Ads By Google

POSCSS: ಪೋಸ್ಟ್ ಆಫೀಸ್ ಈ ಖಾತೆ ತೆರೆದರೆ ಮನೆಯಲ್ಲೇ ಕುಳಿತು ಪ್ರತಿ ತಿಂಗಳು 20,000 ರೂ ಗಳಿಸಬಹುದು, ಇಂದೇ ಅರ್ಜಿ ಹಾಕಿ

Post Office Money Double Scheme

Image Source: India Today

Ads By Google

Post office Senior Citizen Savings Scheme: ಭಾರತೀಯ ಅಂಚೆ ಇಲಾಖೆಯು ಜನಸಾಮಾನ್ಯರಿಗಾಗಿ ವಿವಿಧ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಜನಸಮಯರು Post office ನ ಹೂಡಿಕೆಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಸ್ಥಿರ ಆದಾಯವನ್ನು ಪಡೆಯುತ್ತಿದ್ದಾರೆ.

ಅಂಚೆ ಇಲಾಖೆಯ ಪ್ರತಿ ಉಳಿತಾಯ ಯೋಜನೆ ಕೂಡ ಅಪಾಯಮುಕ್ತವಾಗಿದ್ದು ಜನರಿಗೆ ಕಡಿಮೆ ಪ್ರೀಮಿಯಂ ನಲ್ಲಿ ಹೂಡಿಕೆಗೆ ಅವಕಾಶವನ್ನು ನೀಡುತ್ತಿದೆ. ಸದ್ಯ ಅಂಚೆ ಇಲಾಖೆ ಹಿರಿಯ ನಾಗರೀಕರಿಗಾಗಿ ವಿಶೇಷ ಉಳಿತಾಯ ಯೋಜನೆಯನ್ನು ಪರಿಚಯಿಸಿದೆ. ಈ ಉಳಿತಾಯ ಯೋಜನೆಯಡಿ ಹೂಡಿಕೆ ಮಾದೈದಾರು 20 ಸಾವಿರ ರೂ. ಆದಾಯವನ್ನು ಗಳಿಸಬಹುದಾಗಿದೆ.

Image Credit: Aajtak

Post office Senior Citizen Savings Scheme
ಅಂಚೆ ಇಲಾಖೆಯು ಪ್ರತಿ ವಯೋಮಾನದವರಿಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳನ್ನು ನೀಡುತ್ತದೆ. ಪೋಸ್ಟ್ ಆಫೀಸ್ ವಿಶೇಷವಾಗಿ ಹಿರಿಯ ನಾಗರೀಕರಿಗಾಗಿ Senior Citizen Savings Scheme ಅನ್ನು ಪ್ರಾರಂಭಿಸಿದೆ. ಇತರ ಬ್ಯಾಂಕ್‌ ಗಳಲ್ಲಿನ ಎಫ್‌ ಡಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿಯನ್ನು ನೀಡುವುದಲ್ಲದೆ, ಅದರಲ್ಲಿ ನಿಯಮಿತ ಆದಾಯವನು ಪಡೆಯಬಹುದು.

ಒಬ್ಬರು ತಿಂಗಳಿಗೆ ರೂ. 20,000 ವರೆಗೆ ಗಳಿಸುವ ಅವಕಾಶವಿದೆ. ಇನ್ನು ಸರ್ಕಾರವು Senior Citizen Savings Scheme ನಲ್ಲಿ ಹೂಡಿಕೆ ಮಾಡುವವರಿಗೆ ಜನವರಿ 1, 2024 ರಿಂದ 8.2 ಶೇಕಡಾ ಬಡ್ಡಿ ದರವನ್ನು ನೀಡುತ್ತಿದೆ. ಖಾತೆ ತೆರೆಯುವ ಮೂಲಕ ಕನಿಷ್ಠ 1,000 ರೂ.ಗಳಿಂದ ಹೂಡಿಕೆ ಆರಂಭಿಸಬಹುದು. ಈ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಗರಿಷ್ಠ ಹೂಡಿಕೆ ಮಿತಿಯನ್ನು 30 ಲಕ್ಷ ರೂ.ಗೆ ನಿಗದಿಪಡಿಸಲಾಗಿದೆ. ಈ ಪೋಸ್ಟ್ ಆಫೀಸ್ ಯೋಜನೆಯು ನಿವೃತ್ತಿಯ ನಂತರ ಆರ್ಥಿಕವಾಗಿ ಸಮೃದ್ಧವಾಗಿ ಉಳಿಯಲು ಬಹಳ ಸಹಾಯಕವಾಗಿದೆ.

Image Credit: Businessleague

ಪೋಸ್ಟ್ ಆಫೀಸ್ ಈ ಖಾತೆ ತೆರೆದರೆ ಮನೆಯಲ್ಲೇ ಕುಳಿತು ಪ್ರತಿ ತಿಂಗಳು 20,000 ರೂ ಗಳಿಸಬಹುದು
ಹೂಡಿಕೆದಾರರು ಈ ಸರ್ಕಾರಿ ಯೋಜನೆಯಲ್ಲಿ ಕೇವಲ 1000 ರೂ ಹೂಡಿಕೆಯನ್ನು ಪ್ರಾರಂಭಿಸಬಹುದು ಮತ್ತು ಗರಿಷ್ಠ 30 ಲಕ್ಷ ರೂ. ಹೂಡಿಕೆ ಮಾಡಬಹುದು. ಠೇವಣಿ ಮೊತ್ತವನ್ನು 1000 ರೂಪಾಯಿಗಳ ಗುಣಾಕಾರಗಳಲ್ಲಿ ನಿರ್ಧರಿಸಲಾಗುತ್ತದೆ. ಈ ಯೋಜನೆಯಿಂದ 20,000 ರೂಪಾಯಿಗಳ ನಿಯಮಿತ ಗಳಿಕೆಯ ಲೆಕ್ಕಾಚಾರವನ್ನು ನೋಡಿದರೆ, ನಂತರ 8.2 ಶೇಕಡಾ ಬಡ್ಡಿಯಲ್ಲಿ, ಒಬ್ಬ ವ್ಯಕ್ತಿಯು ಸುಮಾರು 30 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ರೂ 2.46 ಲಕ್ಷ ವಾರ್ಷಿಕ ಬಡ್ಡಿಯನ್ನು ಪಡೆಯುತ್ತಾನೆ. ಈ ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ನೋಡಿದರೆ, ಮಾಸಿಕ ಸುಮಾರು 20,000 ರೂ. ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in