RD And FD: RD ಮತ್ತು FD ಖಾತೆ ತೆರೆಯಲು ಪೋಸ್ಟ್ ಆಫೀಸ್ ಅಥವಾ SBI ನಲ್ಲಿ ಯಾವುದು ಬೆಸ್ಟ್…? ಯಾವುದರಲ್ಲಿ ಬಡ್ಡಿ ಹೆಚ್ಚು.

RD ಮತ್ತು FD ಖಾತೆ ತೆರೆಯಲು ಪೋಸ್ಟ್ ಆಫೀಸ್ ಅಥವಾ SBI ನಲ್ಲಿ ಯಾವುದು ಬೆಸ್ಟ್...?

Post Office v/s SBI RD And FD: ಜನರು ತಮ್ಮ ಬಳಿ ಇರುವ ಉಳಿತಾಯ ಹಣವನ್ನು ಹೂಡಿಕೆ ಮಾಡಲು ಬಯಸುತ್ತಾರೆ. ಹೂಡಿಕೆ ಮಾಡಲು ಸಾಕಷ್ಟು ಕಂಪನಿಗಳು ಜನರಿಗೆ ವಿವಿಧ ಯೋಜನೆಗಳನ್ನು ಪರಿಚಯಿಸುತ್ತದೆ. ಇನ್ನು Indian Post office ಜನರಿಗಾಗಿ ವಿವಿಧ ಹೂಡಿಕೆಯ ಯೋಜನೆಗಳನ್ನು ಪರಿಚಯಿಸುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಜನರು ಹೆಚ್ಚಾಗಿ RD ಮತ್ತು FD ಖಾತೆಗಳಲ್ಲಿ ಹೂಡಿಗೆ ಮಾಡುತ್ತಾರೆ.

Recurring Deposit ಹಾಗೂ Fixed Deposit ನ ಹೂಡಿಕೆಯು ಭಿನ್ನವಾಗಿರುತ್ತದೆ. ನೀವು ಪೋಸ್ಟ್ ಆಫೀಸ್ ನಲ್ಲಿ RD ಅಥವಾ FD ಹೂಡಿಕೆ ಮಾಡಲು ಬಯಸಿದರೆ ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ. RD ಮತ್ತು FD ಖಾತೆ ತೆರೆಯಲು ಪೋಸ್ಟ್ ಆಫೀಸ್ ಅಥವಾ SBI ನಲ್ಲಿ ಯಾವುದು ಬೆಸ್ಟ್ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Post Office vs SBI
Image Credit: tv9bangla

ಪೋಸ್ಟ್ ಆಫೀಸ್ ಅಥವಾ SBI ನಲ್ಲಿ RD ಮತ್ತು FD ಖಾತೆ
ಪೋಸ್ಟ್ ಆಫೀಸ್ ಇತ್ತೀಚೆಗೆ RD ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಶೇ. 6.5 ರಿಂದ ಶೇ. 6.7 ಕ್ಕೆ RD ಬಡ್ಡಿದರಗಳನ್ನು ಹೆಚ್ಚಿಸಲಾಗಿದೆ. ಅದೇ ಸಮಯದಲ್ಲಿ, RD ಪೋಸ್ಟ್ ಆಫೀಸ್ ನಲ್ಲಿ ಕನಿಷ್ಠ 5 ವರ್ಷಗಳವರೆಗೆ ಮಾನ್ಯವಾಗಿರಬೇಕು. ಪೋಸ್ಟ್ ಆಫೀಸ್ ನಲ್ಲಿ RD ಖಾತೆ ತೆರೆದರೆ ಖಾತೆದಾರರು ಅನುಕೂಲವನ್ನು ಪಡೆಯಬಹುದು.

ನೀವು ಬ್ಯಾಂಕ್‌ ನಲ್ಲಿ RD ಯೋಜನೆಯನ್ನು ಪ್ರಾರಂಭಿಸಿದರೆ, SBI ನಿಮಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದೆ. ಪ್ರತಿ ತಿಂಗಳು ನೀವು ನಿಗದಿತ ಮೊತ್ತವನ್ನು RD ಯಲ್ಲಿ ಠೇವಣಿ ಇಡಬೇಕು. ಅದನ್ನು ಮುಕ್ತಾಯದ ಸಮಯದಲ್ಲಿ ಬಡ್ಡಿಯೊಂದಿಗೆ ಹಿಂತಿರುಗಿಸಲಾಗುತ್ತದೆ. SBI ನಲ್ಲಿ ಪೋಸ್ಟ್ ಆಫೀಸ್‌ ನಂತೆ ನೀವು ರೂ. 100 ರಿಂದ ಮಾಸಿಕ ಹೂಡಿಕೆಯನ್ನು ಪ್ರಾರಂಭಿಸಬಹುದು, ಆದರೆ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ.

