Ads By Google

PPF Account: ಮನೆಯಲ್ಲಿ ಕುಳಿತು SBI, HDFC ಮತ್ತು ICICI ಬ್ಯಾಂಕ್ ನಲ್ಲಿ PPF ಖಾತೆ ತೆರೆಯುವುದು ಹೇಗೆ..? ಇಲ್ಲಿದೆ ಡೀಟೇಲ್ಸ್.

Open PPF account In SBI, HDFC And ICICI Bank

Image Credit: Informal News

Ads By Google

PPF Account Opening Online Process: ಹಣದ ಉಳಿತಾಯಕ್ಕೆ PPF ಖಾತೆಯಲ್ಲಿನ ಹೂಡಿಕೆಯು ಬೆಸ್ಟ್ ಎನ್ನಬಹುದು. ಪ್ರಸ್ತುತ್ತ್ PPF ಖಾತೆದಾರರಿಗೆ ಶೇ. 7 .1 ರ ಬಡ್ಡಿದರವನ್ನು ನೀಡಲಾಗುತ್ತಿದೆ. ಈ ದೀರ್ಘಕಾಲೀನ ಹೂಡಿಕೆಯು ಹೆಚ್ಚಿನ ಲಾಭವನ್ನು ನೀಡುತ್ತದೆ. ಅಂಚೆ ಇಲಾಖೆ ಅಥವಾ ಬ್ಯಾಂಕ್ ಗಳಲ್ಲಿ PPF ಖಾತೆಯನ್ನು ತೆರೆಯಬಹುದು.

ದೇಶದ ಜನಪ್ರಿಯ ಬ್ಯಾಂಕ್ ಗಲಳಾದ SBI , HDFC , ICICI ಬ್ಯಾಂಕ್ ನಿಮಗೆ ಆಕರ್ಷಕ ಬಡ್ಡಿದರವನ್ನು ನೀಡುತ್ತದೆ. ನೀವು ಈ ಬ್ಯಾಂಕ್ ಗ್ರಾಹಕರಾಗಿದ್ದರೆ ಇಂದೇ ಹೂಡಿಕೆಯನ್ನು ಆರಂಭಿಸಬಹುದು. ಹೂಡಿಕೆಗಾಗಿ ಅರ್ಜಿ ಸಲ್ಲಿಸಲು ನೀವು ಕಷ್ಟಪಡಬೇಕಿಲ್ಲ. ಮನೆಯಲ್ಲಿಯಲ್ಲಿಯೇ ಕುಳಿತು ಸರಳ ವಿಧಾನದ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

Image Credit: Coverfox

ಮನೆಯಲ್ಲಿ ಕುಳಿತು SBI , HDFC ಮತ್ತು ICICI ಬ್ಯಾಂಕ್ ನಲ್ಲಿ PPF ಖಾತೆ ತೆರೆಯುವುದು ಹೇಗೆ..?
•SBI ಬ್ಯಾಂಕ್ ನಲ್ಲಿ PPF ಖಾತೆಯನ್ನು ಆನ್ಲೈನ್ ನಲ್ಲಿ ಈ ರೀತಿಯಾಗಿ ತೆರೆಯಿರಿ
Internet Banking ಮೂಲಕ ನಿಮ್ಮ SBI ಖಾತೆಗೆ ಆನ್‌ ಲೈನ್‌ ನಲ್ಲಿ ಲಾಗಿನ್ ಮಾಡಿ.

•Requests And Enquiries ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

•ಡ್ರಾಪ್-ಡೌನ್ ಮೆನುವಿನಿಂದ ‘ಹೊಸ PPF ಖಾತೆ’ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಆಯ್ಕೆಮಾಡಿ.

•’ಹೊಸ PPF ಖಾತೆ’ ಪುಟ ತೆರೆಯುತ್ತದೆ. ಪ್ಯಾನ್ ಸೇರಿದಂತೆ ಅಸ್ತಿತ್ವದಲ್ಲಿರುವ ಗ್ರಾಹಕರ ವಿವರಗಳು ಈ ಪುಟದಲ್ಲಿ ಗೋಚರಿಸುತ್ತವೆ.

