PPO Rules: 60 ವರ್ಷ ಮೇಲ್ಪಟ್ಟವರಿಗೆ ರಾತ್ರೋರಾತ್ರಿ ಇನ್ನೊಂದು ಹೊಸ ನಿಯಮ, ಈ ನಂಬರ್ ಇಲ್ಲವಾದರೆ ಪಿಂಚಣಿ ರದ್ದು.
ಇನ್ನುಮುಂದೆ 60 ವರ್ಷ ಮೇಲ್ಪಟ್ಟವರು ಪಿಂಚಣಿ ಪಡೆಯಲು ಈ ನಂಬರ್ ಕಡ್ಡಾಯ.
PPO Number Compulsory For Pension Scheme: ಸದ್ಯ ದೇಶದಲ್ಲಿ ಪಿಂಚಣಿ (Pension) ನಿಯಮದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇನ್ನು ನಿವೃತ್ತಿಯ ನಂತರ ಆರ್ಥಿಕವಾಗಿ ಬೆಂಬಲ ನೀಡಲು ಹಾಗೂ ವ್ಯಕ್ತಿಗಳು ನಿವೃತ್ತಿ ಕಾರ್ಪಸ್ ಅನ್ನು ನಿರ್ಮಿಸಲು ಸಹಾಯ ಮಾಡಲು ಸರ್ಕಾರ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಚಯಿಸಿದೆ.
ಆದರೆ ಪಿಂಚಣಿಯನ್ನು ಪಡೆಯಲು, ವ್ಯಕ್ತಿಗಳು ತಮ್ಮ ಖಾತೆಗೆ ಪಿಂಚಣಿಯನ್ನು ವಿತರಿಸಲು ಅಧಿಕಾರ ಹೊಂದಿರುವ ಸಂಸ್ಥೆಗೆ ಜೀವನ್ ಪ್ರಮಾಣಪತ್ರವನ್ನು (Life Certificate) ಒದಗಿಸಬೇಕಾಗುತ್ತದೆ. ಇನ್ನು ಈಗ ಇನ್ನೊಂದು ಹೊಸ ನಿಯಮ ಜಾರಿಗೆ ಬಂದಿದೆ ಮತ್ತು ಈ ನಿಯಮದ ಪ್ರಕಾರ ಪಿಂಚಣಿ ಹಣ ಪಡೆಯುವವರಿಗೆ ಈ ನಂಬರ್ ಹೊಂದಿಲ್ಲದಿದ್ದರೆ ಅವರ ಪಿಂಚಣಿ ಹಣ ರದ್ದಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
60 ವರ್ಷ ಮೇಲ್ಪಟ್ಟವರಿಗೆ ರಾತ್ರೋರಾತ್ರಿ ಇನ್ನೊಂದು ಹೊಸ ನಿಯಮ
ಜೀವಿತ ಪ್ರಮಾಣ ಪತ್ರವು ಭಾರತ ಸರ್ಕಾರದ ಪಿಂಚಣಿ ಯೋಜನೆಯ ಡಿಜಿಟಲ್ ಲೈಫ್ ಪ್ರಮಾಣಪತ್ರವಾಗಿದೆ. ಇದು ಪಿಂಚಣಿದಾರರಿಗೆ ಆಧಾರ್ ಆಧಾರಿತ ಡಿಜಿಟಲ್ ಸೇವೆಯಾಗಿದ್ದು, ಬಯೋಮೆಟ್ರಿಕ್ ದೃಢೀಕರಣ ವ್ಯವಸ್ಥೆಯಿಂದ ಬೆಂಬಲಿತವಾಗಿದೆ. ಈ ಜೀವನ್ ಪ್ರಮಾಣಪತ್ರವು ಪಿಂಚಣಿ ಪಡೆಯಲು ಅವರ ಅಸ್ತಿತ್ವದ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಸದ್ಯ ಸರ್ಕಾರ ಈ ಜೀವನ್ ಪ್ರಮಾಣಪತ್ರ ಸಲ್ಲಿಕೆಯ ಜೊತೆಗೆ ಈ ಸಂಖ್ಯೆಯನ್ನು ನೀಡುವುದನ್ನು ಕಡ್ಡಾಯಗೊಳಿಸಿದೆ.
ಈ ನಂಬರ್ ಇಲ್ಲವಾದರೆ ಪಿಂಚಣಿ ರದ್ದು
ಪಿಂಚಣಿ ಪಡೆಯುವ ಪ್ರತಿಯೊಬ್ಬರಿಗೂ ಕೂಡ PPO ಸಂಖ್ಯೆ ಮುಖ್ಯವಾಗಿದೆ. PPO ಸಂಖ್ಯೆಯಲ್ಲಿ ಸಣ್ಣ ತಪ್ಪಾದರೂ ಕೂಡ ನಿಮ್ಮ ಪಿಂಚಣಿ ನಿಂತುಹೋಗುವ ಸಾಧ್ಯತೆ ಇರುತ್ತದೆ (PPO Number Rules). PPO ಸಂಖ್ಯೆಯು ಪಿಂಚಣಿದಾರರಿಗೆ ಪಿಂಚಣಿ ಪಡೆಯಲು ಸಹಾಯ ಮಾಡುವ ವಿಶಿಷ್ಟ 12 ಅಂಕೆಗಳ ಸಂಖ್ಯೆಯಾಗಿದೆ. 12 ಸಂಖ್ಯೆಗಳ ಮೊದಲ 5 ಅಂಕೆಗಳು PPO ನೀಡುವ ಪ್ರಾಧಿಕಾರದ ಕೋಡ್ ಸಂಖ್ಯೆಗಳಾಗಿವೆ. ಆರನೇ ಮತ್ತು ಏಳನೇ ಸಂಖ್ಯೆಗಳು PPO ಅನ್ನು ನೀಡಿದ ವರ್ಷವನ್ನು ಸೂಚಿಸುತ್ತವೆ.
ಇದರ ನಂತರ, ಎಂಟನೇ, ಒಂಬತ್ತನೇ, ಹತ್ತನೇ ಮತ್ತು ಹನ್ನೊಂದನೇ ಸಂಖ್ಯೆಗಳು PPO ಸಂಖ್ಯೆಯನ್ನು ಸೂಚಿಸುತ್ತವೆ. ಕೊನೆಯ ಹನ್ನೆರಡನೆಯ ಅಂಕೆಯು ಚೆಕ್ ಅಂಕೆಗಳನ್ನು ಪ್ರತಿನಿಧಿಸುತ್ತದೆ. ಇನ್ನು ಪಿಂಚಣಿದಾರರು ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸುವಾಗ ಪಿಂಚಣಿದಾರರ ಮೊಬೈಲ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಇದರ ಜೊತೆಗೆ ಸೆಲ್ಫ್ ಡಿಕ್ಲೆಡ್ ಜೊತೆಗೆ PPO ಸಂಖ್ಯೆ, ಪಿಂಚಣಿ ಖಾತೆ ಸಂಖ್ಯೆ ಬ್ಯಾಂಕ್ ಸಂಬಂಧಿತ ಮಾಹಿತಿ ಮತ್ತು ಪಿಂಚಣಿ ಮಂಜೂರಾತಿ ಪ್ರಾಧಿಕಾರದ ಹೆಸರನ್ನು ಕೂಡ ನೀಡಬೇಕಾಗುತ್ತದೆ.