Matritva Vandana: ದೇಶದ ಎಲ್ಲಾ ಮಹಿಳೆಯರಿಗೆ ಕೇಂದ್ರದಿಂದ ಸಿಗಲಿದೆ 6000 ರೂ, ಕೇಂದ್ರದ ಯೋಜನೆಗೆ ಅರ್ಜಿ ಹಾಕಿ.
ಗರ್ಭಿಣಿ ಮಹಿಳೆಯರಿಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರ.
Pradhan Mantri Matritva Vandana Yojana: ದೇಶದಲ್ಲಿ ಜನಿಸುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು ಹಾಗೂ ಯಾವುದೇ ರೀತಿಯ ಕಾಯಿಲೆಯಿಂದ ಬಳಲಬಾರದು ಎಂಬ ಉದ್ದೇಶದಿಂದಾಗಿ ಕೇಂದ್ರದ ಮೋದಿ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ದೇಶದಲ್ಲಿ ಮಹಿಳೆಯರಿಗಾಗಿ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸಲಾಗುತ್ತದೆ.
ಮಹಿಳೆಯರು ಸ್ವಾವಲಂಬಿಯಾಗಿ ಬದಕು ನಡೆಸಬೇಕು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಕೇಂದ್ರ ಸರ್ಕಾರ (Central Government) ಈಗಾಗಲೇ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿವೆ. ಇನ್ನು ಗರ್ಭಿಣಿ ಮಹಿಳೆಯರಿಗೆ ಅನುಕೂಲವಾಗಲು ಸರ್ಕಾರ ವಿವಿಧ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಇದೀಗ ಗರ್ಭಿಣಿ ಮಹಿಳೆಯರಿಗಾಗಿ ಸರ್ಕಾರ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.
ಪ್ರದಾನ ಮಂತ್ರಿ ಮಾತೃತ್ವ ವಂದನಾ ಯೋಜನೆ
ಕೇಂದ್ರದ ಮೋದಿ ಸರ್ಕಾರದ ಗರ್ಭಿಣಿ ಮಹಳೆಯರಿಗಾಗಿ ಮಾತೃತ್ವ ವಂದನಾ ಯೋಜನೆಯನ್ನು (Pradhan Mantri Matru Vandana Yojana) ಬಿಡುಗಡೆ ಮಾಡಿದೆ. ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು.
ಗರ್ಭಿಣಿ ಮಹಿಳೆಯರಿಗೆ ಆರ್ಥಿಕವಾಗಿ ನೆರವಾಗಲು ಮಾತೃತ್ವ ವಂದನಾ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮಗುವಿನ ಜನನದ ಮೊದಲು ಹಾಗೂ ಮಗುವಿನ ಜನನದ ನಂತರ ಗರ್ಭಿಣಿಯರಿಗೆ ಮಕ್ಕಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರದ ಮೋದಿ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ.
ಗರ್ಭಿಣಿಯರಿಗೆ ಸಿಗಲಿದೆ 6 ಸಾವಿರ
ಕೇಂದ್ರ ಸರ್ಕಾರ ಇದೀಗ ಗರ್ಭಿಣಿಯರಿಗೆ ಸಿಹಿ ಸುದ್ದಿ ನೀಡಿದೆ. ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಪ್ರತಿ ವರ್ಷ 5 ಸಾವಿರ ಹಣ ನೀಡಲಿದೆ. ಫಲಾನುಭವಿ ಮಹಿಳೆಯರಿಗೆ ಸರ್ಕಾರ 6000 ರೂ ಗಳನ್ನೂ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ. ಇನ್ನು https://wcd.nic.in/schemes/pradhan-mantri-matru-vandana-yojana ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಮೂರು ಕಂತುಗಳಲ್ಲಿ ಹಣವನ್ನು ನಿಡಲಾಗುತ್ತದೆ
ಇನ್ನು 19 ವರ್ಷ ಮೇಲ್ಪಟ್ಟವರು ಮಾತ್ರ ಈ ಪ್ರದಾನ ಮಂತ್ರಿ ಮಾತೃತ್ವ ವಂದನಾ ಯೋಜನೆಗೆ ಅರ್ಹರಾಗಿರುತ್ತಾರೆ. ಮೂರು ಕಂತುಗಳಲ್ಲಿ ಗರ್ಭಿಣಿ ಮಹಳೆಯರ ಖಾತೆಗೆ ಹಣ ಜಮಾ ಆಗಲಿದೆ.
ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ ಗರ್ಭಧಾರಣೆಯ ನೋಂದಣಿ ಸಮಯದಲ್ಲಿ ಮೊದಲು 2,000 ಹಾಗೂ ಆರು ತಿಂಗಳ ನಂತರ 2,000 ಸಾವಿರ ಹಾಗು ಮಗುವಿನ ಜನನದ ನೋಂದಣಿಯ ನಂತರ ಮೂರನೇ ಕಂತಿನಲ್ಲಿ 2,000 ರೂ ಗಳನ್ನೂ ನೀಡಲಾಗುತ್ತದೆ.