•ನಂತರ ಅಲ್ಲಿ ಕೇಳಲಾದ ಎಲ್ಲ ವೈಯಕ್ತಿಕ ವಿವರವನ್ನು ಸಲ್ಲಿಸಿ ಮುಂದುವರೆಯಿರಿ ಆಯ್ಕೆಯನ್ನು ಕ್ಲಿಕ್ ಮಾಡಿದರೆ, “ನಿಮ್ಮ ಫಾರ್ಮ್ ಅನ್ನು ಯಶಸ್ಸಿವಿಯಾಗಿ ಸಲ್ಲಿಸಲಾಗಿದೆ” ಎನ್ನುವುದು ನಿಮಗೆ ಘೋಚರಿಸುತ್ತದೆ.

Image Credit: Informal News

HDFC ಬ್ಯಾಂಕ್ ನಲ್ಲಿ PPF ಖಾತೆಯನ್ನು ಆನ್ಲೈನ್ ನಲ್ಲಿ ಈ ರೀತಿಯಾಗಿ ತೆರೆಯಿರಿ
•HDFC ಬ್ಯಾಂಕ್ ನೆಟ್‌ ಬ್ಯಾಂಕಿಂಗ್‌ ಗೆ ಸೈನ್ ಇನ್ ಮಾಡಿ.

•ಕೊಡುಗೆಗಳ ಟ್ಯಾಬ್ ಅಡಿಯಲ್ಲಿ, ‘ಸಾರ್ವಜನಿಕ ಭವಿಷ್ಯ ನಿಧಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

•PAN ಸೇರಿದಂತೆ ಅಸ್ತಿತ್ವದಲ್ಲಿರುವ ಗ್ರಾಹಕರ ವಿವರಗಳನ್ನು ಈ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ. ವಿವರಗಳನ್ನು ದೃಢೀಕರಿಸಿ.

•ನಿಮ್ಮ ಖಾತೆಗೆ ನಿಮ್ಮ ಆಧಾರ್ ಅನ್ನು ಈಗಾಗಲೇ ಲಿಂಕ್ ಮಾಡಿದ್ದರೆ, ನಿಮ್ಮ ಫಾರ್ಮ್ ಅನ್ನು ಸಲ್ಲಿಸಲಾಗುತ್ತದೆ ಮತ್ತು ನಿಮ್ಮ ಖಾತೆಯನ್ನು ಒಂದು ಕೆಲಸದ ದಿನದಲ್ಲಿ ತೆರೆಯಲಾಗುತ್ತದೆ ಎಂಬ ಸಂದೇಶವನ್ನು ನೀವು ಸ್ವೀಕರಿಸುತ್ತೀರಿ.

•ನಿಮ್ಮ ಆಧಾರ್ ಲಿಂಕ್ ಮಾಡದಿದ್ದರೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೀವು ಮೊದಲು ಅದನ್ನು ಲಿಂಕ್ ಮಾಡಬೇಕಾಗುತ್ತದೆ. ಇದಾದ ನಂತರ ಖಾತೆ ತೆರೆಯಲಾಗುತ್ತದೆ.

Image Credit: Fisdom

ICICI ಬ್ಯಾಂಕ್ ನಲ್ಲಿ PPF ಖಾತೆಯನ್ನು ಆನ್ಲೈನ್ ನಲ್ಲಿ ಈ ರೀತಿಯಾಗಿ ತೆರೆಯಿರಿ
ನೆಟ್ ಬ್ಯಾಂಕಿಂಗ್ ಮೂಲಕ ನಿಮ್ಮ ICICI ಬ್ಯಾಂಕ್ ಖಾತೆಗೆ ಲಾಗಿನ್ ಮಾಡಿ.

•ಬ್ಯಾಂಕ್ ಖಾತೆಗಳು >> PPF ಖಾತೆಗೆ ಹೋಗಿ.

•ವಿವರಗಳನ್ನು ಭರ್ತಿ ಮಾಡಿ, ಸೂಚನೆಗಳನ್ನು ಹೊಂದಿಸಿ ಮತ್ತು ಇ-ಸೈನ್ ಮಾಡಿ.

•ನೀವು ಆನ್‌ ಲೈನ್‌ ನಲ್ಲಿ PPF ಖಾತೆಯನ್ನು ತೆರೆದ ನಂತರ, ನೀವು ನೇರವಾಗಿ ನಿಮ್ಮ ಉಳಿತಾಯ ಖಾತೆಯಿಂದ ಹಣವನ್ನು HDFC ಅಥವಾ ICICI ಬ್ಯಾಂಕ್‌ ನಲ್ಲಿ ನಿಮ್ಮ PPF ಖಾತೆಗೆ ವರ್ಗಾಯಿಸಬಹುದು.

Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in