PPF Investment: ಕೇಂದ್ರದಿಂದ ಜಾರಿಗೆ ಬಂತು ಇನ್ನೊಂದು ಮೇಘಾ ಸ್ಕೀಮ್, 3000 ರೂ ಹೂಡಿಕೆ ಮಾಡಿದರೆ ಸಿಗಲಿದೆ 9.7 ಲಕ್ಷ ರೂ.
ಈ ಯೋಜನೆಯಲ್ಲಿ ಕೇವಲ 3000 ಹೂಡಿಕೆಯಲ್ಲಿ 10 ಲಕ್ಷ ಲಾಭವನ್ನು ಪಡೆಯಬಹುದು.
PPF Investment Profit: ಸರ್ಕಾರ ಜನರಿಗಾಗಿ ಹೂಡಿಕೆಗಾಗಿ ಅನೇಕ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಸರ್ಕಾರ ಪರಿಚಯಿಸಿರುವ ವಿವಿಧ ಯೋಜನೆಗಳಲ್ಲಿ PPF ಖಾತೆ ಅಥವಾ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯು ಅತ್ಯಂತ ಜನಪ್ರಿಯ ದೀರ್ಘಕಾಲೀನ ಉಳಿತಾಯ ಹೂಡಿಕೆ ಉತ್ಪನ್ನಗಳಲ್ಲಿ ಒಂದಾಗಿದೆ. ವಿವಿಧ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ Public Provident Fund ಯೋಜನೆಯು ವಿಶೇಷವಾಗಿದೆ.
ಕೇಂದ್ರದಿಂದ ಜಾರಿಗೆ ಬಂತು ಇನ್ನೊಂದು ಮೇಘಾ ಸ್ಕೀಮ್
ಹೂಡಿಕೆದಾದರೂ PPF ನಲ್ಲಿ ಹೂಡಿಕೆ ಮಾಡುದರಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭವನ್ನು ಪಡೆಯಬಹುದು. ಈ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಮಾರುಕಟ್ಟೆಯ ಏರಿಳಿತದ ಪ್ರಭಾವಗಳಿಂದ ಈ ಯೋಜನೆ ಮುಕ್ತವಾಗಿದೆ. ಈ ಯೋಜನೆಯಲ್ಲಿ ನೀವು ನಿಗದಿತ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ.
ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಗರಿಷ್ಠ 1.50 ಲಕ್ಷ ರೂ. ವರೆಗೆ ಹೂಡಿಕೆ ಮಾಡಬಹುದು. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯ ಅವಧಿ 15 ವರ್ಷಗಳಾಗಿವೆ. ನೀವು ಈ ಯೋಜನೆಯಲ್ಲಿ ಕೇವಲ 3000 ಹೂಡಿಕೆಯಲ್ಲಿ 10 ಲಕ್ಷ ಲಾಭವನ್ನು ಪಡೆಯಬಹುದು. ಅದು ಹೇಗೆ..? ಎಂದು ಯೋಚಿಸುತ್ತಿದ್ದೀರಾ, PPF ಹೂಡಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
3000 ರೂ. ಹೂಡಿಕೆ ಮಾಡಿದರೆ ಸಿಗಲಿದೆ 9.7 ಲಕ್ಷ ರೂ.
ನೀವು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಖಾತೆ ತೆರೆಯುವ ಮೂಲಕ PPF ನಲ್ಲಿ ಹೂಡಿಕೆಯನ್ನು ಆರಂಭಿಸಬಹುದು. ನೀವು ಪ್ರತಿ ತಿಂಗಳು 3000 ರೂ. ಗಳನ್ನೂ ಅಂದರೆ ವಾರ್ಷಿಕವಾಗಿ 36000 ರೂ. ಗಳನ್ನೂ PPF ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. PPF ನ ಹೂಡಿಕೆಯ ಮೇಲೆ ಶೇ. 7 .1 ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಇದರ ಪ್ರಕಾರ ಲೆಕ್ಕಾಚಾರ ಮಾಡಿದರೆ,
ನೀವು 15 ವರ್ಷಗಳ ನಂತರ ಮುಕ್ತಾಯದ ಸಮಯದಲ್ಲಿ ಸುಮಾರು 9,76,370 ರೂ. ಹೂಡಿಕೆ ಮಾಡುತ್ತೀರಿ. ಈ ಅವಧಿಯಲ್ಲಿ ನೀವು ಒಟ್ಟು 5,40,000 ರೂ.ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ನಿಮ್ಮ ಹೂಡಿಕೆಯ ಮೇಲಿನ ಬಡ್ಡಿಯಾಗಿ ನೀವು ಒಟ್ಟು 4,36,370 ರೂ. ಗಳನ್ನು ಪಡೆಯುತ್ತೀರಿ. ನೀವು ಪಿಪಿಎಫ್ ನಲ್ಲಿ ಕನಿಷ್ಠ 500 ರೂಪಾಯಿ ಹೂಡಿಕೆ ಮಾಡಬೇಕು. ಇನ್ನು 15 ವರ್ಷಗಳ ಮುಕ್ತಾಯದ ನಂತರ, ನಿಮ್ಮ ಹೂಡಿಕೆಯ ಅವಧಿಯನ್ನು ನೀವು ಇನ್ನೊಂದು 5 ವರ್ಷಗಳ ವರೆಗೆ ವಿಸ್ತರಿಸಿಕೊಳ್ಳುವ ಅವಕಾಶವಿರುತ್ತದೆ.