Scheme For Ladies: ನರೇಂದ್ರ ಮೋದಿ ಸರ್ಕಾರದಿಂದ ಈ ಮಹಿಳೆಯರಿಗೆ ಸಿಗಲಿದೆ 6000 ರೂ, ಆದಷ್ಟು ಬೇಗ ಅರ್ಜಿ ಸಲ್ಲಿಸಿ.

ದೇಶದ ಮಹಿಳೆಯರಿಗೆ ಮೋದಿ ಸರ್ಕಾರದಿಂದ ಸಿಗಲಿದೆ 6000 ರೂಪಾಯಿ.

Pradhan Mantri Matritva Vandana Yojana: 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ದೇಶದ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ಆರಂಭಿಸಿದ್ದಾರೆ.

ದೇಶದಲ್ಲಿ ಜನಿಸುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಹಾಗೂ ಯಾವುದೇ ರೀತಿಯ ಕಾಯಿಲೆಯಿಂದ ಬಳಲಬಾರದು ಎಂಬ ಉದ್ದೇಶದಿಂದಾಗಿ ಕೇಂದ್ರದ ಮೋದಿ ಸರ್ಕಾರ Matritva Vandana Yojana ಜಾರಿಗೊಳಿಸಿದೆ. ಮೋದಿ ಸರ್ಕಾರವು ಜನವರಿ 1, 2017 ರಂದು ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯನ್ನು ಪ್ರಾರಂಭಿಸಿದೆ.

Pradhan Mantri Matritva Vandana Yojana
Image Credit: Amarujala

ಪ್ರದಾನ ಮಂತ್ರಿ ಮಾತೃತ್ವ ವಂದನಾ ಯೋಜನೆ
ಕೇಂದ್ರದ ಮೋದಿ ಸರ್ಕಾರದ ಗರ್ಭಿಣಿ ಮಹಳೆಯರಿಗಾಗಿ Pradhan Mantri Matru Vandana Yojana ಅನ್ನು ಬಿಡುಗಡೆ ಮಾಡಿದೆ. ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು. ಮಹಿಳೆಯರಿಗೆ ನಗದು ಪ್ರೋತ್ಸಾಹವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ಮಗುವಿನ ಜನನದ ಮೊದಲು ಹಾಗೂ ಮಗುವಿನ ಜನನದ ನಂತರ ಗರ್ಭಿಣಿಯರಿಗೆ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರದ ಮೋದಿ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.

Matritva Vandana Yojana
Image Credit: Mmaxyojana

ದೇಶದ ಗರ್ಭಿಣಿ ಮಹಿಳೆಯರಿಗೆ ಸಿಗಲಿದೆ 6000 ರೂಪಾಯಿ
ಇನ್ನು 19 ವರ್ಷ ಮೇಲ್ಪಟ್ಟವರು ಮಾತ್ರ ಈ ಪ್ರದಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಅರ್ಹರಾಗಿರುತ್ತಾರೆ. ಪ್ರದಾನ ಮಂತ್ರಿ ಮಾತೃತ್ವ ವಂದನಾ ಯೋಜನೆ ಮೂಲಕ ಎರಡು ಕಂತು ಗಳಲ್ಲಿ ಗರ್ಭಿಣಿ ಮಹಿಳೆಯರಿಗೆ 5,000 ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನ ಎರಡನೇ ಮಗುವಿಗೂ ಕೂಡ ವಿಸ್ತರಿಸಿದೆ.

Join Nadunudi News WhatsApp Group

ಎರಡನೇ ಹೆಣ್ಣು ಮಗುವಿನ ಜನನದ ನಂತರ ಒಂದೇ ಕಂತಿನಲ್ಲಿ 6,000 ಮೊತ್ತವನ್ನು ಪಡೆಯಲು ತಾಯಂದಿರು ಅರ್ಹರಾಗಿರುತ್ತಾರೆ. ಈ ಯೋಜನೆ ಪ್ರಾರಂಭವಾದಾಗಿನಿಂದ ಒಟ್ಟು 14,103 ಕೋಟಿ ರೂಪಾಯಿಗಳನ್ನು ವಿತರಿಸುವ ಮೂಲಕ 3.11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ದೇಶದಲ್ಲಿ ಮಹಿಳೆಯರ ಆರೋಗ್ಯ ಮತ್ತು ಹೆಣ್ಣು ಮಕ್ಕಳ ಸಂಕೆಯನ್ನ ಹೆಚ್ಚಳ ಮಾಡುವ ಉದ್ದೇಶದಿಂದ ಕೇಂದ್ರ ದೇಶದ ಬಡ ಮಹಿಳೆಯರಿಗಾಗಿ ಹಲವು ಯೋಜನೆಯನ್ನಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಬಹುದು.

Join Nadunudi News WhatsApp Group