Post Office Time Deposit Scheme: ಭಾರತೀಯರು ಉತ್ತಮ ಭವಿಷ್ಯಕ್ಕಾಗಿ ಹೆಚ್ಚು ಹೂಡಿಕೆಯ ಕಡೆ ಮುಖಮಾಡುತ್ತಿದ್ದಾರೆ. ಇದ್ದಕ್ಕಾಗಿಯೇ ಬ್ಯಾಂಕ್, ಪೋಸ್ಟ್ ಆಫೀಸ್, ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿ ಅನೇಕ ಹೂಡಿಕೆ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನೀವು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣವನ್ನು ಹೂಡಿಕೆ ಮಾಡಲು ಉತ್ತಮ ಉಳಿತಾಯ ಯೋಜನೆ ಹುಡುಕುತ್ತಿದ್ದರೆ ಪೋಸ್ಟ್ ಆಫೀಸ್ ನ ಈ ಟೈಮ್ ಡೆಪಾಸಿಟ್ ಸ್ಕೀಮ್ ಉತ್ತಮ ಆಯ್ಕೆ ಆಗಿದೆ. ಈ ಯೋಜನೆಯಲ್ಲಿ ಎಷ್ಟು ಹಣವನ್ನು ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಉತ್ತಮ ಆದಾಯ ಕಂಡುಕೊಳ್ಳಬಹುದು. ಹಾಗಾದರೆ ಪೋಸ್ಟ್ ಆಫೀಸ್ ನಲ್ಲಿ ಜಾರಿಯಲ್ಲಿರುವ ಟೈಮ್ ಡೆಪಾಸಿಟ್ ಯೋಜನೆಯಲ್ಲಿ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Post Office Time Deposit
ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (POTD), ಇದನ್ನು ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ ಎಂದೂ ಕರೆಯುತ್ತಾರೆ. ಇದು ಬ್ಯಾಂಕ್ ಸ್ಥಿರ ಠೇವಣಿ (FD) ಯಂತೆಯೇ ಸರ್ಕಾರಿ ಬೆಂಬಲಿತವಾಗಿದೆ. ಈ ಯೋಜನೆ ನ್ಯಾಷನಲ್ ಸೇವಿಂಗ್ ಇನ್ಸ್ಟಿಟ್ಯೂಟ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಯಲ್ಲಿ ಕನಿಷ್ಠ 1000 ರೂಪಾಯಿಯಿಂದ ಹೂಡಿಕೆಯನ್ನು ಆರಂಭಿಸಬಹುದಾಗಿದೆ. 1, 2, 3, ಮತ್ತು 5 ವರ್ಷಗಳ ವರೆಗೆ ಹೂಡಿಕೆಯನ್ನು ಮಾಡಬಹುದಾಗಿದೆ. ಈ ಯೋಜನೆ ಯಾವುದೇ ಮಾರುಕಟ್ಟೆ ಏರಿಳಿತಗಳಿಲ್ಲದೆ ನಿಶ್ಚಿತ ಆದಾಯವನ್ನು ನೀಡುತ್ತದೆ.
2025 ರಲ್ಲಿ Q4 ಬಡ್ಡಿದರಗಳು
* 1 ವರ್ಷಕ್ಕೆ 6.9% ಬಡ್ಡಿಯನ್ನು ನೀಡಲಾಗುತ್ತದೆ.
* 2 ವರ್ಷಕ್ಕೆ 7% ಬಡ್ಡಿಯನ್ನು ನೀಡಲಾಗುತ್ತದೆ.
* 3 ವರ್ಷಕ್ಕೆ 7.1% ಬಡ್ಡಿಯನ್ನು ನೀಡಲಾಗುತ್ತದೆ
* 5 ವರ್ಷಕ್ಕೆ 7.5% ಬಡ್ಡಿಯನ್ನು ನೀಡಲಾಗುತ್ತದೆ.
