Jan Dhan Yojana: ಜನ್ ಧನ್ ಖಾತೆ ಇದ್ದವರಿಗೆ ಕೇಂದ್ರದಿಂದ ಸಿಗಲಿದೆ 2.5 ಲಕ್ಷ ರೂ, ಕೇಂದ್ರದ ಯೋಜನೆ
ಈ ಯೋಜನೆಯಡಿ ಸಿಗಲಿದೆ 2.30 ಲಕ್ಷ ವಿಮಾ ಸೌಲಭ್ಯ
Pradhan Mantri Jan Dhan Yojana: ಸದ್ಯ ಕೇಂದ್ರ ಸರ್ಕಾರ ಜನಸಾಮನ್ಯರಿಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಜನರು ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು.
ಸರ್ಕಾರದಿಂದ ವಿಮಾ ಸೌಲಭ್ಯ ಯೋಜನೆಗಳು ಕೂಡ ಜಾರಿಯಲ್ಲಿವೆ. ಪ್ರದಾನ ಮಂತ್ರಿ ಜನ್ ಧನ್ ಯೋಜನೆಯ ಬಗ್ಗೆ ನೀವು ಕೇಳಿರಬಹುದು. ಕೇಂದ್ರ ಸರ್ಕಾರ ಪರಿಚಯಿಸಿರುವ ಜನ್ ಧನ್ ಯೋಜನೆಯಡಿ ವಿಮಾ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಸದ್ಯ ಕೇಂದ್ರ ಸರ್ಕಾರ ಜನ್ ಧನ್ ಖಾತೆದಾರರಿಗೆ ಗುಡ್ ನ್ಯೂಸ್ ನೀಡಿದೆ.
ಜನ್ ಧನ್ ಖಾತೆದಾರರಿಗೆ ಕೇಂದ್ರದಿಂದ ಬಿಗ್ ಅಪ್ಡೇಟ್
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು ಸರ್ಕಾರವು 2014 ರಲ್ಲಿ ಪ್ರಾರಂಭಿಸಿತು. ಕೇಂದ್ರ ಸರ್ಕಾರವು ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ ಜನರಿಗೆ ಆರ್ಥಿಕ ಸೇವೆಗಳನ್ನು ಒದಗಿಸಲು ಈ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯ ಮೂಲಕ, ಬ್ಯಾಂಕಿಂಗ್ ಮತ್ತು ವಿಮೆ ಸೇರಿದಂತೆ ವಿವಿಧ ಸೇವೆಗಳು ಎಲ್ಲಾ ಮನೆಗಳಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಇದರ ಭಾಗವಾಗಿ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆ ತೆರೆಯುವ ಸೌಲಭ್ಯವನ್ನೂ ಕಲ್ಪಿಸಲಾಗಿದೆ. ಇದರರ್ಥ ನೀವು ಬ್ಯಾಂಕ್ ಖಾತೆಯನ್ನು ತೆಗೆದುಕೊಳ್ಳುವಾಗ ಹಣವನ್ನು ಠೇವಣಿ ಮಾಡಬೇಕಾಗಿಲ್ಲ.
ಈ ಯೋಜನೆಯಡಿ ಸಿಗಲಿದೆ 2.30 ಲಕ್ಷ ವಿಮಾ ಸೌಲಭ್ಯ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಜನ್ ಧನ್ ಖಾತೆಯನ್ನು ಮುಚ್ಚಲು ನೀವು ಬಯಸಿದರೆ, ನೀವು 2.30 ಲಕ್ಷದವರೆಗೆ ಕಳೆದುಕೊಳ್ಳಬಹುದು. ಅದಕ್ಕಾಗಿಯೇ ಜನ್ ಧನ್ ಖಾತೆದಾರರಿಗೆ ಉಚಿತ ರುಪೇ ಡೆಬಿಟ್ ಕಾರ್ಡ್ ನೀಡಲಾಗುತ್ತಿದೆ. ಈ ಕಾರ್ಡ್ ರೂ. 2 ಲಕ್ಷದವರೆಗಿನ ಅಪಘಾತ ವಿಮಾ ರಕ್ಷಣೆಯನ್ನು ಹೊಂದಿದೆ. ಈ ಕಾರ್ಡ್ ಹೊಂದಿರುವವರು ರೂ.30,000 ವರೆಗಿನ ವಿಮೆಯನ್ನೂ ಪಡೆಯಬಹುದಾಗಿದೆ. ಅಂದರೆ ಖಾತೆದಾರರು ಹಠಾತ್ ಮರಣ ಹೊಂದಿದರೆ, ಅವರ ಕುಟುಂಬಕ್ಕೆ ಈ ಹಣ ಸಿಗುತ್ತದೆ. ಅಲ್ಲದೆ, ಇದು ಶೂನ್ಯ ಖಾತೆಯಾಗಿರುವುದರಿಂದ, ಓವರ್ ಡ್ರಾಪ್ ಮಿತಿ 10,000 ರೂ. ಆಗಿದ್ದರೂ ನೀವು 10,000 ರೂ. ಗಳನ್ನೂ ಹಿಂಪಡೆಯಬಹುದು.