Post Office FD And RD
Image Credit: Businessleague

SBI ಬಡ್ಡಿದರದ ವಿವರ
1 ವರ್ಷದಿಂದ 2 ವರ್ಷದವರೆಗಿನ ಠೇವಣಿಗಳ ಮೇಲೆ ಶೇ.6.80 ಬಡ್ಡಿ ಮತ್ತು ಹಿರಿಯ ನಾಗರಿಕರಿಗೆ ಶೇ.7.30 ಬಡ್ಡಿ, 2 ವರ್ಷದಿಂದ 3 ವರ್ಷದವರೆಗಿನ ಠೇವಣಿಗಳಿಗೆ ಶೇ. 7 ಮತ್ತು ಹಿರಿಯ ನಾಗರಿಕರಿಗೆ ಶೇ.7.50 ಬಡ್ಡಿ, 3 ವರ್ಷದಿಂದ 5 ವರ್ಷದ ಠೇವಣಿಗಳಿಗೆ ಶೇ.6.50 ಬಡ್ಡಿ, ವೃದ್ಧರಿಗೆ ಶೇ.7 ಬಡ್ಡಿ ನೀಡಲಿದೆ. 5 ವರ್ಷದಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ಶೇ. 6.50 ಮತ್ತು ಹಿರಿಯ ನಾಗರಿಕರಿಗೆ ಶೇ.7.50 ಬಡ್ಡಿ ಸಿಗಲಿದೆ.

Join Nadunudi News WhatsApp Group

RD ಮತ್ತು FD ಖಾತೆ ತೆರೆಯಲು ಪೋಸ್ಟ್ ಆಫೀಸ್ ಅಥವಾ SBI ನಲ್ಲಿ ಯಾವುದು ಬೆಸ್ಟ್…?
ನಾವು ಪೋಸ್ಟ್ ಆಫೀಸ್ ಆರ್‌ಡಿ ಮತ್ತು ಎಸ್‌ಬಿಐ ಅನ್ನು ಹೋಲಿಕೆ ಮಾಡಿದರೆ, ನೀವು ಪೋಸ್ಟ್ ಆಫೀಸ್‌ನಲ್ಲಿ 5 ವರ್ಷಗಳ ಆರ್‌ಡಿಯಲ್ಲಿ 6.7 ಪ್ರತಿಶತ ಬಡ್ಡಿಯನ್ನು ಪಡೆಯುತ್ತೀರಿ. ಆದರೆ SBI ನಲ್ಲಿ, ನೀವು 1 ವರ್ಷದ RD ಮೇಲೆ 6.8 ಶೇಕಡಾ ಬಡ್ಡಿಯನ್ನು ಪಡೆಯುತ್ತೀರಿ. ಅಂಚೆ ಕಚೇರಿಗಿಂತ ಹೆಚ್ಚು ಬಡ್ಡಿದರ ಸಿಗುತ್ತದೆ.

SBI FD And Rd Account
Image Credit: Housing

ಆದರೆ 2 ವರ್ಷದಿಂದ 3 ವರ್ಷಗಳ ಆರ್‌ ಡಿಯಲ್ಲಿ, ನೀವು ಶೇಕಡಾ 7 ರಷ್ಟು ಬಡ್ಡಿಯನ್ನು ಪಡೆಯಬಹುದು. ನೀವು 5 ವರ್ಷಗಳ ಕಾಲ RD ಮಾಡಿಸಿಕೊಂಡರೆ ಈ ಸಮಯದಲ್ಲಿ ನಿಮ್ಮ ಪೋಸ್ಟ್ ಆಫೀಸ್ ಅತ್ಯುತ್ತಮ ಆಯ್ಕೆಯಾಗಿದೆ. ಅಂಚೆ ಕಛೇರಿಯಲ್ಲಿ, ನೀವು ಶೇಕಡಾ 6.7 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ, ಆದರೆ SBI ನಲ್ಲಿ 5 ವರ್ಷಗಳ RD ಮೇಲಿನ ಬಡ್ಡಿ ದರವು 6.5 ಶೇಕಡಾ ಆಗಿದೆ.

Join Nadunudi News WhatsApp Group