2 ಲಕ್ಷ ಹೂಡಿಕೆಯ ಲೆಕ್ಕಾಚಾರ
* 1 ವರ್ಷಕ್ಕೆ 2 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ 15,000 ವಾರ್ಷಿಕ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾಗಿ 2,15,000 ಮ್ಯಾಚುರಿಟಿ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
* 2 ವರ್ಷಕ್ಕೆ 2,15,000 ರೂಪಾಯಿ ಹೂಡಿಕೆ ಮಾಡಿದರೆ 16,125 ವಾರ್ಷಿಕ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾಗಿ 2,31,125 ಮ್ಯಾಚುರಿಟಿ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
* 3 ವರ್ಷಕ್ಕೆ 2,31,125 ರೂಪಾಯಿ ಹೂಡಿಕೆ ಮಾಡಿದರೆ 17,334 ವಾರ್ಷಿಕ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾಗಿ 2,48,459 ಮ್ಯಾಚುರಿಟಿ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
* 4 ವರ್ಷಕ್ಕೆ 2,48,459 ರೂಪಾಯಿ ಹೂಡಿಕೆ ಮಾಡಿದರೆ 18,635 ವಾರ್ಷಿಕ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾಗಿ 2,67,094 ಮ್ಯಾಚುರಿಟಿ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
* 5 ವರ್ಷಕ್ಕೆ 2,67,094 ರೂಪಾಯಿ ಹೂಡಿಕೆ ಮಾಡಿದರೆ 20,045 ವಾರ್ಷಿಕ ಬಡ್ಡಿಯನ್ನು ಪಡೆದುಕೊಳ್ಳಬಹುದಾಗಿದೆ. ಒಟ್ಟಾಗಿ 2,87,139 ಮ್ಯಾಚುರಿಟಿ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ.
ಟೈಮ್ ಡೆಪಾಸಿಟ್ ಯೋಜನೆಯ ಲಾಭಗಳು
* ಸರ್ಕಾರೀ ಬ್ಯಾಂಕಿಂಗ್ ನಿಂದ 100% ಸುರಕ್ಷಿತವಾಗಿದೆ
* ಭಾರತದಲ್ಲಿ ಒಟ್ಟು 1.64 ಲಕ್ಷ ಪೋಸ್ಟ್ ಆಫೀಸ್ ಗಳಲ್ಲಿ ಲಭ್ಯ
* 5 ವರ್ಷದ TD ಗೆ 80c ಅಡಿಯಲ್ಲಿ ಉಳಿತಾಯ, TDS ಇಲ್ಲ
* ವಯಕ್ತಿಕ ಅಥವಾ ಜಂಟಿ ಖಾತೆಯನ್ನು ತೆರೆಯಬಹುದಾಗಿದೆ
* ಠೇವಣಿ ಮಾಡಿದ ದಿನಾಂಕದಿಂದ 6 ತಿಂಗಳ ನಂತರ ಹಣವನ್ನು ಹಿಂಪಡೆಯಲು ಸಾಧ್ಯ, ಆದರೆ 2% ದಂಡ ಪಾವತಿಸಬೇಕಾಗುತ್ತದೆ.
ಟೈಮ್ ಡೆಪಾಸಿಟ್ ಯೋಜನೆಯ ಅರ್ಹತೆ
* ಭಾರತೀಯ ನಾಗರೀಕರಾಗಿರಬೇಕು
* ವಯಸ್ಸಿನ ಮಿತಿ ಇಲ್ಲ
* ಪೋಸ್ಟ್ ಆಫೀಸ್ ಅಥವಾ ಇಂಡಿಯಾ ಪೋಸ್ಟ್ ಆಫ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಯಾರಿಗೆ ಈ ಯೋಜನೆ ಉತ್ತಮವಾಗಿದೆ?
ಈ ಯೋಜನೆಯು ಕಡಿಮೆ ಅಪಾಯದೊಂದಿಗೆ ಸ್ಥಿರ ಆದಾಯವನ್ನು ಬಯಸುವವರಿಗೆ ಉತ್ತಮವಾಗಿದೆ. ನಿವೃತ್ತರು, ಸಣ್ಣ ಉಳಿತಾಯಗಾರರು ಮತ್ತು ದೀರ್ಘಕಾಲೀನ ಆರ್ಥಿಕ ಯೋಜನೆಯನ್ನು ರೂಪಿಸಲು ಇಚ್ಛಿಸುವವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ. ಉದಾಹರಣೆಗೆ, ಮಕ್ಕಳ ಶಿಕ್ಷಣ, ಮನೆ ಖರೀದಿ, ಅಥವಾ ನಿವೃತ್ತಿ ಯೋಜನೆಗೆ ಈ ಯೋಜನೆಯು ಸಹಾಯಕವಾಗಿದೆ. ಯಾವುದೇ ಭಾರತೀಯ ಅಂಚೆ ಕಚೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಇಂದೇ ಹತ್ತಿರದ ಅಂಚೆ ಕಚೇರಿಗೆ ಭೇಟಿನೀಡಿ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

