Pradhan Mantri Man Dhan Yojana: ಕಾರ್ಮಿಕರು ಪ್ರತಿ ತಿಂಗಳು 200 ಹೂಡಿಕೆ ಮಾಡಿದರೆ ಸಿಗಲಿದೆ 36000, ಕೇಂದ್ರದ ಹೊಸ ಯೋಜನೆ.

Pradhan Mantri Man Dhan Yojana: ಕೇಂದ್ರ ಸರ್ಕಾರ (Central Govt) ಜನರ ಬಡಜನರ ಅನುಕೂಲದ ಉದ್ದೇಶದಿಂದ ಈಗಾಗಲೇ ಅನೇಕ ಯೋಜನೆಗಳನ್ನ ದೇಶದಲ್ಲಿ ಜಾರಿಗೆ ತಂದಿದೆ. ದೇಶದ ಪ್ರಧಾನ ಮಂತ್ರಿಗಳ ನರೇಂದ್ರ ಮೋದಿ (Narendra Modi) ಅವರು ಅನೇಕ ಯೋಜನೆಗಳನ್ನ ಜಾರಿಗೆ ತರುವುದರ ಮೂಲಕ ಬಡಜನರಿಗೆ ಸಹಾಯವನ್ನ ಮಾಡುತ್ತಾರೆ.

ಸದ್ಯ ದೇಶದಲ್ಲಿ ಇರುವ ಎಲ್ಲಾ ಕೂಲಿ ಕಾರ್ಮಿಕರ ಅನುಕೂಲದ ಉದ್ದೇಶದಿಂದ ಈಗಾಗಲೇ ಅನೇಕ ಯೋಜನೆಯನ್ನ ಜಾರಿಗೆ ತರಲಾಗಿದೆ. ಕೂಲಿ ಮಾಡುವ ಜನರಿಗೆ ಅವರ ವೃದ್ಧಾಪ್ಯದಲ್ಲಿ ಯಾವುದೇ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ ಈಗಾಗಲೇ ಅನೇಕ ಯೋಜನೆಯನ್ನ ಜಾರಿಗೆ ತರಲಾಗಿದೆ.

ಸದ್ಯ ಈಗ ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರ ವೃದ್ಧಾಪ್ಯದ ರಕ್ಷಣೆಯನ್ನ ಇನ್ನಷ್ಟು ಮಾಡುವ ಸಲುವಾಗಿ ಈಗ ಇನ್ನೊಂದು ಯೋಜನೆಯನ್ನ ಜಾರಿಗೆ ತಂದಿದೆ.

Pradhan Mantri Man Dhan Yojana was implemented for the wage laborers of the country
Image Credit: economictimes.indiatimes

ಕೇಂದ್ರ ಸರ್ಕಾರಿಂದ ಜಾರಿಗೆ ಬಂತು ಇನ್ನೊಂದು ವೃದ್ಧಾಪ್ಯ ಯೋಜನೆ
ದೇಶದಲ್ಲಿ ಕೂಲಿ ಮಾಡುವ ಸಂಘಟಿತ ವಲಯದ ಕಾರ್ಮಿಕರ ಅನುಕೂಲದ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ ಕೂಲಿ ಕಾರ್ಮಿಕರಿಗಾಗಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ ಧನ್ ಯೋಜನೆಯನ್ನ ಜಾರಿಗೆ ತಂದಿದೆ.

ಈ ಯೋಜನೆಯ ಅಡಿಯಲ್ಲಿ ಫಲಾನುಭವಿಗಳು 60 ವರ್ಷ ಮೇಲ್ಪಟ್ಟ ನಂತರ ಪ್ರತಿ ತಿಂಗಳು 3000 ರೂಪಾಯಿಯ ತನಕ ಕನಿಷ್ಠ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು.

Join Nadunudi News WhatsApp Group

ಪ್ರತಿ ತಿಂಗಳು ಸಿಗಲಿದೆ ಪಿಂಚಣಿ
ಇದೊಂದು ಪಿಂಚಣಿ ಯೋಜನೆ ಆಗಿದು ಈ ಯೋಜನೆ ಅಡಿಯಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಠ 3000 ರೂಪಾಯಿಯ ತನಕ ಪಿಂಚಣಿ ಹಣ ಸಿಗಲಿದೆ. ಈ ಯೋಜನೆಯ ಫಲಾನುಭವಿ ಮರಣವನ್ನ ಹೊಂದಿದರೆ ಪಿಂಚಣಿದಾರನ ಸಂಗತಿ ಶೇಕಡಾ 50 ರಷ್ಟು ಪಿಂಚಣಿ ಹಣವನ್ನ ಕುಟುಂಬ ಪಿಂಚಣಿಯಾಗಿ ಪಡೆಯಲಿ ಅರ್ಹರಾಗಿರುತ್ತಾರೆ.

