Awas Eligibility: ಯಾರು ಯಾರಿಗೆ ಸಿಗಲಿದೆ ಮನೆ ಕಟ್ಟಲು ಕೇಂದ್ರದಿಂದ ಸಬ್ಸಿಡಿ ಹಣ, ಮನೆ ಕಟ್ಟುವ ಕನಸು ನನಸಾಗಿಸಿಕೊಳ್ಳಿ.

ಆವಾಸ್ ಯೋಜನೆಯ ಲಾಭ ಯಾರು ಯಾರಿಗೆ ಸಿಗಲಿದೆ.

Awas Yojana Application Details: ಕೇಂದ್ರದ ಮೋದಿ ಸರ್ಕಾರವು ಈಗಾಗಲೇ Pradhan Mantri Awas ಯೋಜನೆಯ ಅಡಿಯಲ್ಲಿ 1.19 ಕೋಟಿ ಮನೆಗಳನ್ನು ಮಂಜೂರು ಮಾಡಿದೆ ಮತ್ತು ಈಗಾಗಲೇ 75 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ತಲುಪಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ದೇಶದ ಬಡ ಜನರು ಅರ್ಜಿ ಸಲ್ಲಿಸುವ ಮೂಲಕ ಮನೆ ನಿರ್ಮಾಣಕ್ಕೆ ಹಣವನ್ನು ಪಡೆದುಕೊಳ್ಳಬಹುದು. ಸ್ವಂತ ಮನೆ ನಿರ್ಮಾಣದ ಕನಸಿಗೆ PMAY ಸಹಾಯವಾಗಲಿದೆ. ಆರ್ಥಿಕವಾಗಿ ಹಿಂದುಳಿದ, ಕಡಿಮೆ ಆದಾಯ ಮತ್ತು ಮಧ್ಯಮ ಆದಾಯದ ಜನರಿಗೆ ಈ PM ಆವಾಸ್ ಯೋಜನೆಯ ಲಾಭ ಸಿಗಲಿದೆ.

pradhan mantri awas yojana
Image Credit: Haribhoomi

Pradhan Mantri Awas Yojana
ಮೂರು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಯಾವುದೇ ವ್ಯಕ್ತಿಯು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದು. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮೂರು ಕಂತುಗಳಲ್ಲಿ ಹಣವನ್ನು ನೀಡಲಾಗುತ್ತದೆ. ಮೊದಲನೆಯ ಕಂತಿನಲ್ಲಿ 50,000, ಎರಡನೆಯ ಕಂತಿನಲ್ಲಿ 1.50 ಲಕ್ಷ, ಮೂರನೆಯ ಕಂತಿನಲ್ಲಿ 50,000 ಹಣವನ್ನು ನೀಡಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅರ್ಜಿದಾರರಿಗೆ ಶೀಘ್ರವೇ ಮನೆ ಲಭ್ಯವಾಗುವ ಬಗ್ಗೆ ಮಾಹಿತಿ ಲಭಿಸಿದೆ.

ಯಾರು ಯಾರಿಗೆ ಸಿಗಲಿದೆ ಮನೆ ಕಟ್ಟಲು ಕೇಂದ್ರದಿಂದ ಸಬ್ಸಿಡಿ ಹಣ
Credit Linked Sertainty Scheme (CLSS ) PM ಆವಾಸ್ ಯೋಜನೆಯ ಅಂಶವಾಗಿದೆ. CLSS ಯೋಜನೆಯು EW , LIG ಮತ್ತು MIG ಗಾಗಿ ಗೃಹ ಸಾಲಗಳ ಮೇಲೆ ಬಡ್ಡಿ ಸಬ್ಸಿಡಿಯನ್ನು ನೀಡುತ್ತದೆ. ಅನುಧಾನ ಮೊತ್ತವು ಸಾಲದ ಮೊತ್ತದ 6 .5 ಪ್ರತಿಶತದವರೆಗೆ ಇರುತ್ತದೆ.

Pradhan Mantri Awas Yojana Latest Update
Image Credit: Jagran

ಕೆಲವು ರಾಜ್ಯ ಸರ್ಕಾರಗಳು ಹಬ್ಬದ ಋತುಗಳಲ್ಲಿ ಸ್ಟ್ಯಾಂಪ್ ಮತ್ತು ನೋಂದಣಿ ಶುಲ್ಕವನ್ನು ವಿನಾಯಿತಿ ನೀಡುತ್ತವೆ. ಕೈಗೆಟುಕುವ ದರದ ವಸತಿಗಾಗಿ ನಿರ್ಮಾಣ ಆಸ್ತಿಗಳ ಮೇಲಿನ GST ಯನ್ನು ಶೇ. 12 ರಿಂದ ಶೇ. 5 ಕ್ಕೆ ಮತ್ತು ಇತರ ಆಸ್ತಿಗಳಿಗೆ ಶೇ. 18 ರಿಂದ ಶೇ. 5 ಕ್ಕೆ ಸರ್ಕಾರ ಇಳಿಸಿದೆ. ಈ ಕಡಿತವು ಆಸ್ತಿಯ ಒಟ್ಟು ವೆಚ್ಚ ಮತ್ತು ಗೃಹ ಸಾಲದ ಮೊತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Join Nadunudi News WhatsApp Group

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ
*pmaymis.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

*ಅಲ್ಲಿ ಸಿಟಿಜನ್ ಅಸೆಸ್ಮೆಂಟ್ ಆಯ್ಕೆಯನ್ನು ಆರಿಸಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿಮಾಡಿ ಚೆಕ್ ಮೇಲೆ ಕ್ಲಿಕ್ ಮಾಡಬೇಕು.

pradhan mantri awas yojana latest update
Image Credit: Original Source

*ನಂತರ ಆನ್ಲೈನ್ ಫಾರ್ಮ್ ತೆರೆಯುತ್ತದೆ.

*ಅಲ್ಲಿ ಕೇಳಿದ ಮಾಹಿತಿಯನ್ನು ಭರ್ತಿಮಾಡಿ, ಅರ್ಜಿಯನ್ನು ಸಲ್ಲಿಸಬೇಕು.

*ಅರ್ಜಿ ಸಲ್ಲಿಕೆಯ ನಂತರ ಅಲ್ಲಿ ಅಪ್ಲಿಕೇಶನ್ ಸಂಖ್ಯೆ ಕಾಣಿಸುತ್ತದೆ. ಈ ಮೂಲಕ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group