Jeevan Jyoti Bima: 18 ವರ್ಷ ಮೇಲ್ಪಟ್ಟವರಿಗೆ ಸಿಗಲಿದೆ 4 ಲಕ್ಷ ರೂಪಾಯಿ, ಕೇಂದ್ರ ಸರ್ಕಾರದ ಅದ್ಭುತ ಯೋಜನೆ.

ಕೇಂದ್ರ ಸರ್ಕಾರದಿಂದ 18 ವರ್ಷ ಮೇಲ್ಪಟ್ಟವರಿಗೆ ಸಿಗಲಿದೆ 4 ಲಕ್ಷ ರೂಪಾಯಿ, ಜೀವನ್ ಜ್ಯೋತಿ ಯೋಜನಾ.

Pradhan Mantri Jeevan Jyoti Bima Yojana Benefits: ಕೇಂದ್ರ ಸರ್ಕಾರ ಜನಸಾಮಾನ್ಯರಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿ ಸಾಕಷ್ಟು ಜನರು ಇದರ ಲಾಭವನ್ನು ಪಡೆಯುತ್ತ ಇದ್ದಾರೆ. ನರೇಂದ್ರ ಮೋದಿ ಅವರು ಜನಸಾಮಾನ್ಯರಿಗೆ ಸಹಾಯ ಆಗುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

Pradhan Mantri Jeevan Jyoti Bima Yojana Benefits
Image Credit: newindianexpress

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ
ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (Pradhan Mantri Jeevan Jyoti Bima Yojana) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆ ಜಾರಿಗೆ ಬಂದು 8 ವರ್ಷಗಳಾಗಿವೆ. ಹೀಗಾಗಿ ಸದ್ಯ ಸಾಕಷ್ಟು ಪ್ರಚಾರ ನೀಡುತ್ತಿದೆ. ಈ ಯೋಜನೆಯ ಪ್ರಯೋಜನಗಳನ್ನು ತಿಳಿದುಕೊಳ್ಳೋಣ. ಸಾಮಾನ್ಯ ಜನರು ಒಟ್ಟಾಗಿ ರೂ. 4 ಲಕ್ಷದವರೆಗೆ ಲಾಭ ಪಡೆಯುತ್ತಾರೆ. ಇನ್ನು ಜೀವನ್ ಜ್ಯೋತಿ ಬಿಮಾ ಯೋಜನೆಗೆ 18 ರಿಂದ 50 ವರ್ಷ ವಯಸ್ಸಿನವರು ಸೇರಿಕೊಳ್ಳಬಹುದು.

ಯೋಜನೆಗೆ ಸೇರಿದವರು ಮೃತಪಟ್ಟರೆ, ರೂ. 2 ಲಕ್ಷ ವಿಮೆ ಸಿಗಲಿದೆ. ಅಲ್ಲದೆ ಸುರಕ್ಷಾ ಬಿಮಾ ಯೋಜನೆಯಲ್ಲಿ ಆಕಸ್ಮಿಕ ಮರಣ ಹೊಂದಿದಲ್ಲಿ 2 ಲಕ್ಷ ವಿಮೆ ಲಭ್ಯವಿದೆ. ಭಾಗಶಃ ಅಂಗವೈಕಲ್ಯವಿದ್ದಲ್ಲಿ ಲಕ್ಷ ರೂಪಾಯಿ ಲಭಿಸಲಿದೆ. ಹೀಗಾಗಿ ಇದೊಂದು ಆಕಸ್ಮಿಕ ವಿಮಾ ಯೋಜನೆ ಎಂದು ಹೇಳಬಹುದು.

Under Jeevan Jyoti Bima Yojana, people above 18 years will get Rs 4 lakh
Image Credit: zeebiz

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಗೆ 16.19 ಕೋಟಿ ಜನರು ಈ ಸೇರಿದ್ದಾರೆ. ಹತ್ತಿರದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಹೋಗುವ ಮೂಲಕ ಒಬ್ಬರು ಸುಲಭವಾಗಿ ಈ ಯೋಜನೆಗೆ ಸೇರಬಹುದು. ಆಟೋ ಡೆಬಿಟ್ ವೈಶಿಷ್ಟ್ಯವನ್ನ ಸಕ್ರಿಯಗೊಳಿಸಬಹುದು ಇದರಿಂದ ಪ್ರೀಮಿಯಂ ಮೊತ್ತವನ್ನ ಪ್ರತಿ ವರ್ಷ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ. ಇಲ್ಲಿಯವರೆಗೆ 34.18 ಕೋಟಿ ಜನರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಗೆ ಸೇರಿದ್ದಾರೆ.

Join Nadunudi News WhatsApp Group

Join Nadunudi News WhatsApp Group