PMMVY: ಕೇಂದ್ರದಿಂದ ಮಹಿಳೆಯರಿಗೆ ಹೊಸ ಯೋಜನೆ, ಪ್ರತಿ ಮಹಿಳೆಯರಿಗೆ ಸಿಗಲಿದೆ 11,000 ರೂ.

ಕೇಂದ್ರದಿಂದ ಪ್ರತಿ ಮಹಿಳೆಯರಿಗೆ ಸಿಗಲಿದೆ 11000 ರೂ

Pradhan Mantri Matru Vandana Yojana Details: ದೇಶದಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸುತ್ತಿದೆ. ಭಾರತ ಸರ್ಕಾರ ದೇಶದ ಬಡ ಮಹಿಳೆಯರಿಗೆ ನೆರವಾಗಲು ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಮಹಿಳಾ ಸಬಲೀಕರಣ ಸರ್ಕಾರದ ಗುರಿಯಾಗಿದೆ. ಸದ್ಯ ಮಹಿಳೆಯರ ಸಬಲೀಕರಣದ ಜೊತೆಗೆ ಗರ್ಭಿಣಿ ಮಹಿಳೆಯರಿಗೂ ಕೂಡ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಗರ್ಭಿಣಿ ಮಹಿಳೆಯರ ಉತ್ತಮ ಆರೋಗ್ಯಕ್ಕಾಗಿ ಅವರಿಗೆ ಆರ್ಥಿಕ ನೆರವಾಗಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಇದಕ್ಕಾಗಿ ಸರ್ಕಾರದಿಂದ ವಿಶೇಷ ಯೋಜನೆ ಜಾರಿಯಾಗಿದೆ. ನಾವೀಗ ಈ ಲೇಖನದಲ್ಲಿ ಕೇಂದ್ರ ಸರ್ಕಾರ ಗರ್ಭಿಣಿಯರಿಗಾಗಿ ಪರಿಚಯಿಸಿರುವ ಯೋಜನೆಯ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಯೋಜನೆಯ ಲಾಭವನ್ನು ಪಡೆಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Pradhan Mantri Matru Vandana Yojana Details
Image Credit: pwonlyias

ಕೇಂದ್ರದಿಂದ ಮಹಿಳೆಯರಿಗೆ ಹೊಸ ಯೋಜನೆ
ಇನ್ನು ಗರ್ಭಿಣಿ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಅವರು Matru Vandana ಯೋಜನೆಯನ್ನು ರೂಪಿಸಿದೆ. PMMVY ಅಡಿಯಲ್ಲಿ ದೇಶದ ಕೋಟ್ಯಂತರ ಗರ್ಭಿಣಿ ಮಹಿಳೆಯರು ಆರ್ಥಿಕ ಬೆಂಬಲ ಪಡೆಯಬಹುದು. ಗರ್ಭಿಣಿ ಮಹಿಳೆಯರ ಆರೋಗ್ಯಕ್ಕಾಗಿ ಹಾಗೂ ಮಗು ಜನಸಿದ ನಂತರ ಮಗುವಿಗೆ ಅಗತ್ಯ ಪೋಷಕಾಂಶಗಳನ್ನು ನೀಡುವ ಸಲುವಾಗಿ ಸರ್ಕಾರ ಆರ್ಥಿಕವಾಗಿ ನೆರವಾಗಲು ಈ ಯೋಜನೆಯನ್ನು ಪರಿಚಯಿಸಿದೆ.

ದೇಶದ ಪ್ರತಿ ಗರ್ಭಿಣಿ ಮಹಿಳೆಯು ಕೂಡ ಕೇಂದ್ರ ಸರ್ಕಾರದ PMMVY ಅಡಿಯಲ್ಲಿ ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದಾಗಿದೆ. ಗರ್ಭಿಣಿ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಯೋಜನೆಯ ಲಾಭವನ್ನು ಪಡೆಯಬಹುದು. ಮಕ್ಕಳಲ್ಲಿ ಹೆಚ್ಚುತ್ತಿರುವ ರಕ್ತಹೀನತೆ, ಅಪೌಷ್ಟಿಕತೆ ಇವಲ್ಲೆವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮೋದಿ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ. ದೇಶದ ಗರ್ಭಿಣಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಬಾರದು ಎನ್ನುವುದು ಸರ್ಕಾರ ಉದ್ದೇಶವಾಗಿದೆ.

Pradhan Mantri Matru Vandana Yojana
Image Credit: Gomedii

ಪ್ರತಿ ಮಹಿಳೆಯರಿಗೆ ಸಿಗಲಿದೆ 11000 ರೂ
ಕೆಂದ್ರ ಸರ್ಕಾರ ಗರ್ಭಿಣಿಯರಿಗೆ PMMVY ಅಡಿಯಲ್ಲಿ 5 ಸಾವಿರ ಹಣ ನೀಡಲಿದೆ. ಫಲಾನುಭವಿ ಮಹಿಳೆಯರಿಗೆ ಸರ್ಕಾರ 5000 ರೂ ಗಳನ್ನೂ ಡಿಬಿಟಿ ಮೂಲಕ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಿದೆ. PMMVY ಯೋಜನೆಯಡಿಯಲ್ಲಿ, ಗರ್ಭಧಾರಣೆಯ ನೋಂದಣಿ ಸಮಯದಲ್ಲಿ ಮೊದಲು 1,000 ಹಾಗೂ ಆರು ತಿಂಗಳ ನಂತರ 2,000 ಸಾವಿರ ಹಾಗು ಮಗುವಿನ ಜನನದ ನೋಂದಣಿಯ ನಂತರ ಮೂರನೇ ಕಂತಿನಲ್ಲಿ 2,000 ರೂ ಗಳನ್ನೂ ನೀಡಲಾಗುತ್ತದೆ. ಇನ್ನು ಎರಡನೇ ಮಗುವಿನ ಜನನ ಸಮಯದಲ್ಲಿ 6000 ರೂ. ಗಳನ್ನ ನೀಡುತ್ತಿದೆ. ಈ ಯೋಜನೆಯಡಿ ನೀವು ಒಟ್ಟಾಗಿ 11,000 ರೂ ಹಣವನ್ನು ಪಡೆಯಬಹುದಾಗಿದೆ.

Join Nadunudi News WhatsApp Group

Pradhan Mantri Matru Vandana Yojana Money
Image Credit: Kannada News

Join Nadunudi News WhatsApp Group