Ads By Google

Kalki 2898D: ನಾನು ಆಕೆಯನ್ನ ಬಹಳ ಪ್ರೀತಿ ಮಾಡುತ್ತೇನೆ, ಪ್ರೀತಿ ಮಾಡುತ್ತಿರುವ ನಟಿಯ ಹೇಳಿದ ಪ್ರಭಾಸ್.

Actor Prabhas spoke about Deepika Padukone in an interview

Image Credit: timesofindia.indiatimes

Ads By Google

Prabhas About Deepika Padukone: ಪ್ರಭಾಸ್ (Prabhas) ದೇಶದ ಚಿತ್ರರಂಗದ ಟಾಪ್ ನಟ. ದೇಶದಲ್ಲಿ ಕೋಟ್ಯಂತರ ಅಭಿಮಾನಿಗಳನ್ನ ಹೊಂದಿರುವ ನಟ ಪ್ರಭಾಸ್ ಅವರು ಸದ್ಯ ಹಲವು ಸಮಯಗಳಿಂದ ಫ್ಲಾಪ್ ಸಿನಿಮಾಗಳಿಂದ ಜನರ ಬೇಸರಕ್ಕೆ ಕಾರಣವಾಗಿದ್ದ ನಟ ಪ್ರಭಾಸ್ ಅವರು ಸದ್ಯ ಸಾಲಾರ್ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ ಎಂದು ಹೇಳಬಹುದು. ಚಿತ್ರಗಳ ಜೊತೆಗೆ ಮದುವೆಯ ವಿಚಾರದಲ್ಲಿ ನಟ ಪ್ರಭಾಸ್ ಅವರು ಸಾಕಷ್ಟು ಚರ್ಚೆಯಲ್ಲಿ ಇದ್ದಾರೆ ಎಂದು ಹೇಳಬಹುದು.

ಮದುವೆಯ ವಯಸ್ಸು ಮೀರಿ ಹೋಗುತ್ತಿದೆ ಎಂದು ಸಾಕಷ್ಟು ಅಭಿಮಾನಿಗಳು ಪ್ರಭಾಸ್ ಅವರು ಪ್ರಶ್ನೆಯನ್ನ ಮಾಡುತ್ತಿದ್ದಾರೆ. ಇದರ ನಡುವೆ ನಟ ಪ್ರಭಾಸ್ ಅವರು ನಾನು ಒಬ್ಬರನ್ನ ಪ್ರೀತಿ ಮಾಡುತ್ತಿರುವುದರ ಬಗ್ಗೆ ಮಾತನಾಡಿದ್ದು ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Image Credit: cinejosh

ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಲವ್
ಕೆಲವು ಸಮಯಗಳ ನಟ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ (Anushka Shetty) ಅವರು ಸಾಕಷ್ಟು ಚಿತ್ರಗಳಲ್ಲಿ ನಟನೆಯನ್ನ ಮಾಡುವುದರ ಮೂಲಕ ಟಾಪ್ ಜೋಡಿ ಅನ್ನುವ ಹೆಗ್ಗಳಿಕೆಯನ್ನ ಕೂಡ ಪಡೆದುಕೊಂಡಿದ್ದರು. ಇಬ್ಬರ ನಡುವಿನ ಒಡನಾಟವನ್ನ ನೋಡಿದ ಸಾಕಷ್ಟು ಜನರು ಇಬ್ಬರು ಲವ್ ಮಾಡುತ್ತಿದ್ದು ಅವರಿಬ್ಬರೂ ಕೆಲವೇ ದಿನಗಳಲ್ಲಿ ಮದುವೆ ಕೂಡ ಆಗಲಿದ್ದಾರೆ ಎಂದು ಮಾತನಾಡಿಕೊಂಡಿದ್ದರು.

