Awas Yojana: ಮನೆ ಕಟ್ಟುತ್ತಿರುವ ಬಡವರ ಖಾತೆಗೆ ಬಂದಿದೆ 2.5 ಲಕ್ಷ ರೂಪಾಯಿ, ನಿಮ್ಮ ಖಾತೆಗೂ ಬಂದಿರಬಹುದು ಚೆಕ್ ಮಾಡಿ.
ಮನೆ ಕಟ್ಟುತ್ತಿರುವ ಬಡವರ ಖಾತೆಗೆ ಆವಾಸ್ ಯೋಜನೆಯ ಅಡಿಯಲ್ಲಿ 2.5 ಲಕ್ಷ ರೂಪಾಯಿ ಸಿಗಲಿದೆ.
Pradhan Mantri Awas Yojana: ದೇಶದ ಬಡ ನಾಗರಿಕರಿಗೆ ನೆರವಾಗಲು ಕೇಂದ್ರದ ನರೇಂದ್ರ ಮೋದಿ (Narendra Modi) ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಜನಸಾಮಾನ್ಯರು ಎಲ್ಲಾ ಯೋಜನೆಯನ್ನು ಲಾಭವನ್ನು ಪಡೆಯುತ್ತಿದ್ದಾರೆ.
ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆ (Pradhan Mantri Awas Yojana) ನಿರ್ಗತಿಕರಿಗಾಗಿ ಮನೆ ನಿರ್ಮಿಸುವ ಸಲುವಾಗಿ ಜಾರಿಗೊಳಿಸಲಾಗಿದೆ. ಈ ಯೋಜನೆಯ ಅಡಿಯಲ್ಲಿ ಸಾಕಷ್ಟು ಅರ್ಜಿದಾರರು ಹಣವನ್ನು ಪಡೆಯುತ್ತಿದ್ದಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pradhan Mantri Awas Yojana)
ಮೂರು ಲಕ್ಷಕ್ಕಿಂತ ಕಡಿಮೆ ಆದಾಯವನ್ನು ಹೊಂದಿರುವ ಯಾವುದೇ ವ್ಯಕ್ತಿಯು ಕೂಡ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಬಹುದು. ಇನ್ನು ವ್ಯಕ್ತಿಗೆ ಮನೆ ನಿರ್ಮಾಣ ಮಾಡಿಕೊಡಲು ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 2.50 ಲಕ್ಷ ಹಣ ನೀಡುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮೂರು ಕಂತುಗಳಲ್ಲಿ ಹಣವನ್ನು ನೀಡಲಾಗುತ್ತದೆ. ಮೊದಲನೆಯ ಕಂತಿನಲ್ಲಿ 50,000, ಎರಡನೆಯ ಕಂತಿನಲ್ಲಿ 1.50 ಲಕ್ಷ, ಮೂರನೆಯ ಕಂತಿನಲ್ಲಿ 50,000 ಹಣವನ್ನು ನೀಡಲಾಗುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಆನ್ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
pmaymis.gov.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
*ಅಲ್ಲಿ ಸಿಟಿಜನ್ ಅಸೆಸ್ಮೆಂಟ್ ಆಯ್ಕೆಯನ್ನು ಆರಿಸಿ ಆಧಾರ್ ಕಾರ್ಡ್ ಸಂಖ್ಯೆಯನ್ನು ಭರ್ತಿಮಾಡಿ ಚೆಕ್ ಮೇಲೆ ಕ್ಲಿಕ್ ಮಾಡಬೇಕು.
*ನಂತರ ಆನ್ಲೈನ್ ಫಾರ್ಮ್ ತೆರೆಯುತ್ತದೆ.
*ಅಲ್ಲಿ ಕೇಳಿದ ಮಾಹಿತಿಯನ್ನು ಭರ್ತಿ ಮಾಡಿ, ಅರ್ಜಿಯನ್ನು ಸಲ್ಲಿಸಬೇಕು.
*ಅರ್ಜಿ ಸಲ್ಲಿಕೆಯ ನಂತರ ಅಲ್ಲಿ ಅಪ್ಲಿಕೇಶನ್ ಸಂಖ್ಯೆ ಕಾಣಿಸುತ್ತದೆ. ಈ ಮೂಲಕ ನೀವು ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಆವಾಸ್ ಯೋಜನೆಯ ಪಟ್ಟಿ ಪರಿಶೀಲಿಸುವ ವಿಧಾನ
ಇನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪಟ್ಟಿಯನ್ನು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಿಕೊಳ್ಳಬಹುದು. ಸಿಟಿಜನ್ ಅಸೆಸ್ಮೆಂಟ್ ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ ಟ್ರ್ಯಾಕ್ ಯುವರ್ ಅಸ್ಸೇಸ್ಮೆಂಟ್ ಸ್ಟೇಟಸ್ ಆಯ್ಕೆಯ ಮೇಲೆ ಮಾಡಿ, ನಂತರ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಸ್ಟಿಯನ್ನು ಪರಿಶೀಲಿಸಲು ಕೇಳುವ ಎಲ್ಲ ಮಹಿತಿಯನ್ನು ನೀಡಬೇಕು.
ಇದಾದ ನಂತರ ನೀವು ನಿಮ್ಮ ರಾಜ್ಯ, ಜಿಲ್ಲೆ ಮತ್ತು ನಗರ ಇತ್ಯಾದಿಗಳನ್ನು ಆಯ್ಕೆ ಮಾಡಿ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಿದರೆ ವಿವರ ತಿಳಿದುಕೊಳ್ಳಬಹುದು.