Prabhas: ಪ್ರಭಾಸ್ ಆರೋಗ್ಯದಲ್ಲಿ ಮತ್ತೆ ಏರುಪೇರು, ಅಮೇರಿಕಾದ ಆಸ್ಪತ್ರೆಗೆ ಪ್ರಭಾಸ್ ದಾಖಲು

ಅನಾರೋಗ್ಯದ ಕಾರಣ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ ಪ್ರಭಾಸ್.

Prabhas Health Problem: ಟಾಲಿವುಡ್ ನ ಸ್ಟಾರ್ ನಟ ಪ್ರಭಾಸ್ (Prabhas) ಇದೀಗ ತಮ್ಮ ಆರೋಗ್ಯದ ವಿಚಾರವಾಗಿ ಸುದ್ದಿಯಾಗಿದ್ದಾರೆ. ಟಾಲಿವುಡ್ ನ ಬಹುಬೇಡಿಕೆಯ ನಟ ಈ ಹಿಂದೆ ಚಿತ್ರೀಕರಣದಲ್ಲಿ ಬಾರಿ ಬ್ಯುಸಿ ಆಗಿದ್ದರು. ಇತ್ತೀಚೆಗಷ್ಟೇ ಪ್ರಭಾಸ್ ಹಾಗೂ ಕೃತಿ ಸನೋನ್ ನಟನೆಯಲ್ಲಿ ರಾಮಾಯಣ ಕಥೆ ಆಧಾರಿತ ಆದಿಪುರುಷ ಚಿತ್ರ ತೆರೆ ಕಂಡಿತ್ತು.

ಈ ಚಿತ್ರದ ಬಿಡುಗಡೆಯ ಸಮಯದಲ್ಲಿ ಚಿತ್ರತಂಡ ಒಂದಿಷ್ಟು ವಿವಾದಕ್ಕೆ ಗುರಿಯಾಗಿತ್ತು. ಇನ್ನು ಆದಿಪುರುಷ್ ಚಿತ್ರ ನಿರೀಕ್ಷೆಗೆ ಮೀರಿದ ಯಶಸ್ಸು ಗಳಿಸಲಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಸ್ವಲ್ಪ ಮಟ್ಟಿಗೆ ಆದಿಪುರುಷ್ ಚಿತ್ರ ಸೋಲುಕಂಡಿದೆ. ಇನ್ನು ಪ್ರಭಾಸ್ ಆದಿಪುರುಷ್ ನಂತರ ಸಲಾರ್ ಚಿತ್ರದ ಚಿತ್ರೀಕರಣದತ್ತ ಗಮನ ಹರಿಸಿದ್ದರು.

Prabhas Health Problem
Image Credit: Timesofindia

ಪ್ರಭಾಸ್ ಅಭಿಮಾನಿಗಳಿಗೆ ಬೇಸರದ ಸುದ್ದಿ
ಇತ್ತೀಚೆಗಷ್ಟೇ ಸಲಾರ್ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು ಭರ್ಜರಿ ರೆಸ್ಪೋನ್ಸ್ ಲಭಿಸಿದೆ. ಟ್ರೈಲರ್ ನಲ್ಲಿಯೇ ಸಲಾರ್ ಸಾಕಷ್ಟು ಕುತೂಹಲ ಮೂಡಿಸಿದ್ದು ಈಗಲೂ ಕೂಡ ಸಲಾರ್ ಟ್ರೈಲರ್ ಆಗಾಗ ವೈರಲ್ ಆಗುತ್ತಾ ಇರುತ್ತದೆ. ಬಾಹುಬಲಿ ನಂತರ ಸಲಾರ್ ಯಶಸ್ಸಿಗಾಗಿ ಪ್ರಭಾಸ್ ಕಾಯುತ್ತಿದ್ದಾರೆ.

ಇನ್ನು ಸಲಾರ್ ಚಿತ್ರ ಬಹುತೇಕ ಚಿತ್ರೀಕರಣ ಮುಗಿದಿದ್ದು ಸದ್ಯದಲ್ಲೇ ತೆರೆ ಮೇಲೆ ಬರಲಿದೆ. ಪ್ರಭಾಸ್ ಅಭಿಮಾನಿಗಳು ಸಲಾರ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸಲಾರ್ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ಬಾಹುಬಲಿ ನಟನ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ.

ಅನಾರೋಗ್ಯದ ಕಾರಣ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ ಪ್ರಭಾಸ್
ಪ್ರಭಾಸ್ ಅವರ ಅಭಿಮಾನಿಗಳಿಗೆ ಬೇಸರದ ಸುದ್ದಿಯೊಂದು ಕೇಳಿಬಂದಿದೆ. ಸಲಾರ್ ಚಿತ್ರೀಕರಣದ ಬಳಿಕ ಪ್ರಭಾಸ್ ‘ಕಲ್ಕಿ 2898’ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಆದರೆ ಪ್ರಭಾಸ ಅನಾರೋಗ್ಯದ ಕಾರಣ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದಾರೆ. ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ನೀಡಿ ಪ್ರಭಾಸ್ ಅಮೆರಿಕಾಗೆ ತೆರಳಿದ್ದಾರೆ.

Join Nadunudi News WhatsApp Group

Prabhas Health Problem
Image Credit: Telugu360

ಅಮೇರಿಕಾದ ಆಸ್ಪತ್ರೆಗೆ ತೆರಳಿದ್ದಾರೆ ಬಾಹುಬಲಿ ನಟ
ಅಮೇರಿಕಾದಲ್ಲಿ ಮೊಣಕಾಲಿನ ಶಸ್ತ್ರ ಚಿಕಿತ್ಸೆಗೆ ಪ್ರಭಾಸ್ ಒಳಗಾಗಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಪ್ರಭಾಸ್ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಕಲ್ಕಿ 2898 ಸಿನಿಮಾ ಚಿತ್ರೀಕರಣವನ್ನು ಈ ಡಿಸೇಂಬರ್ ನಲ್ಲಿಮುಗಿಸಿ ಬಳಿಕ ಅಮೆರಿಕಾಗೆ ತೆರಳಿ ನ್ಯೂಯಾರ್ಕ್ ಪ್ರಖ್ಯಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ಪ್ರಭಾಸ್ ಅವರ ಅನಾರೋಗ್ಯದ ವಿಷಯ ತಿಳಿದು ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Join Nadunudi News WhatsApp Group