೃತ ಬ್ಯಾಂಕುಗಳಲ್ಲಿ ಖಾತೆ ತೆರೆಯಬಹುದು. ಪ್ರಸ್ತುತ, ಈ ಯೋಜನೆಯಲ್ಲಿ 8.2% ಬಡ್ಡಿದರವನ್ನು ಪಡೆದುಕೊಳ್ಳಬಹುದು. ವಾರ್ಷಿಕವಾಗಿ ಕನಿಷ್ಠ 250 ರೂಪಾಯಿಗಳಿಂದ ಗರಿಷ್ಠ 1.5 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಇನ್ನು 80c ಅಡಿಯಲ್ಲಿ 1.5 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಲಭ್ಯವಿದೆ
National Savings Certificate
ಅಂಚೆ ಕಚೇರಿ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸುರಕ್ಷಿತವಾದ, ಸರ್ಕಾರಿ ಬೆಂಬಲಿತವಾದ, ಸ್ಥಿರ ಆದಾಯದ ಹೂಡಿಕೆ ಯೋಜನೆ ಆಗಿದ್ದು, ಇದು 2025-26 ನೇ ಹಣಕಾಸು ವರ್ಷಕ್ಕೆ ಪ್ರಸ್ತುತ 7.7% ವಾರ್ಷಿಕ ಬಡ್ಡಿದರವನ್ನು ನೀಡುತ್ತಿದೆ. 5 ವರ್ಷಗಳ ಲಾಕ್-ಇನ್ ಅವಧಿ, ಕನಿಷ್ಠ 1,000 ಹೂಡಿಕೆ (ಗರಿಷ್ಠವಿಲ್ಲ) ಮತ್ತು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆದುಕೊಂಡಿದೆ. ಇದು 5 ವರ್ಷದ ಯೋಜನೆ ಆಗಿದ್ದು, ವಿಶೇಷ ಸಂದರ್ಭದಲ್ಲಿ ಬಿಟ್ಟು, ಮಧ್ಯದಲ್ಲಿ ಹಣವನ್ನು ಹಿಂಪಡೆಯಲು ಸಾಧ್ಯವಿಲ್ಲ.
Post Offrice Time Deposit Scheme
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್, ಇದನ್ನು ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ ಎಂದೂ ಕರೆಯುತ್ತಾರೆ. POTD ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ ಹೂಡಿಕೆಯನ್ನು ಆರಂಭಿಸಬಹುದಾಗಿದೆ. 1, 2, 3, ಮತ್ತು 5 ವರ್ಷಗಳ ವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ಈ ಯೋಜನೆ ಯಾವುದೇ ಮಾರುಕಟ್ಟೆ ಏರಿಳಿತಗಳಿಲ್ಲದೆ ನಿಶ್ಚಿತ ಆದಾಯವನ್ನು ನೀಡುತ್ತದೆ. ಪೋಸ್ಟ್ ಆಫೀಸ್ ನ ಟೈಮ್ ಡೆಪಾಸಿಟ್ ಸ್ಕೀಮ್ ನಲ್ಲಿ ವಾರ್ಷಿಕವಾಗಿ 7.50% ಬಡ್ಡಿಯನ್ನು ನೀಡಲಾಗುತ್ತದೆ. ಈ ಖಾತೆಯನ್ನು ಖಾತೆಯನ್ನು ಏಕವ್ಯಕ್ತಿ, ಜಂಟಿ ಖಾತೆ, ಅಥವಾ ಸಂಸ್ಥೆಯ ಹೆಸರಿನಲ್ಲಿ ತೆರೆಯಬಹುದು.
Disclaimer: This information is provided for awareness purposes only. For personalised legal advice, consult a qualified professional and refer to official government notifications.

