Medicine Price: ಇನ್ನುಮುಂದೆ ಇಂತಹ ಔಷಧಿಗಳ ಬೆಲೆ ಕೇವಲ 15 ರೂ ಮಾತ್ರ, ಕೇಂದ್ರದ ಮಹತ್ವದ ಘೋಷಣೆ.

ಉತ್ತಮ ಗುಣಮಟ್ಟದ ಔಷಧಿಗಳು ಕೇವಲ 15 ರೂಪಾಯಿಗೆ ಲಭ್ಯ.

Pradhan Mantri Jan Aushadhi Kendra: ಭಾರತದಲ್ಲಿ ಅನೇಕ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ (Jan Aushadhi Kendra)ಗಳಿವೆ. ಖಾಸಗಿ ಔಷಧಿ ಕೇಂದ್ರಗಳಿಗೆ ಹೋಲಿಸಿದರೆ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಔಷಧಿಗಳು ದೊರೆಯುತ್ತದೆ. ಹಾಗೆ ಉತ್ತಮ ಗುಣಮಟ್ಟದ ಔಷಧಿಗಳನ್ನು ಪ್ರಧಾನಿ ಮಂತ್ರಿ ಜನೌಷಧಿ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ.

ಸ್ವಾತಂತ್ರ್ಯ ದಿನದಂದು ದೇಶದ ಜನರಿಗೆ ಪ್ರಧಾನ ಮಂತ್ರಿ (Pradhan Mantri) ಅವರು ಸಿಹಿ ಸುದ್ದಿ ನೀಡಿದ್ದಾರೆ. ಕಡಿಮೆ ಬೆಲೆಯಲ್ಲಿ ಔಷಧಿಗಳನ್ನು ನೀಡುವ ಮೆಡಿಕಲ್ ಶಾಪ್ (Medical Shop)ಗಳನ್ನೂ ದೇಶದಾದ್ಯಂತ ತೆರೆಯಲಾಗುವುದು ಎಂದು ಘೋಷಣೆ ಹೊರಡಿಸಿದ್ದಾರೆ.

100 rupee medicine is available for just 15 rupees
Image Credit: Financialexpress

 

ಪ್ರಧಾನ್ ಮಂತ್ರಿ ಜನೌಷಧಿ ಕೇಂದ್ರ (Pradhan Mantri Jan Aushadhi Kendra)
ಜನೌಷಧಿ ಕೇಂದ್ರ ಎಂಬ ಯೋಜನೆ ಮೂಲಕ ಕೇಂದ್ರ ಸರ್ಕಾರ (Central Government)ಮೆಡಿಕಲ್ ಶಾಪ್ ಗಳನ್ನೂ ತೆರೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಕೇಂದ್ರ ಸರ್ಕಾರ ತೆರೆದ ಮೆಡಿಕಲ್ ಶಾಪ್ ಗಳಲ್ಲಿ ಕಡಿಮೆ ಬೆಲೆಗೆ ಔಷಧಿಗಳು ದೊರೆಯುತ್ತವೆ.

ಇದರಿಂದಾಗಿ ಬಡ ಜನರು ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಗೆ ಔಷಧಿಗಳನ್ನು ಖರೀದಿಸಬಹುದಾಗಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತ 25,000 ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಘೋಷಣೆ ಹೊರಡಿಸಿದ್ದಾರೆ.

Join Nadunudi News WhatsApp Group

Pradhan Mantri Jan Aushadhi Kendra
Image Credit: Justdial

100 ರೂಪಾಯಿ ಔಷಧಿ ಕೇವಲ 15 ರೂಪಾಯಿಗೆ ಲಭ್ಯ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಾದ್ಯಂತ 25,000 ಜನೌಷಧಿ ಕೇಂದ್ರಗಳನ್ನು ತೆರೆಯಲಾಗುವುದು ಎಂದಿದ್ದಾರೆ. ಜನೌಷಧಿ ಕೇಂದ್ರಗಳು ಮಧ್ಯಮ ವರ್ಗದ ಜನರಿಗೆ ಹೊಸ ಶಕ್ತಿಯನ್ನ ತುಂಬುತ್ತಿದ್ದು. 20,000 ಕೋಟಿ ಉಳಿತಾಯವಾಗುತ್ತಿದ್ದೆ ಎಂದಿದ್ದಾರೆ. ಪ್ರಸ್ತುತ 10,000 ಜನೌಷಧಿ ಕೇಂದ್ರಗಳಿವೆ ಅದನ್ನ 25 ಸಾವಿರ ಕೇಂದ್ರಗಳಿಗೆ ವಿತರಿಸಲಾಗುತ್ತದೆ ಎಂದಿದ್ದಾರೆ. ಈ ಜನೌಷಧಿ ಕೇಂದ್ರಗಳ ಮೂಲಕ 100 ರೂಪಾಯಿ ಔಷಧಿಗಳು ಕೇವಲ 10 ರಿಂದ 15 ರೂಪಾಯಿಗಳಿಗೆ ಲಭ್ಯವಿರುತ್ತದೆ ಎಂದಿದ್ದಾರೆ.

Join Nadunudi News WhatsApp Group