ಇನ್ನು ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದಂತೆ ನಟಿ ಅನುಷ್ಕಾ ಶೆಟ್ಟಿ ಅವರು ನನ್ನ ಮತ್ತು ಪ್ರಭಾಸ್ ನಡುವೆ ಏನು ಇಲ್ಲ ಮತ್ತು ಇದೊಂದು ಸುಳ್ಳು ಸುದ್ದಿ ಎಂದು ಸ್ಪಷ್ಟನೆಯನ್ನ ಕೂಡ ನೀಡಿದ್ದರು.

Image Credit: tollywood

ನಾನು ಆಕೆಯನ್ನ ಪ್ರೀತಿಸುತ್ತೇನೆ ಅಂದ ಪ್ರಭಾಸ್
ಸದ್ಯ ನಟ ಪ್ರಭಾಸ್ ಅವರ ಕಯ್ಯಲ್ಲಿ ಸಾಲು ಸಾಲು ಚಿತ್ರಗಳು ಇದ್ದು ನಟ ಪ್ರಭಾಸ್ ಅವರು ಶೂಟಿಂಗ್ ನಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಸದ್ಯ ಸಾಲಾರ್ ಚಿತ್ರದ ಬಿಡುಗಡೆಯ ಕೆಲಸದಲ್ಲಿ ನಟ ಪ್ರಭಾಸ್ ಅವರು ಬಹ ಬ್ಯುಸಿ ಆಗಿದ್ದು ಅವರ ಮುಂದಿನ ಚಿತ್ರವಾದ ಕಲ್ಕಿ 2989D ಚಿತ್ರದ ಶೂಟಿಂಗ್ ನಲ್ಲಿ ಕೂಡ ನಟ ಪ್ರಭಾಸ್ ಅವರು ಬ್ಯುಸಿ ಆಗಿದ್ದಾರೆ. ಇನ್ನು ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ನಾಯಕಿಯಾಗಿ ನಟನೆಯನ್ನ ಮಾಡುತ್ತಿದ್ದಾರೆ.

ದೀಪಿಕಾ ಪಡುಕೋಣೆ ನನಗೆ ಇಷ್ಟ ಅಂದ ಪ್ರಭಾಸ್
ಸಂದರ್ಶನದಲ್ಲಿ ಮಾತನಾಡಿದ ನಟ ಪ್ರಭಾಸ್ ಅವರು ದೀಪಿಕಾ ಪಡುಕೋಣೆ ಜೊತೆ ನಟನೆ ಮಾಡಿದ ಅನುಭವದ ಬಗ್ಗೆ ಮಾತನಾಡಿದ್ದಾರೆ. ದೀಪಿಕಾ ಪಡುಕೋಣೆ ಬಗ್ಗೆ ಮಾತನಾಡಿದ ನಟ ಪ್ರಭಾಸ್ ಅವರು, “ದೀಪಿಕಾ ಪಡುಕೋಣೆ ಒಬ್ಬ ಸೂಪರ್ ಸ್ಟಾರ್ ಮತ್ತು ಅತ್ಯಂತ ಸುಂದರ ಮಹಿಳೆ” ಎಂದು ಹೇಳಿದ್ದಾರೆ.

Image Credit: filmfare

ದೀಪಿಕಾ ಪಡುಕೋಣೆ ಸೆಟ್ ಗೆ ಬಂದಾಗ ನನಗೆ ಬಹಳ ರೋಮಾಂಚನ ಆಗಿತ್ತು, ನಾನು ಯಾವಾಗಲೂ ಅವರನ್ನ ಬಹಳ ಪ್ರೀತಿ ಮಾಡುತ್ತೇನೆ ಮತ್ತು ಅವರ ಜೊತೆ ಕೆಲಸ ಮಾಡುವ ಆಸೆ ನನಗೆ ಬಹಳ ಸಮಯದಿಂದ ಅದು ಈಗ ಕಲ್ಕಿ ಚಿತ್ರದ ಮೂಲಕ ಈಡೇರಿದೆ ಎಂದು ನಟ ಪ್ರಭಾಸ್ ಹೇಳಿದ್ದಾರೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field