PM Kisan Amount: ಕಿಸಾನ್ ಸಮ್ಮಾನ್ ಯೋಜನೆಯ ಹಣ ಇನ್ನೂ ಬಂದಿಲ್ವ…? ಹಾಗಾದರೆ ತಕ್ಷಣ ಈ ಕೆಲಸ ಮಾಡುವುದು ಉತ್ತಮ
ಕಿಸಾನ್ ಸಮ್ಮಾನ್ ಹಣ ಇನ್ನೂ ಬಂದಿಲ್ಲ ಅಂದರೆ ತಕ್ಷಣ ಈ ಕೆಲಸ ಮಾಡಿ
Pradhan Mantri Kisan Samman Nidhi Amount: ದೇಶದಲ್ಲಿ ರೈತರ ಸಹಾಯಕ್ಕಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ, ಅದರಲ್ಲಿ ಬಹಳ ಪ್ರಮುಖವಾದ ಯೋಜನೆ ಯಾವುದೆಂದರೆ ಅದೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆ.
ಈ ಯೋಜನೆ ಪ್ರಾರಂಭವಾಗಿ ಹಲವು ವರ್ಷಗಳು ಕಳೆದಿದ್ದು, ಈ ಯೋಜನೆಯಡಿ ವರ್ಷಕ್ಕೆ 6000 ರೂಪಾಯಿಯನ್ನು ರೈತರ ಖಾತೆಗೆ ಕೇಂದ್ರ ಸರ್ಕಾರ ಜಮೆ ಮಾಡುತ್ತಿದೆ. ಹಾಗೆಯೆ ನವೆಂಬರ್ 15 ರಂದು ಈ ಯೋಜನೆಯ 15 ಕಂತಿನ ಹಣವನ್ನು ಮೋದಿಯವರು ಬಿಡುಗಡೆ ಮಾಡಿದ್ದೂ, ಈ ಕುರಿತು ಕೆಲವರು ತಮ್ಮ ಖಾತೆಗಿನ್ನು ಹಣ ಜಮೆ ಆಗಿಲ್ಲವೆಂದು ದೂರು ನೀಡುತ್ತಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ರೈತರ ಯೋಜನೆ ಆಗಿದೆ
ರೈತರು ಆರ್ಥಿಕವಾಗಿ ಪ್ರಬಲರಾಗಬೇಕು ಹಾಗು ಅವರ ಬೇಸಾಯಕ್ಕೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಕೇಂದ್ರ ರೈತರ ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹಣ ಜಮೆ ಮಾಡುತ್ತಿದೆ. 15ನೇ ಕಂತಿನ ಹಣ ನವೆಂಬರ್ 15ರಂದು ಬಿಡುಗಡೆ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಝಾರ್ಖಂಡ್ನ ಖೂಂಟಿಯಲ್ಲಿ ಹೊಸ ಕಂತಿನ ಹಣ ಬಿಡುಗಡೆಯಾಗಿರುವುದನ್ನು ಪ್ರಕಟಿಸಿದರು. ಎಂಟು ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಿದೆ. ಸರ್ಕಾರ 15ನೇ ಕಂತಿಗೆ ಒಟ್ಟು 18,000 ಕೋಟಿ ರೂ ಹಣ ವೆಚ್ಚ ಮಾಡಿದೆ. ಇಲ್ಲಿಯವರೆಗೆ ಎಲ್ಲಾ 15 ಕಂತುಗಳ ಒಟ್ಟು ಹಣ 2.75 ಲಕ್ಷ ಕೋಟಿ ರೂ ಆಗಿದೆ.
ಪಿಎಂ ಕಿಸಾನ್ ಯೋಜನೆಯ ಹಣ ಬರದೇ ಇರಲು ಕಾರಣಗಳು
ಪಿಎಂ ಕಿಸಾನ್ ಯೋಜನೆಯ ಅರ್ಹತಾ ಮಾನದಂಡ ಒದಗಿಸಲು ವಿಫಲವಾಗಿರಬಹುದು ಅಥವಾ ಇಕೆವೈಸಿ ಆಗಿಲ್ಲದೇ ಇರಬಹುದು, ಅಥವಾ ಸರಿಯಾಗಿ ಮಾಡಿಲ್ಲದೇ ಇರಬಹುದು.ನೀವು ಪಿಎಂ ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್ಗೆ (ಲಿಂಕ್ ಇಲ್ಲಿದೆ: https://pmkisan.gov.in/) ಹೋದರೆ ಮುಖ್ಯಪುಟದಲ್ಲೇ ಆರಂಭದಲ್ಲಿ ಒಂದು ಪಾಪ್ ಅಪ್ ಬರುತ್ತದೆ.
ಅದರಲ್ಲಿ ಇಕೆವೈಸಿ, ನಿಮ್ಮ ಸ್ಟೇಟಸ್ ತಿಳಿಯಲು ಹಾಗೂ ಪಿಎಂ ಕಿಸಾನ್ ಮೊಬೈಲ್ ಆಯಪ್ ಡೌನ್ಲೋಡ್ ಮಾಡಲು ಕ್ಯುಆರ್ ಕೋಡ್ಗಳು ಕಾಣುತ್ತವೆ. ನಿಮಗೆ ಬೇಕಾದರೆ ಅದನ್ನು ಸ್ಕ್ಯಾನ್ ಮಾಡಿ ಮಾಹಿತಿ ಪಡೆಯಬಹುದು. ಹಾಗು ಈ ಯೋಜನೆಯ ಫಲಾನುಭವಿಗಳು ಶೀಘ್ರದಲ್ಲಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳತಕ್ಕದ್ದು, ಇಲ್ಲ ಅಂತಾದರೆ ನಿಮಗಿನ್ನೂ ಈ ಯೋಜನೆಯ ಹಣ ಬರದೇ ಇರಬಹುದು.