Ads By Google

Overdraft: ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೂ ಕೂಡ 10000 ರೂ ಹಣ ತಗೆಯಬಹುದು, ಕೇಂದ್ರದಿಂದ ಇನ್ನೊಂದು ಸೇವೆ

Overdraft

Image Source: India Today

Ads By Google

Pradhan Mantri Jan Dhan Scheme Overdraft Facility: ನಿಮ್ಮ ಉಳಿತಾಯ ಖಾತೆಯಲ್ಲಿ  ಹಣವಿಲ್ಲದಿದ್ದರೂ, ಸರ್ಕಾರದ ಈ ಯೋಜನೆಯಡಿ ನೀವು ಬ್ಯಾಂಕ್‌ನಿಂದ 10,000 ರೂ. ಪಡೆಯಬಹುದು ಈ ಸೌಲಭ್ಯವನ್ನು ಪಡೆಯಲು ನೀವು ಜನ್ ಧನ್ ಖಾತೆಯನ್ನು ಹೊಂದಿರಬೇಕು. 2017 ರಲ್ಲಿ ಕೇಂದ್ರದ ಮೋದಿ ಸರ್ಕಾರವು ಜನ್-ಧನ್ ಖಾತೆಯನ್ನು ಪ್ರಾರಂಭಿಸಿತು.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಬ್ಯಾಂಕ್ ಖಾತೆಯನ್ನು ತೆರೆಯುವಾಗ ಚೆಕ್ ಬುಕ್, ಪಾಸ್‌ಬುಕ್, ಅಪಘಾತ ವಿಮೆ ಮುಂತಾದ ಹಲವು ರೀತಿಯ ಬ್ಯಾಂಕಿಂಗ್ ಸೌಲಭ್ಯಗಳು ಲಭ್ಯವಿದೆ. ಇದೆಲ್ಲದರ ಜೊತೆಗೆ ಗ್ರಾಹಕರಿಗೆ ಓವರ್ ಡ್ರಾಫ್ಟ್ ಸೌಲಭ್ಯವೂ ಸಿಗುತ್ತದೆ. ಇದರ ಸಹಾಯದಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಯಾವಾಗ ಬೇಕಾದರೂ ಹಣವನ್ನು ಹಿಂಪಡೆಯಬಹುದು.

Image Credit: Testbook

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ

ಈ ಯೋಜನೆಯಡಿಯಲ್ಲಿ, ಶೂನ್ಯ ಬ್ಯಾಲೆನ್ಸ್ ಖಾತೆಯಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗುತ್ತದೆ. ನಿಮ್ಮ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೂ, ಅದಕ್ಕೆ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ವಿಮೆ ಸೇರಿದಂತೆ ಹಲವು ರೀತಿಯ ಸೌಲಭ್ಯಗಳು ಈ ಯೋಜನೆಯಲ್ಲಿ ಲಭ್ಯವಿದೆ. ಶೂನ್ಯ ಬ್ಯಾಲೆನ್ಸ್‌ನಲ್ಲಿ ನಡೆಯುವ ಈ ಖಾತೆಯು ಕೋಟಿಗಟ್ಟಲೆ ಜನರಿಗೆ ಉಳಿತಾಯ ಖಾತೆ, ವಿಮೆ ಮತ್ತು ಪಿಂಚಣಿಯಂತಹ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಸಹಾಯ ಮಾಡಿದೆ.

ಜನ್ ಧನ್ ಯೋಜನೆ ಅಡಿಯಲ್ಲಿಓವರ್‌ಡ್ರಾಫ್ಟ್ ಸೌಲಭ್ಯ

ಜನ್ ಧನ್ ಯೋಜನೆ ಅಡಿಯಲ್ಲಿ, ನಿಮ್ಮ ಖಾತೆಯಲ್ಲಿ ಯಾವುದೇ ಬ್ಯಾಲೆನ್ಸ್ ಇಲ್ಲದಿದ್ದರೂ ನೀವು 10,000 ರೂ. ವರೆಗಿನ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯುತ್ತೀರಿ. ಈ ಸೌಲಭ್ಯವು ಅಲ್ಪಾವಧಿ ಸಾಲದಂತಿದೆ. ಓವರ್‌ ಡ್ರಾಫ್ಟ್ ಸೌಲಭ್ಯವನ್ನು ಪಡೆಯಲು ನಿಮ್ಮ ಜನ್ ಧನ್ ಖಾತೆಯು ಕನಿಷ್ಠ 6 ತಿಂಗಳ ಹಳೆಯದಾಗಿರಬೇಕು. ಹಾಗಾಗದಿದ್ದರೆ 2 ಸಾವಿರ ರೂ.ವರೆಗಿನ ಓವರ್ ಡ್ರಾಫ್ಟ್ ಮಾತ್ರ ಲಭ್ಯ. ಈ ಖಾತೆಯಲ್ಲಿ ಓವರ್‌ಡ್ರಾಫ್ಟ್ ಸೌಲಭ್ಯಕ್ಕಾಗಿ ಗರಿಷ್ಠ ವಯಸ್ಸಿನ ಮಿತಿ 65 ವರ್ಷಗಳು ಆಗಿರುತ್ತದೆ.

