Maandhan Yojana: ಸ್ವಂತ ಭೂಮಿ ಹೊಂದಿರುವ ಎಲ್ಲಾ ರೈತರಿಗೆ ಪ್ರತಿ ತಿಂಗಳು 3000 ರೂ ಪಿಂಚಣಿ, ಕೇಂದ್ರದ ಹೊಸ ಯೋಜನೆ ಜಾರಿಗೆ.
ಕೇಂದ್ರದ ಈ ಯೋಜನೆಯಿಂದ ರೈತರು ಮಾಸಿನ ಪಿಂಚಣಿಯನ್ನು ಪಡೆಯಬಹುದು.
Pradhan Mantri Kisan Maandhan Yojana: ದೇಶದ ಬೆನ್ನೆಲುಬಾಗಿರುವ ರೈತರಿಗೆ ಆರ್ಥಿಕವಾಗಿ ನೆರವಾಗಲು Central Government ಈಗಾಗಲೇ ವಿವಿಧ ಯೋಜನೆಯನ್ನು ರೂಪಿಸಿದೆ. ಪ್ರಧಾನ ಮಂತ್ರಿ ಅವರ ಕಿಸಾನ್ ಯೋಜನೆಯ ಬಗ್ಗೆ ಎಲ್ಲರಿಗು ತಿಳಿದೇ ಇದೆ. PM Kisan ಯೋಜನೆಯಡಿ ದೇಶದ ಲಕ್ಷಾಂತರ ರೈತರು ಲಾಭ ಪಡೆಯುತ್ತಿದ್ದಾರೆ. ಇನ್ನು ಸದ್ಯದಲ್ಲೇ ಪಿಎಂ ಕಿಸಾನ್ ಯೋಜನೆಯ 14 ನೇ ಕಂತಿನ ಹಣ ಶೀಘ್ರದಲ್ಲೇ ರೈತರ ಖಾತೆಗೆ ಜಮಾ ಆಗಲಿದೆ.
PM Kisan ಯೋಜನೆಯಡಿ 14 ನೇ ಕಂತಿನ ಹಣ ಪಡೆಯಲು ದೇಶ ರೈತರು ಕುತೂಹಲರಾಗಿದ್ದಾರೆ. ಇನ್ನು ಈ ಕಂತಿನ ಹಂದ ನಿರೀಕ್ಷೆಯಲ್ಲಿದ್ದ ರೈತರಿಗೆ ಇದೀಗ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ರೈತರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ರೈತರ ವೃದ್ದಾಪ್ಯದಲ್ಲಿ ನೆರವಾಗಲು ಕೇಂದ್ರ ಸರ್ಕಾರ ಹೊಸ Pension ಯೋಜನೆಯನ್ನು ಜಾರಿಗೊಳಿಸಿದೆ. ಕೇಂದ್ರದ ಈ ಯೋಜನೆಯಿಂದ ರೈತರು ಮಾಸಿನ ಪಿಂಚಣಿಯನ್ನು ಪಡೆಯಬಹುದು.
ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನಾ (Pradhan Mantri Kisan Maandhan Yojana)
ದೇಶದಲ್ಲಿನ ಬಡ ವೃದ್ಧರಿಗೆ ಆರ್ಥಿಕ ನೆರವಾಗಲು ಪ್ರಧಾನ ಮಂತ್ರಿ ಮನ್ ಧನ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ವೃದ್ಧರಿಗೆ ನಿಗದಿತ ಪಿಂಚಣಿಯ ಮೊತ್ತವನ್ನು ನೀಡಲಾಗುತ್ತದೆ. ಇನ್ನು 18 ವರ್ಷ ಮೇಲ್ಪಟ್ಟವರು ಈ ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯ ಲಾಭವನ್ನು ಪಡೆಯಬಹುದು. ನೀವು ಈ ಯೋಜನೆಯ ಲಾಭ ಪಡೆಯಲು ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿ ಮಾಡಿಕೊಂಡಿರಬೇಕು.
ಕಡಿಮೆ ಹೂಡಿಕೆಯಲ್ಲಿ ಪಡೆಯಿರಿ ಮಾಸಿಕ 3000 ಪಿಂಚಣಿ
ಈ ಯೋಜನೆಯಲ್ಲಿ ವಯಸ್ಸಿಗೆ ಅನುಗುಣವಾಗಿ ಹೂಡಿಕೆ ಮುಖ್ಯವಾಗಿರುತ್ತದೆ. ಇನ್ನು 18 ರಿಂದ 40 ವರ್ಷದವರು ಮಾತ್ರ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷದಲ್ಲಿ ಹೂಡಿಕೆ ಪ್ರಾರಂಭಿಸಿದೆ ತಿಂಗಳಿಗೆ 55 ರೂ., 30 ವರ್ಷದಲ್ಲಿ ಹೂಡಿಕೆ ಮಾಡಿದರೆ ತಿಂಗಳಿಗೆ 110 ರೂ. ಹೂಡಿಕೆ ಮಾಡಬೇಕಾಗುತ್ತದೆ.
ಇನ್ನು 40 ವಯಸ್ಸಿನಲ್ಲಿ ಯೋಜನೆಗೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 220 ರೂ. ಹೂಡಿಕೆ ಮಾಡಬೇಕು.ನಿಮ್ಮ ವಯಸ್ಸು 60 ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ಪಿಂಚಣಿಯ ಲಾಭ ಪಡೆಯಬಹುದು. ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆಯಡಿಯಲ್ಲಿ ವೃದ್ಧರಿಗೆ ಮಾಸಿಕ 3000 ರೂಪಾಯಿ ಪಿಂಚಣಿ ನೀಡಲಾಗುತ್ತದೆ. ಅಂದರೆ ವಾರ್ಷಿಕವಾಗಿ ರೂ. 36000 ಮೊತ್ತವನ್ನು ಪಡೆಯುತ್ತಾರೆ. ನೀವು ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸದಿದ್ದರೆ ಇಂದೇ ಯೋಜನೆಗೆ ಅರ್ಜಿ ಸಲ್ಲಿಸಿ ವೃದ್ದಾಪ್ಯದಲ್ಲಿ ಆರಾಮದಾಯಕ ಜೀವನ ನಡೆಸಿ.