New pension scheme for wage workers
Image Credit: economictimes.indiatimes

ಯಾರುಯಾರು ಈ ಯೋಜನೆಯ ಲಾಭ ಪಡೆಯಬಹುದು
ಬೀದಿಬೀದಿ ವ್ಯಾಪಾರಿಗಳು. ರಿಕ್ಷಾ ಚಾಲಕರು, ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ವಲಯದ ಇತರೆ ಕಾರ್ಮಿಕರು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದು.

ಇನ್ನು ಈ ಯೋಜನೆಯ ಅಡಿಯಲ್ಲಿ ಮಾಸಿಕವಾಗಿ 200 ರೂಪಾಯಿಯನ್ನ ಪಾವತಿ ಮಾಡ್ಡುವುದರ ಮೂಲಕ ವರ್ಷಕ್ಕೆ 36000 ರೂಪಾಯಿಯನ್ನ ಪಡೆದುಕೊಳ್ಳಬಹುದು.

ಈ ಯೋಜನೆಯಲ್ಲಿ ಅಡಿಯಲ್ಲಿ ಕಾರ್ಮಿಕರು ಮಾಸಿಕವಾಗಿ 55 ರೂಪಾಯಿಯಿಂದ 200 ರೂಪಾಯಿಯ ತನಕ ಹೂಡಿಕೆ ಮಾಡಬೇಕು. ಇನ್ನು ವ್ಯಕ್ತಿಯೂ 40 ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭ ಮಾಡಿದರೆ ಅವರು ಪ್ರತಿ ತಿಂಗಳು 200 ರೂಪಾಯಿ ಹೂಡಿಕೆ ಮಾಡಬೇಕು.

ವ್ಯಕ್ತಿಗೆ 60 ವರ್ಷ ಆದನಂತರ ತಿಂಗಳಿಗೆ 3000 ಅಥವಾ ವರ್ಷಕ್ಕೆ 36000 ರೂಪಾಯಿ ಪಿಂಚಣಿ ಹಣ ಬರುತ್ತದೆ. ಹೂಡಿಕೆ ಮೊತ್ತ ವ್ಯಕ್ತಿಯ ವಯಸ್ಸಿನ ಮೇಲೆ ನಿರ್ಧಾರ ಆಗಿರುತ್ತದೆ. ವಯಸ್ಸು ಕಡಿಮೆ ಆಗಿದ್ದರೆ ಹೂಡಿಕೆಯ ಮೊತ್ತ ಕಡಿಮೆ ಆಗುತ್ತದೆ ಮತ್ತು ವಯಸ್ಸು ಜಾಸ್ತಿ ಆಗಿದ್ದರೆ ಹೂಡಿಕೆಯ ಮೊತ್ತ ಜಾಸ್ತಿ ಆಗುತ್ತದೆ.

Information on Wages Pension Scheme
Image Credit: theguardian

ದೇಶದ ಕೂಲಿ ಕಾರ್ಮಿಕರಿಗಾಗಿ ಈ ಯೋಜನೆ
ದೇಶದ ಕೂಲಿ ಕಾರ್ಮಿಕರು ತಮ್ಮ ವೃದ್ಧಾಪ್ಯದ ಸಮಯದಲ್ಲಿ ತಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಲು ಹಣವಿಲ್ಲದೆ ಬಹಳ ಕಷ್ಟಗಳನ್ನ ಅನುಭವಿಸುತ್ತಾರೆ.

ಮುಂದಿನ ದಿನಗಳಲ್ಲಿ ಮಕ್ಕಳು ತಮ್ಮನ್ನು ನೋಡಿಕೊಳ್ಳುತ್ತಾರೆ ಅನ್ನುವ ನಂಬಿಕೆ ಇಟ್ಟುಕೊಳ್ಳುವುದು ತಮ್ಮ ಬಡ್ಡತನ ಆಗುತ್ತದೆ. ಕೂಲಿ ಕಾರ್ಮಿಕರು ತಿಂಗಳು ಸ್ವಲ್ಪ ಹಣವನ್ನ ಹೂಡಿಕೆ ಮಾಡಿದರೆ ಮುಂದೊಂದು ದಿನ ತಮ್ಮ ಕೆಲವು ಅಗತ್ಯ ಅವಶ್ಯಕತೆಗಳಿಗೆ ಈ ಹಣವನ್ನ ಬಳಸಿಕೊಳ್ಳಬಹುದಾಗಿದೆ.

Join Nadunudi News WhatsApp Group