Image Credit: Vijaya Karnataka

ಖಾತೆ ತೆರೆಯುವುದರ ಬಗ್ಗೆ ಮಾಹಿತಿ
ಜನ್ ಧನ್ ಖಾತೆಯನ್ನು ತೆರೆಯಲು, ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹೊಂದಿರಬೇಕು. ಖಾತೆ ತೆರೆಯಲು ಕನಿಷ್ಠ ವಯಸ್ಸು 10 ವರ್ಷಗಳು . ಅಷ್ಟೇ ಅಲ್ಲ ನಿಮ್ಮ ಹಳೆಯ ಉಳಿತಾಯ ಖಾತೆಯನ್ನು ಜನ್ ಧನ್ ಆಗಿ ಪರಿವರ್ತಿಸಬಹುದು.

ಓವರ್‌ ಡ್ರಾಫ್ಟ್‌ ಗೆ ಬಡ್ಡಿ ವಿಧಿಸಲಾಗುತ್ತದೆ

ಓವರ್‌ ಡ್ರಾಫ್ಟ್ ಸೌಲಭ್ಯವನ್ನು ಪಡೆದ ಮೇಲೆ, ನೀವು ಬ್ಯಾಂಕಿಗೆ ನಾಮಮಾತ್ರ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಆದರೆ ಇದರೊಂದಿಗೆ, ಕಡಿಮೆ ಆದಾಯದ ಗುಂಪಿನ ಗ್ರಾಹಕರ ಸಣ್ಣ ಅಗತ್ಯಗಳನ್ನು ಸುಲಭವಾಗಿ ಪೂರೈಸಲಾಗುತ್ತದೆ. ಅವರು ಯಾರಿಗೂ ಕೈಚಾಚಬೇಕಾಗಿಲ್ಲ. ಯಾವುದೇ ಹೆಚ್ಚುವರಿ ದಾಖಲೆಗಳು ಮತ್ತು ಫೈಲ್‌ಗಳನ್ನು ಮಾಡುವ ಕಿರಿಕಿರಿ ತೆಗೆದುಕೊಳ್ಳದೆ ನೀವು ಈ ಹಣವನ್ನು ಬಳಸಬಹುದು.

Image Credit: The Indian Wire

ಯಾವೆಲ್ಲ  ಸೌಲಭ್ಯಗಳು ಜನ್ ಧನ್ ಖಾತೆಯಲ್ಲಿದೆ?

ಜನ್ ಧನ್  ಯೋಜನೆಯಡಿ ಈ ಖಾತೆಯನ್ನು ಯಾವುದೇ ಬ್ಯಾಂಕಿನಲ್ಲಿ ತೆರೆಯಬಹುದು.ಇದರಲ್ಲಿ ನೀವು ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕಾಗಿಲ್ಲ. ಖಾತೆಯನ್ನು ತೆರೆಯುವಾಗ ನೀವು ರುಪೇ ಎಟಿಎಂ ಕಾರ್ಡ್, ರೂ. 2 ಲಕ್ಷ ಅಪಘಾತ ವಿಮೆ ರಕ್ಷಣೆ, ರೂ 30 ಸಾವಿರ ಜೀವ ರಕ್ಷಣೆ ಮತ್ತು ಠೇವಣಿ ಮಾಡಿದ ಮೊತ್ತದ ಬಡ್ಡಿಯನ್ನು ಪಡೆಯುತ್ತೀರಿ.

ನೀವು ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೆ ನೀವು ರೂ 10,000 ಓವರ್‌ ಡ್ರಾಫ್ಟ್ ಸೌಲಭ್ಯವನ್ನು ಸಹ ಪಡೆಯುತ್ತೀರಿ. ಖಾತೆಯನ್ನು ತೆರೆದ ತಕ್ಷಣ ನೀವು ರೂ 2,000 ಓವರ್‌ ಡ್ರಾಫ್ಟ್‌ ನ ಪ್ರಯೋಜನವನ್ನು ಪಡೆಯಬಹುದು. ಈ ಸೌಲಭ್ಯ ಖಾತೆ ಹೊಂದಿರುವ ಎಲ್ಲರಿಗೂ ಲಾಭ್ಯವಿರುತ್ತದೆ

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in