PMGKY: ದೀಪಾವಳಿಗೂ ಮುನ್ನವೇ BPL ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್, 5 ವರ್ಷ ಸಂಪೂರ್ಣ ಉಚಿತ
BPL ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಇನ್ನೊಂದು ಘೋಷಣೆ.
Pradhan Mantri Garib Kalyan Yojana: ದೇಶದಲ್ಲಿ 2020 ರಲ್ಲಿ Pradhan Mantri Garib Kalyan Yojana (MPGKY ) ಪ್ರಾರಂಭವಾಗಿದೆ. ಈ ಯೋಜನೆಯಡಿ ದೇಶದ ಬಡ ಜನರು ಉಚಿತವಾಗಿ 5KG ಅಕ್ಕಿಯನ್ನು ಪಡೆಯುತ್ತಿದ್ದಾರೆ. ಕೇಂದ್ರದ ಮೋದಿ ಸರ್ಕಾರ ಪರಿಚಯಿಸಿರುವ ಈ ಯೋಜನೆಯಡಿ ದೇಶದ ಜನರು ಉಚಿತ ಪಡಿತರ ಲಾಭವನ್ನು ಪಡೆಯುತ್ತಿದ್ದಾರೆ. PMGKY ಸಾಕಷ್ಟು ಬಡ ಕುಟುಂಬಗಳಿಗೆ ನೆರವಾಗಿದೆ ಎನ್ನಬಹುದು.
ಇನ್ನು 2020 ರಲ್ಲಿ ಕರೋನ ಸಾಂಕ್ರಾಮಿಕ ಉಂಟಾದಾಗ ಮೋದಿ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಪ್ರಸ್ತುತ ಈಗಲೂ ಕೂಡ ದೇಶದ 85 ಕೋಟಿಗೂ ಹೆಚ್ಚಿನ ಜನರು ಈ ಯೋಜನೆಯಡಿ ಉಚಿತ ಪಂಡಿತರನ್ನು ಪಡೆಯುತ್ತಿದ್ದಾರೆ. ಸದ್ಯ ಕೇಂದ್ರದ ಮೋದಿ ಸರ್ಕಾರ ಈ ಯೋಜನೆಯ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ದೇಶದ ಜನತೆಗೆ ಕೇಂದ್ರ ಸರ್ಕಾರ ಖುಷಿ ನೀಡಿದೆ.
ಕೇಂದ್ರದ ಉಚಿತ ಪಡಿತರ ವಿತರಣೆ ಇನ್ನೂ 5 ವರ್ಷ ವಿಸ್ತರಣೆ
ಮುಂದಿನ ಬಾರಿ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. 2024 ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣಾ ಕಾರಣ ವಿವಿಧ ಪಕ್ಷಗಳು ಬಾರಿ ಸಿದ್ಧತೆ ನಡೆಸುತ್ತಿದೆ ಎನ್ನಬಹುದು. ಈ ಚುನಾವಣೆಯ ಕಾರಣಕ್ಕಾಗಿ ದೇಶದಲ್ಲಿ ವಿವಿಧ ಯೋಜನೆಗಳು ತಲೆ ಎತ್ತಿಕೊಳ್ಳಲಿವೆ.
ಸದ್ಯ ಕೇಂದ್ರದ ಮೋದಿ ಸರ್ಕಾರ ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ಬಡವರಿಗಾಗಿ ಹೊಸ ಘೋಷಣೆ ಹೊರಡಿಸಿದೆ. ಈ ಹಿಂದೆ PMGKY ಯೋಜನೆಯಡಿ ವಿತರಿಸಲಾಗುತ್ತಿದ್ದ ಉಚಿತ 5kg ಪಡಿತರ ವಿತರಣೆ ಇನ್ನು ಮುಂದಿನ 5 ವರ್ಷ ವಿಸ್ತರಣೆ ಆಗಲಿದೆ ಎಂದು ಮೋದಿ ಸರ್ಕಾರ ಘೋಷಣೆ ಹೊರಡಿಸಿದೆ. ಮುಂದಿನ 5 ವರ್ಷಗಳ ಕಾಲ 80 ಕೋಟಿಗೂ ಹೆಚ್ಚು ಜನರಿಗೆ ಉಚಿತವಾಗಿ 5KG ಅಕ್ಕಿ ನೀಡಲು ಸರ್ಕಾರ ನಿರ್ಧರಿಸಿದೆ.
ಮೋದಿ ಸರ್ಕಾರದಿಂದ ಅಧಿಕೃತ ಘೋಷಣೆ
ಬಿಜೆಪಿ ಸರ್ಕಾರವು ಮುಂದಿನ 5 ವರ್ಷಗಳವರೆಗೆ ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರವನ್ನು ಒದಗಿಸುವ ಯೋಜನೆಯನ್ನು ವಿಸ್ತರಿಸಲು ನಾನು ನಿರ್ಧರಿಸಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವು ಯಾವಾಗಲೂ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನನಗೆ ಶಕ್ತಿಯನ್ನು ನೀಡುತ್ತದೆ ಎಂದು ಛತ್ತೀಸಗಡ ವಿಧಾನಸಭಾ ಚುನಾವಣೆಯಲ್ಲಿ ಭಾಗಿಯಾದ ದೇಶದ ಪ್ರಧಾನಿ ಮೋದಿ ಅವರು ಹೇಳಿಕೆ ನೀಡಿದ್ದಾರೆ.