Jan Aushadhi: ಜನೌಷಧಿ ಕೇಂದ್ರವನ್ನು ಸ್ಥಾಪಿಸುವ ವಿಧಾನ ಹೇಗೆ…? ಎಷ್ಟು ಬಂಡವಾಳ ಬೇಕು…? ಈ ರೀತಿಯಾಗಿ ಅರ್ಜಿ ಸಲ್ಲಿಸಿ.
ಪ್ರಧಾನ್ ಮಂತ್ರಿ ಜನೌಷಧಿ ಕೇಂದ್ರ ವನ್ನು ಸ್ಥಾಪಿಸಲು ಈ ರೀತಿಯಾಗಿ ಅರ್ಜಿ ಸಲ್ಲಿಸಿ.
Pradhan Mantri Bharatiya Jan aushadhi: ಜನರು ಹೆಚ್ಚಾಗಿ ಸ್ವಂತ ವ್ಯವಹಾರದ ಕಡೆ ಯೋಚಿಸುತ್ತಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಸಿಗುವಂತಾದ ಉದ್ಯೋಗದ ಬಗ್ಗೆ ಜನರು ಹೆಚ್ಚಿನ ಗಮನ ಹರಿಸುತ್ತಾರೆ ಎನ್ನಬಹುದು. ಇನ್ನು ದೇಶದಲ್ಲಿ ಪ್ರಧಾನ ಮಂತ್ರಿ ಅವರ ಭಾರತೀಯ ಜನೌಷಧಿ ಕೇಂದ್ರ (Pradhan Mantri Bharatiya Janaushadhi) ಇರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಸ್ವಂತ ವ್ಯವಹಾರದ ಆಯ್ಕೆಗೆ ಈ ಜನೌಷಧಿ ಕೇಂದ್ರ ಉತ್ತಮ ಆಯ್ಕೆ ಎನ್ನಬಹದು.
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ
ಪ್ರಧಾನ ಮಂತ್ರಿ ಅವರ ಭಾರತೀಯ ಜನೌಷಧಿ ಕೇಂದ್ರ ಹೆಸರಿನಲ್ಲಿ ದೇಶದೆಲ್ಲೆಡೆ ಸಾಕಷ್ಟು ಮೆಡಿಕಲ್ ಶಾಪ್ ಗಳು ಜನರಿಗೆ ಲಭ್ಯವಾಗಿದೆ. ಇತರ ಮೆಡಿಕಲ್ ಶಾಪ್ ಗಳಿಗೆ ಹೋಲಿಸಿದರೆ ಪ್ರಧಾನ ಮಂತ್ರಿ ಅವರ ಭಾರತೀಯ ಜನೌಷಧಿ ಕೇಂದ್ರದಲ್ಲಿ ಅತಿ ಕಡಿಮೆ ದರದ್ಲಲಿ ಔಷದಗಳು ದೊರೆಯುತ್ತವೆ. ನೀವು ಕೂಡ ಈ ಜನೌಷಧ ಕೇಂದ್ರವನ್ನು ಸ್ಥಾಪಿಸುವ ಮೂಲಕ ನಿಮ್ಮ ಸ್ವಂತ ವ್ಯವಹಾರವನ್ನು ಮಾಡಿಕೊಳ್ಳಬಹುದು. ಈ ಜನೌಷಧಿ ಕೇಂದ್ರವನ್ನು ಸ್ಥಾಪಿಸಲು ಶರತ್ತುಗಳೇನು..? ಹಾಗೆಯೆ ಇದರಿಂದ ಎಷ್ಟು ಲಾಭವನ್ನು ಪಡೆಯುವ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.
ಜನೌಷಧಿ ಕೇಂದ್ರವನ್ನು ಸ್ಥಾಪಿಸುವ ವಿಧಾನ ಹೇಗೆ..?
ಈಗಾಗಲೇ ದೇಶದಲ್ಲಿ 9400 ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜನೌಷಧಿ ಕೇಂದ್ರದಲ್ಲಿ 1800 ಬಗೆಯ ಔಷಧಗಳು ಮತ್ತು 285 ವೈದ್ಯಕೀಯ ಉಪಕರಣಗಳು ಲಭ್ಯವಾಗುವಂತೆ ಮಾಡಲಾಗಿದೆ. ನೀವು ಜನೌಷಧಿ ಕೇಂದ್ರವನ್ನು ಸ್ಥಾಪಿಸುವ ಆಲೋಚನೆಯಲಿದ್ದಾರೆ ಮೊದಲು ಪ್ರಧಾನಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಅರ್ಜಿ ಶುಲ್ಕವಾಗಿ 5000 ರೂ. ನೀಡಬೇಕಾಗುತ್ತದೆ. ಅರ್ಜಿದಾರರು ಡಿ-ಫಾರ್ಮಾ ಅಥವಾ ಬಿ-ಫಾರ್ಮಾ ಪ್ರಮಾಣಪತ್ರವನ್ನು ಹೊಂದಿರಬೇಕು. ಜನೌಷಧಿ ಕೇಂದ್ರ ಸ್ಥಾಪಿಸಲು ಸಾಕಷ್ಟು ಸ್ಥಳಾವಕಾಶ ಇರಬೇಕು. ಸ್ಥಳವು ಕನಿಷ್ಠ 120 ಚದರ ಅಡಿ ಇರಬೇಕು. ಜನೌಷಧಿ ಕೇಂದ್ರ ಸ್ಥಾಪಿಸಲು ಬಯಸುವವರಿಗೆ ಕೇಂದ್ರ ಸರ್ಕಾರ ಇದಕ್ಕಾಗಿ ರೂ .5 ಲಕ್ಷದ ವರೆಗೆ ನೆರವು ನೀಡುವ ಮೂಲಕ ಉತ್ತೇಜನ ನೀಡುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹೇಗೆ
*ಜನೌಷಧಿ ಕೇಂದ್ರದ ಸ್ಥಾಪನೆಗೆ ಮುಖ್ಯವಾಗಿ ಆಧಾರ್ ಕಾರ್ಡ್, ಫಾರ್ಮಾಸಿಸ್ಟ್ ನೋಂದಣಿ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ವಾಸಸ್ಥಳ ಪ್ರಮಾಣಪತ್ರವನ್ನ ಹೊಂದಿರಬೇಕು.
*ಅರ್ಜಿ ಸಲ್ಲಿಸಲು ಅಧಿಕೃತ http://janaushdhi.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ‘Apply For central ‘ ಆಯ್ಕೆಯ ಮೇಲೆ ಕ್ಲಿಕ್ ಮಾಡುತ್ತಾ ಮುಂದಿನ ಹಂತವನ್ನು ಪೂರ್ಣಗೊಳಿಸಬೇಕು.
*ವೆಬ್ ಸೈಟ್ ಗೆ ಸೈನ್ ಇನ್ ಆದ ಮೇಲೆ ನಂತರ ರಾಜ್ಯವನ್ನು ಆಯ್ಕೆ ಮಾಡಿ ಮತ್ತು ID ಪಾಸ್ವರ್ಡ್ ವಿಭಾಗದಲ್ಲಿ ಪಾಸ್ವರ್ಡ್ ಅನ್ನು ನಮೂದಿಸಿ.
*ಇದಾದ ಬಳಿಕ ನಿಯಮಗಳು ಮತ್ತು ಷರತ್ತುಗಳ ಮೇಲೆ ಕ್ಲಿಕ್ ಮಾಡಿ ಮತ್ತು ಆನ್ ಲೈನ್ ಪರಿಶೀಲನೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು Submit ಆಯ್ಕೆ ಆರಿಸಿದರೆ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.