Postal Life: ಪೋಸ್ಟ್ ಆಫೀಸ್ ಈ ಯೋಜನೆಯಲ್ಲಿ ಸಿಗಲಿದೆ 50 ಲಕ್ಷ ರೂ, ಹೂಡಿಕೆ ಮಾಡಿ ಲಾಭ ಪಡೆದುಕೊಳ್ಳಿ.

ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸುಮಾರು 50 ಲಕ್ಷ ರೂಪಾಯಿ ಸಿಗಲಿದೆ.

Postal Life Insurance: ಪೋಸ್ಟ್ ಆಫೀಸ್ (Post Office) ನಲ್ಲಿ ಈಗಾಗಲೇ ಸಾಕಷ್ಟು ಯೋಜನೆಗಳು ಚಾಲ್ತಿಯಲ್ಲಿವೆ. ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಪೋಸ್ಟ್ ಆಫೀಸ್ ನಲ್ಲಿ ಸಾಕಷ್ಟು ಯೋಜನೆಗಳಿವೆ.

ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಇದೀಗ ಪೋಸ್ಟ್ ಆಫೀಸ್ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಬಗ್ಗೆ ಮಾಹಿತಿ ತಿಳಿಯೋಣ.

If you invest in postal life insurance, you will get a profit of up to 50 lakh rupees
Image Credit: hindustantimes

ಪೋಸ್ಟ್ ಆಫೀಸ್ ನಲ್ಲಿ ಹೊಸ ಹೊಸ ಯೋಜನೆ
ಪೋಸ್ಟ್ ಆಫೀಸ್ ಇದೀಗ ಗ್ರಾಹಕರಿಗಾಗಿ ಪೋಸ್ಟಲ್ ಲೈಫ್ ಇನ್ಸ್ಯುರೆನ್ಸ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿನ ಹೂಡಿಕೆಯು ಸುರಕ್ಷಿತ ಹಾಗೂ ಲಾಭದಾಯಕವಾಗಿದೆ. ಇನ್ನಿತರ ಪ್ರಯೋಜನಗಳ ಜೊತೆಗೆ ಹೆಚ್ಚಿನ ಜೀವ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯಲ್ಲಿನ ಹೂಡಿಕೆಯು ನಿಮ್ಮ ಹಣವನ್ನು ದ್ವಿಗುಣಗೊಳಿಸಲಿದೆ.

ಪೋಸ್ಟಲ್ ಲೈಫ್ ಇನ್ಸ್ಯುರೆನ್ಸ್ ಯೋಜನೆ
https://pli.indiapost.gov.in/CustomerPortal/Home.action ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಈ ವಿಮೆಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಯೋಜನೆಯಲ್ಲಿ ಪಾಲಿಸಿದಾರರು 50 ಲಕ್ಷದ ವರೆಗೆ ಲಾಭವನ್ನು ಪಡೆಯಬಹುದು. 19 ವರ್ಷದಿಂದ 55 ವರ್ಷದೊಳಗಿನ ವ್ಯಕ್ತಿಯು ಈ ಯೋಜನೆಯಲ್ಲಿ ಹೂಡಿಕೆ ಮಾಡಬಡಹುದು.

All people between 19 years to 55 years can invest in Postal Life Insurance.
Image Credit: moneylife

ಪೋಸ್ಟಲ್ ಲೈಫ್ ಇನ್ಸ್ಯುರೆನ್ಸ್ ಯೋಜನೆಯ ಕನಿಷ್ಠ ವಿಮಾ ಮೊತ್ತವು 20,000 ಮತ್ತು ಗರಿಷ್ಟ ವಿಮಾ ಮೊತ್ತವು 50 ಲಕ್ಷ ಆಗಿದೆ. ಈ ಯೋಜನೆಯ ಪಾಲಿಸಿದಾರರು ಮದ್ಯದಲ್ಲಿ ಮರಣವನ್ನು ಹೊಂದಿದರೆ, ಹಣವನ್ನು ನಾಮಿನಿಗೆ ನೀಡಲಾಗುತ್ತದೆ. ನೀವು ಪಾಲಿಸಿಯನ್ನು ನಿಲ್ಲಿಸಲು ಬಯಸಿದರೆ 3 ವರ್ಷದ ನಂತರ ನಿಲ್ಲಿಸಬಹುದು. 80 ವರ್ಷದ ವಯಸ್ಸಿನಲ್ಲಿ ಈ ಯೋಜನೆಯ ಮೊತ್ತದ ಲಾಭವನ್ನು ಪಡೆಯಬಹುದು.

Join Nadunudi News WhatsApp Group

ಹೂಡಿಕೆ ಆಧಾರದ ಮೇಲೆ ನಿಮಗೆ ಮೆಚ್ಯುರಿಟಿ ಸಮಯದಲ್ಲಿ ಸಿಗುವ ಲಾಭ ನಿರ್ಧಾರ ಆಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನ ಸಂಪರ್ಕ ಮಾಡಬಹುದು.

Join Nadunudi News WhatsApp Group