PPF And SSY: PPF ಮತ್ತು ಸುಕನ್ಯಾ ಸಮೃದ್ಧಿ ಖಾತೆ ಇದ್ದವರು ಸೆ 30 ರೊಳಗೆ ಈ ಕೆಲಸ ಮಾಡಿ, ಇಲ್ಲವಾದರೆ ಖಾತೆ ಬಂದ್.
PPF ಮತ್ತು SSY ಖಾತೆ ಇದ್ದವರು ಸೆಪ್ಟೆಂಬರ್ 30 ರ ಒಳಗೆ ಈ ಕೆಲಸ ಮಾಡಬೇಕು.
PPF And SSY Account Holders: ಜನ ಮುಂದಿನ ಭವಿಷ್ಯದ ಉದ್ದೇಶದಿಂದ ದೇಶದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಯನ್ನ ಜಾರಿಗೆ ತಂದಿದೆ ಎಂದು ಹೇಳಬಹುದು. ಅವುಗಳಲ್ಲಿ ಉಳಿತಾಯ ಯೋಜನಾ ಕೊಡ ಒಂದಾಗಿದೆ. ಈ ಯೋಜನೆಯನ್ನು ಬ್ಯಾಂಕ್ ಹಾಗು ಅಂಚೆ ಕಚೇರಿಗಳಲ್ಲಿ ಮಾಡಲಾಗುತ್ತದೆ. ಉಳಿತಾಯ ಯೋಜನೆಗಳಲ್ಲಿ ಮಹಿಳೆಯರಿಗೆ, ಮಕ್ಕಳಿಗೆ, ಯುವಕ ಯುವತಿಯರಿಗೆ ಹಾಗು ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಹಲವು ಯೋಜನೆಗಳಿವೆ.
PPF ಮತ್ತು SSY ಖಾತೆದಾರರಿಗೆ ಮಹತ್ವದ ಮಾಹಿತಿ
PPF ಹಾಗೂ SSY ಮತ್ತು ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹಣಕಾಸು ಸಚಿವಾಲಯವು ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿದೆ. ಹಿರಿಯ ನಾಗರಿಕರ ಯೋಜನೆಯಡಿ PPF ಮತ್ತು SSY ಹೂಡಿಕೆದಾರರು ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ನಿಮ್ಮ ಅಂಚೆ ಇಲಾಖೆ ಅಥವಾ ಬ್ಯಾಂಕ್ ಗೆ ಕಡ್ಡಾಯವಾಗಿ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ.
PPF ಹಾಗೂ SSY ಹೂಡಿಕೆದಾರರು ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡದಿದ್ದರೆ ಖಾತೆ ನಿಷ್ಕ್ರಿಯ
PPF, SSY ಖಾತೆಯನ್ನು ಹೊಂದಿದವರು ಆಧಾರ್ ಕಾರ್ಡ್ ಹಾಗು ಪಾನ್ ಕಾರ್ಡ್ ಮಾಹಿತಿಯನ್ನು ಅಂಚೆ ಕಚೇರಿಗೆ ನೀಡದಿದ್ದಲ್ಲಿ ಅಂಚೆ ಕಚೇರಿಯಲ್ಲಿ ಮಾಡಿದ ಹೂಡಿಕೆಗಳಿಗೆ ಯಾವುದೇ ರೀತಿಯ ಬಡ್ಡಿ ಬಾಕಿಯಿದ್ದರೆ, ಅದನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.
ಇನ್ನು ಆಧಾರ್ ಕಾರ್ಡ್ ಲಿಂಕ್ ಮಾಡದೆ ಇದ್ದರೆ ಹೂಡಿಕೆದಾರರು ತಮ್ಮ ಪಿಪಿಎಫ್ ಅಥವಾ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗದಿರಬಹುದು. ಹೂಡಿಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿ ಮೆಚ್ಯೂರಿಟಿ ಮನಿ ಕ್ರೆಡಿಟ್ ಪಡೆಯುವುದಿಲ್ಲ. ಠೇವಣಿದಾರನು ಆರು ತಿಂಗಳ ಅವಧಿಯಲ್ಲಿ ತನ್ನ ಆಧಾರ್ ಸಂಖ್ಯೆಯನ್ನು ಒದಗಿಸದಿದ್ದರೆ, ಆಧಾರ್ ಸಂಖ್ಯೆಯನ್ನು ತನ್ನ ಅಕೌಂಟ್ ಇರುವ ಆಫೀಸ್ ಗೆ ಒದಗಿಸುವವರೆಗೆ ಅವನ ಖಾತೆ ನಿಷ್ಕ್ರಿಯವಾಗುತ್ತದೆ.