PM Kisan: ಇಂತಹ ರೈತರು ಸರ್ಕಾರಕ್ಕೆ ವಾಪಾಸ್ ಕೊಡಬೇಕು ಕಿಸಾನ್ ಸಮ್ಮಾನ್ ಯೋಜನೆಯ ಹಣ, ಹೊಸ ನಿಯಮ ಜಾರಿಗೆ.

ಇಂತವರು PM ಕಿಸಾನ್ ಯೋಜನೆಯಿಂದ ಪಡೆದುಕೊಂಡ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕು.

Pradhan Mantri Kisan Yojana Latest Update: ಮೋದಿ ಸರ್ಕಾರ ರೈತರಿಗಾಗಿ ಪರಿಚಯಿಸಿರುವ Pradhan Mantri Kisan Yojana ಇನ್ನಿತರ ಯೋಜನೆಗಳಿಂದ ವಿಶೇಷವಾಗಿದೆ. ಮೋದಿ ಸರ್ಕಾರದ PM Kisan ಯೋಜನೆಯು ದೇಶದ ರೈತರಿಗೆ ಆರ್ಥಿಕ ಸ್ಥಿರತೆಯನ್ನು ನೀಡುತ್ತಿದೆ ಎನ್ನಬಹುದು. ದೇಶದ ಪ್ರತಿ ರೈತರು ಕೂಡ PM Kisan Yojana ಲಾಭವನ್ನು ಪಡೆಯಬೇಕಿದೆ.

ಪ್ರಸ್ತುತ ದೇಶದಲ್ಲಿ ಲಕ್ಷಾಂತರ ರೈತರು PM Kisan ಯೋಜನೆಯಡಿಯಲ್ಲಿ ಹಣವನ್ನು ಪಡೆಯುತ್ತಿದ್ದಾರೆ. ಇದೀಗ ಮೋದಿ ಸರ್ಕಾರದ ಈ ಯೋಜನೆಯ ಬಗ್ಗೆ ಬಿಗ್ ಅಪ್ಡೇಟ್ ಲಭಿಸಿದೆ. ಸದ್ಯ PM Kisan ಯೋಜನೆಯ 15 ಕಂತಿನ ಹಣದ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು PM Kisan ಯೋಜನೆಯ ಫಲಾನುಭವಿಗಳಾಗಿದ್ದರೆ ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.

Pradhan Mantri Kisan Yojana Latest Update
Image Credit: Aajtak

ಇಂತಹ ರೈತರು ಸರ್ಕಾರಕ್ಕೆ ವಾಪಾಸ್ ಕೊಡಬೇಕು ಕಿಸಾನ್ ಸಮ್ಮಾನ್ ಯೋಜನೆಯ ಹಣ
Pradhan Mantri Kisan ಯೋಜನೆಯಡಿ ಮೋದಿ ಸರ್ಕಾರ ರೈತರಿಗೆ ರೂ. 6 ಸಾವಿರ ಉಚಿತವಾಗಿ ಹಣ ನೀಡುತ್ತದೆ. ನಾಲ್ಕು ತಿಂಗಳಿಗೊಮ್ಮೆ ವರ್ಷಕ್ಕೆ ಮೂರು ಬಾರಿ 2 ಸಾವಿರ ರೂಪಾಯಿಯಂತೆ 6 ಸಾವಿರ ದೊರೆಯಲಿದೆ. ಇನ್ನು ಆದಾಯ ತೆರಿಗೆ ಪಾವತಿಸುವ ರೈತರು ಹಾಗೂ ಸರ್ಕಾರೀ ಉದ್ಯೋಗ ಹೊಂದಿರುವ ರೈತರು ಸರ್ಕಾರಕ್ಕೆ PM Kisan ಯೋಜನೆಯಡಿ ಜಮಾ ಆಗಿರುವ ಹಣವನ್ನು ಸರ್ಕಾರಕ್ಕೆ ಹಿಂದಿರುಗಿಸುವುದು ಅಗತ್ಯವಾಗಿದೆ. ನಿಗದಿತಾ ಸಮಯದೊಳಗೆ ಹಣವನ್ನು ಹಿಂತಿರುಗಿಸದಿದ್ದರೆ ಅಂತಹ ರೈತರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.

PM Kisan 15 ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ
*PM Kisan ಯೋಜನೆಯಡಿ 15 ನೇ ಕಂತಿನ ಹಣ ಪಡೆಯಲು ನೀವು ಮುಖ್ಯವಾಗಿ Bank Details ಅನ್ನು ನೀಡಬೇಕಿದೆ. ನೀವು ಅರ್ಜಿ ನಮೂನೆಯಲ್ಲಿ ಬ್ಯಾಂಕ್ ನ ವಿವರವನ್ನು ತಪ್ಪಾಗಿ ನೀಡಿದರೆ ನಿಮ್ಮ ಖಾತೆಗೆ 15 ನೇ ಕಂತಿನ ಹಣ ಜಮಾ ಆಗುವುದಿಲ್ಲ.

PM kisan scheme
Image Credit: Jagran

*ಇನ್ನು ರೈತರಿಗೆ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಈಗಾಗಲೇ ಕೃಷಿ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ರೈತರು ತಮ್ಮ ಆಧಾರ್ ಕಾರ್ಡ್, ಆಧಾರ್ ಜೋಡಣೆಯಾಗಿರುವ ಮೊಬೈಲ್ ನಂಬರ್ ದಾಖಲೆಯೊಂದಿಗೆ ಇ-ಕೆವೈಸಿ ಮಾಡಿಸಿಕೊಳ್ಳಬೇಕಿದೆ.

Join Nadunudi News WhatsApp Group

*ಇನ್ನು 2023 ರ ಬಾಕಿ ಉಳಿಸಿಕೊಂಡಿರುವ 15 ನೇ ಕಂತಿನ ಸಹಾಯಧನ ಶೀಘ್ರದಲ್ಲೇ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಕಾರಣದಿಂದ ಇನ್ನು ಕೂಡ ಪಿಎಂ ಕಿಸಾನ್ ಯೋಜನೆಗೆ E-KYC Update ಮಾಡಿಸದೇ ಇರುವ ರೈತರು ಇ-ಕೆವೈಸಿ ಅಪ್ಡೇಟ್ ಹಾಗೂ ಬ್ಯಾಂಕ್ ವಿವರವನ್ನು ಸರಿಪಡಿಸಿಕೊಳ್ಳುವುದು ಸೂಕ್ತ ಎನ್ನಬಹುದು.

Join Nadunudi News WhatsApp Group