PM Kisan: ಈ ದಿನವೇ ಎಲ್ಲರ ಖಾತೆಗೆ 2000 ರೂ, ಕೇಂದ್ರದ ಘೋಷಣೆ

ಇನ್ನು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ಬರಲಿದೆ 2000, ಸರ್ಕಾರದಿಂದ ಮಹತ್ವದ ಮಾಹಿತಿ.

PM Kisan Samman Yojana:ಕೇಂದ್ರ ಸರ್ಕಾರ ಈಗಾಗಲೇ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ದೇಶದ ರೈತರು ಮೋದಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ.

ಇನ್ನು ಈಗಾಗಲೇ ರೈತರಿಗಾಗಿ ಪಿಎಂ ಕಿಸಾನ್ ಯೋಜನೆ (PM Kisan Samman Yojana) ರೂಪುಗೊಂಡಿದ್ದು ಈ ಯೋಜನೆಯಡಿ ಸಾಕಷ್ಟು ರೈತರು ಸಹಾಯ ಪಡೆಯುತ್ತಿದ್ದಾರೆ. ಇದೀಗ ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

Pradan Mantri Kisan Samman Nidhi Yojana updates
Image Credit: Mykisan

ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ
ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಮೋದಿ ಸರ್ಕಾರ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ಆದರೆ ಈ ಹಣ ಒಂದೇ ಬಾರಿ ಬರುವುದಿಲ್ಲ. ಕಂತುಗಳಲ್ಲಿ ಬರುತ್ತದೆ. ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ. ಇನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಪೋಸ್ಟಲ್ ಅಕೌಂಟ್ ಓಪನ್ ಮಾಡುವ ಮೂಲಕ ಇ -ಕೆವೈಸಿ ಅಪ್ಡೇಟ್ ಮಾಡಬಹುದು.

ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತಿನ ಪಾವತಿಯನ್ನು ಫಲಾನುಭವಿಗಳ ರೈತರ ಖಾತೆಗಳಿಗೆವರ್ಗಾವಣೆ ಮಾಡಲು ಕೇಂದ್ರ ಸರ್ಕಾರ ಸಜ್ಜಾಗಿದೆ. ವರ್ಷದಲ್ಲಿ ಮೂರೂ ಬಾರಿ 2,000 ರೂಗಳಂತೆ ಒಟ್ಟು 6,000 ರೂಪಾಯಿಗಳನ್ನು ಈ ಯೋಜನೆಯಲ್ಲಿ ರೈತರು ತಮ್ಮ ತಮ್ಮ ಬ್ಯಾಂಕ್ ಖಾತೆಗಳಿಗೆ ಸ್ವೀಕರಿಸತ್ತಾರೆ.

Important information from Govt regarding PM Kisan Yojana
Image Credit: Deccanherald

ಸಾಮಾನ್ಯವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರು ತಲಾ 2000 ರೂಪಾಯಿಗಳನ್ನು ಸ್ವೀಕರಿಸುತ್ತಾರೆ. ಪ್ರಧಾನ ಮಂತ್ರಿ ಕಿಸಾನ್ ನಿಧಿ ಯೋಜನೆಯ 14 ನೇ ಕಂತಿನ ಹಣದ ಪಾವತಿ ಮಾಡುವ ಬಗ್ಗೆ ಅಧಿಕೃತ ಟ್ವೀಟ್ ನ ಮೂಲಕ ಮಾಹಿತಿ ನೀಡಲಾಗಿದೆ. ಸರ್ಕಾರ ಜುಲೈ 27 ರೊಳಗೆ 14 ನೇ ಕಂತಿನ ಹಣ ಬಿಡುಗಡೆ ಆಗಲಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಾ ಅಡಿಯಲ್ಲಿ ರೈತರಿಗೆ ವರ್ಷಕ್ಕೆ ಮೂರು ಬಾರಿ ಕಂತಿನ ರೂಪದಲ್ಲಿ ಹಣವನ್ನು ನೀಡಲಾಗುತ್ತದೆ.

Join Nadunudi News WhatsApp Group

ಪಿಎಂ ಕಿಸಾನ್ ಯೋಜನೆಗೆ ಇ-ಕೆವೈಸಿ ಅಗತ್ಯ
ರೈತರಿಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ ಅಥವಾ ಸಾಮಾನ್ಯ ಸೇವಾ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಸಿಕೊಳ್ಳಬಹುದಾಗಿದೆ.

E-KYC is required for PM Kisan scheme
Image Credit: Timesbull

2023 ರ ಏಪ್ರಿಲ್ 1 ರಿಂದ ಬಾಕಿ ಉಳಿಸಿಕೊಂಡಿರುವ 14 ನೇ ಕಂತಿನ ಸಹಾಯಧನ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರಣದಿಂದ ಇನ್ನು ಕೂಡ ಪಿಎಂ ಕಿಸಾನ್ ಯೋಜನೆಗೆ ಇ-ಕೆವೈಸಿ ಅಪ್ಡೇಟ್ ಮಾಡಿಸದೇ ಇರುವ ರೈತರು ಇ-ಕೆವೈಸಿ ಅಪ್ಡೇಟ್ ಮಾಡಿಸುವುದು ಕಡ್ಡಾಯವಾಗಿದೆ.

Join Nadunudi News WhatsApp Group