Pradeep Eshwar: ಪ್ರಭಾವಿ ಸಚಿವ ಸುಧಾಕರ್ ಅವರನ್ನು ಸೋಲಿಸಲು ಖರ್ಚಾದ ಹಣ ಎಷ್ಟೆಂದು ತಿಳಿಸಿದ ಪ್ರದೀಪ್ ಈಶ್ವರ್.
ಸಚಿವ ಸುಧಾಕರ್ ಅವರನ್ನ ಸೋಲಿಸಲು ಖರ್ಚಾದ ಹಣ ಎಷ್ಟು ಎಂದು ತಿಳಿಸಿದ ಪ್ರದೀಪ್ ಈಶ್ವರ್.
Pradeep Eshwar Chikkaballapur MLA: ಕರ್ನಾಟಕದ ವಿಧಾನಸಭೆ ಎಲೆಕ್ಷನ್ ಬಳಿಕ ಅನೇಕ ಹೊಸಮುಖಗಳು ರಾಜ್ಯದಲ್ಲಿ ವಿಧಾನ ಸೌಧದ ಮೆಟ್ಟಿಲೇರಿದ್ದಾರೆ. ಬಿಜೆಪಿ ಆಡಳಿತದ ವಿರುದ್ಧ ಬೇಸೆತ್ತ ಜನತೆ ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರ ನೀಡಿದ್ದಾರೆ. ಅದರಲ್ಲೂ ಪಕ್ಷೇತರರಾಗಿ ಬಂದ ಅನೇಕ ಬಿಜೆಪಿಯ ಶಾಸಕರು ಸೋತಿದ್ದಾರೆ. ಇದರಲ್ಲಿ ಹೆಚ್ಚು ಸದ್ದು ಮಾಡಿದ್ದೂ ಚಿಕ್ಕ ಬಳ್ಳಾಪುರ ಕ್ಷೇತ್ರ.
ಪರಾಭವಗೊಂಡ ಅರೋಗ್ಯ ಸಚಿವ ಸುಧಾಕರ್.
ಕಾಂಗ್ರೆಸ್ ನ ಹೊಸ ಮುಖ ಹಾಗು ವೃತ್ತಿಯಲ್ಲಿ ಕೋಚಿಂಗ್ ಕ್ಲಾಸ್ ನಡೆಸುತ್ತಿರುವ ಸಾಮಾನ್ಯ ಕಾರ್ಯಕರ್ತ ಪ್ರದೀಪ್ ಈಶ್ವರ್ ಎದುರು ಅರೋಗ್ಯ ಸಚಿವ ಸುಧಾಕರ್ ಸೊತ್ತಿರುವುದು ಬಿಜೆಪಿಯ ನಿದ್ದೆಗೆಡಿಸಿತ್ತು. ರಾಜ್ಯವೇ ಎದುರು ನೋಡಿದ್ದ ಈ ರಿಸಲ್ಟ್ ಎಲ್ಲರಿಗೆ ಅಚ್ಚರಿ ತಂದಿತ್ತು.
ಮೋಟಿವೇಷನ್ ಸ್ಪೀಕರ್ ಈಶ್ವರ್ ಇದೀಗ ಶಾಸಕ
ತನ್ನ ಮಾತುಗಳ ಮೂಲಕವೇ ಅನೇಕರನ್ನು ಹುರಿದುಂಬಿಸುತ್ತಿದ್ದ ಪ್ರದೀಪ್ ಈಶ್ವರ್ ಇದೀಗ ಶಾಸಕನಾಗಿ ಹೊರಹೊಮ್ಮಿದ್ದಾರೆ. ಪ್ರಭಾವಿ ನಾಯಕ ಸುಧಾಕರ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿರುವ ಪ್ರದೀಪ್ ಈಶ್ವರ್ ನಾನು ಯಾವುದೇ ಕೋಶ ಖರ್ಚು ಮಾಡದೇ ಬಹಳ ಸರಳವಾಗಿ ಜನಾದೇಶದ ಮೂಲಕ ಗೆದಿದ್ದೇನೆ ಎಂದಿದ್ದಾರೆ. ಗೆಳೆಯರಿಂದ ಸಾಲ ಮಾಡಿ 27 ರಿಂದ 37 ಲಕ್ಷದವರೆಗೆ ಎಲೆಕ್ಷನ್ ಓಡಾಟಕ್ಕೆ ಖರ್ಚು ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಗೆದ್ದ ಮಾರನೇ ದಿನವೇ ಜನರ ಸಮಸ್ಯೆ ಆಲಿಸಲು ಮನೆಗೆ ತೆರಳಿದ ಪ್ರದೀಪ್ ಈಶ್ವರ್
ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಲ್ಲೂ ಪ್ರದೀಪ್ ಈಶ್ವರ್ ಅವರ ವಿಡಿಯೊಗಳದ್ದೇ ಹವಾ. ಮನೆ ಮನೆಗೆ ತೆರಳಿ ಜನರ ಸಮಸ್ಯೆ ಅಳಿಸಿ ಅಲ್ಲಿಯೇ ಪರಿಹಾರ ಕೊಡಲು ಸೂಚಿಸುತ್ತಿದ್ದಾರೆ ನೂತನ ಶಾಸಕ. ಚಿಕ್ಕಬಳ್ಳಾಪುರದ ಜನತೆ ಕೂಡ ಇದಕ್ಕೆ ಉತ್ತಮ ಸ್ಪಂದನೆ ನೀಡುತ್ತಿದ್ದಾರೆ, ಇಂತಹ ಶಾಸಕ ನಮಗೆ ಬೇಕಿತ್ತು ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ.