Kisan Samman: ಇಂತವರಿಗೆ ಪಿಎಂ ಕಿಸಾನ್ ಹಣ ಬರಲ್ಲ, ಏಕಾಏಕಿ ನಿರ್ಧಾರ ಬದಲಿಸಿದ ಕೇಂದ್ರ ಸರ್ಕಾರ.
ಪಿಎಂ ಕಿಸಾನ್ ಹಣ ಪಡೆಯುತ್ತಿರುವ ಇಂತಹ ಫಲಾನುಭವಿಗಳಿಗೆ ಹಣ ಖಾತೆಗೆ ಬರಲ್ಲ.
Pradhan Mantri Kisan Samman Nidhi Latest Update: ಇಂದು ಸರಕಾರ ರೈತರಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಲೆ ಇದ್ದು, ರೈತರ ಆದಾಯ ಹೆಚ್ಚಿಸುವ ಗುರಿಯನ್ನು ಸಹ ಹೊಂದಿದೆ. ರೈತ ಪರವಾದ ಯೋಜನೆಗಳನ್ನು ಕಾರ್ಯಗತ ಗೊಳಿಸಲು ಸರಕಾರ ಶ್ರಮಿಸುತ್ತಲೆ ಇದೆ.
ಮುಖ್ಯವಾಗಿ ರೈತರಿಗೆ ಮೂಲಭೂತ ಸೌಕರ್ಯಗಳನ್ನು ನೀಡಿ ಬೆಂಬಲಿಸುತ್ತಲೆ ಇದೆ. ಇದೀಗ ರೈತರಿಗಾಗಿ ಕೇಂದ್ರ ಸರಕಾರ ಕಿಸಾನ್ ಯೋಜನೆಯನ್ನು ಜಾರಿಗೆ ತಂದಿದೆ. ಈಗಾಗಲೇ ಈ ಯೋಜನೆಯ ಮೂಲಕ ಹಲವಷ್ಟು ರೈತರು ಸಹಾಯಧನ ಪಡೆದಿದ್ದಾರೆ.
ಪಿಎಂ ಕಿಸಾನ್ ಹಣ ಪಡೆಯುವ ಫಲಾನುಭವಿಗಳಿಗೆ ಮುಖ್ಯ ಮಾಹಿತಿ
ಪಿಎಂ.ಕಿಸಾನ್ ಯೋಜನೆಯಡಿ ನೋಂದಾವಣೆ ಮಾಡಿದ ರೈತರಿಗೆ ಇದೀಗ ಕೇಂದ್ರ ಸರಕಾರ ಮುಖ್ಯ ಮಾಹಿತಿ ಯೊಂದನ್ನು ನೀಡಿದೆ. ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಸೂಚನೆ ನೀಡಿದ್ದು ಮಾಡದೇ ಇದ್ದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಯಾಗುವುದಿಲ್ಲ. ತಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲೇ ಬೇಕು.ಇಲ್ಲದಿದ್ದಲ್ಲಿ ಡಿಬಿಟಿ ಮೂಲಕ ಹಣ ವರ್ಗಾವಣೆ ಆಗುವುದಿಲ್ಲ.
ಹೀಗೆಯು ಮಾಡಬಹುದು
ಇ-ಕೆವೈಸಿ ಮಾಡದೇ ಇದ್ದಲ್ಲಿ ರೈತರು https://pmkisan.gov.in ಈ ಲಿಂಕ್ ಮೂಲಕ ಅಥವಾ ಪಿ.ಎಂ.ಕಿಸಾನ್ ಮೊಬೈಲ್ ಆ್ಯಪ್ ಮುಖಾಂತರ ಮಾಡಿಕೊಳ್ಳಬಹುದಾಗಿದೆ. ಇ-ಕೆವೈಸಿ ಮಾಡಿ ದಾಖಲೆ ಸರಿಮಾಡಿಕೊಂಡರೆ ಮಾತ್ರ ಮುಂದಿನ ಕಂತಿನ ಹಣ ಜಮೆಯಾಗಲಿದೆ.ಈ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್, ಕೃಷಿ ಹಾಗೂ ಪಶು ಸಖಿ, ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕ ಮಾಡಬಹುದಾಗಿದೆ.
ಬಿಡುಗಡೆ ಯಾಗಿದೆ
Pradhan Mantri Kisan Samman Nidhi ಯೋಜನೆಯ 14ನೇ ಕಂತಿನ ಹಣ ಈಗಾಗಲೇ ಕೆಲವು ರೈತರ ಖಾತೆಗೆ ಹಣ ಜಮೆ ಯಾಗಿದೆ. ತಿಂಗಳ ಎರಡು ಸಾವಿರ ರೂಪಾಯಿ ಹಣವನ್ನು ನೇರವಾಗಿ ಖಾತೆಗೆ ವರ್ಗಾವಣೆ ಮಾಡಿದೆ. ಇನ್ನು ಪಿಎಂ ಕಿಸಾನ್ ಯೋಜನೆಯಡಿ ಯಾರಾದರೂ ಅರ್ಹರು ಇಲ್ಲದೆ ಹಣವನ್ನು ಪಡೆಯುತ್ತಿದ್ದರೆ, ಕೇಂದ್ರ ಸರ್ಕಾರವು ಮತ್ತೆ ಆ ಹಣವನ್ನು ಅವರಿಂದ ಹಿಂಪಡೆಯಲು ತೀರ್ಮಾನ ಮಾಡಿದೆ. ಆದ್ದರಿಂದ, ಅರ್ಹತೆ ಇಲ್ಲದವರು ಹಣವನ್ನು ಹಿಂದಿರುಗಿಸಬೇಕಾಗುತ್ತದೆ.