No Interest Loan: ಯಾವುದೇ ಗ್ಯಾರಂಟಿ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ, ಮೋದಿ ಸರ್ಕಾರದಿಂದ ಇನ್ನೊಂದು ಗುಡ್ ನ್ಯೂಸ್.

ನೀವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದರೆ ಈಗಲೇ ಈ ಯೋಜನೆಗೆ ಅರ್ಜಿಸಲ್ಲಿಸಿ.

No Interest Loan Scheme In India: ಕೇಂದ್ರ ಸರ್ಕಾರ (Central Government) ಭಾರತೀಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಸಾಮಾನ್ಯರು ತಮ್ಮ ಕಾಲಮೇಲೆ ತಾವು ನಿಂತುಕೊಳ್ಳಬೇಕು ಅನ್ನುವ ಉದ್ದೇಶದಿಂದ Modi Government ಹಲವು ಯೋಜನೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಿದೆ. ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಹಣದ ಅವಶ್ಯಕತೆ ತುಂಬ ಇರುತ್ತದೆ.

ಹಾಗಾಗಿ ಜನರು Bank ಮೊರೆ ಹೋಗುತ್ತಾರೆ. ಆದರೆ ಬ್ಯಾಂಕ್ ಗಳು ಸಾಲದ ಮೇಲೆ ಬಡ್ಡಿ ವಿಧಿಸುತ್ತವೆ. ಹಾಗಾಗಿ ಜನಸಾಮಾನ್ಯರು ಸ್ವಂತ ಉದ್ಯೋಗದ ಆಸೆಯನ್ನು ಕೈಬಿಡುತ್ತಾರೆ. ಇದೀಗ Central Government ಸ್ವಂತ ಉದ್ಯೋಗದ ಕನಸನ್ನು ಕಂಡ ಜನರಿಗೆ ಆರ್ಥಿಕವಾಗಿ ನೆರವಾಗಲು ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ಸಾಲ ನೀಡಲು ಮುಂದಾಗಿದೆ.

Pradhan mantri mudra yojana benefits
Image Credit: Tneaonline

ಪ್ರಧಾನ ಮಂತ್ರಿ ಮುದ್ರಾ ಯೋಜನೆ
ಇದೀಗ ಮೋದಿ ಸರ್ಕಾರವು Pradhan Mantri Mudra ಯೋಜನೆಯನ್ನು ಪ್ರಾರಂಭಿಸಿದೆ. ಇದರಿಂದ ಜನರಿಗೆ ಅಧಿಕವಾಗಿ ಲಾಭ ಸಿಗಲಿದೆ. ನೀವು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎಂದುಕೊಂಡಿದ್ದರೆ ಈಗಲೇ ಈ ಯೋಜನೆಗೆ ಅರ್ಜಿಸಲ್ಲಿಸಬಹುದಾಗಿದೆ. ಈ ಯೋಜನೆಯಿಂದ ಜನರು ಫ್ಲಾಟ್ ಸಾಲದ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

Pradhan Mantri Mudra Yojana Details
ಈ ಯೋಜನೆಯನ್ನು ಕೇಂದ್ರ ಸರ್ಕಾರ 2015 ರಲ್ಲಿ ಪ್ರಾರಂಭಿಸಿದೆ. ಕೇಂದ್ರದ ಮೋದಿ ಸರ್ಕಾರ ನಡೆಸುತ್ತಿರುವ Pradhan Mantri Mudra Loan ಅಡಿಯಲ್ಲಿ ಯಾವುದೇ ಖಾತರಿ ಇಲ್ಲದೆ ದೊಡ್ಡ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ಈ ಯೋಜನೆಯಲ್ಲಿ 3 ವಿಭಾಗಗಳಾಗಿ ಸಾಲವನ್ನು ನೀಡಲಾಗುತ್ತದೆ.

ಮೊದಲನೆಯದಾಗಿ ಶಿಶು ಸಾಲದಡಿ 50 ಸಾವಿರ ರೂಪಾಯಿಗಳ ಖಾತರಿ ಸಾಲ ನೀಡಲಾಗುತ್ತಿದೆ. ಇದಲ್ಲದೆ ಕಿಶೋರ್ ಸಾಲದ ಅಡಿಯಲ್ಲಿ 5 ಲಕ್ಷದ ವರೆಗೆ ಮೊತ್ತವನ್ನು ನೀಡಲಾಗುತ್ತಿದೆ. ಇನ್ನು ದೊಡ್ಡ ಕೆಲಸ ಮಾಡಬೇಕೆಂದರೆ ತರುಣ್ ಯೋಜನೆಯಡಿ 10 ಲಕ್ಷ ರೂಪಾಯಿಯ ವರೆಗೆ ಸಾಲವನ್ನು ನೀಡಲಾಗುತ್ತಿದೆ.

Join Nadunudi News WhatsApp Group

Pradhan mantri mudra yojana
Image Credit: Grainmart

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ
ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಗೆ 24 ರಿಂದ 70 ವರ್ಷದ ಭಾರತೀಯರು ಅರ್ಜಿ ಸಲ್ಲಿಸಬಹುದಾಗಿದೆ. ಸಾಲದ ಅರ್ಜಿ ಜೊತೆಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ವಿಳಾಸ ಪುರಾವೆ ಇತ್ಯಾದಿಗಳನ್ನು ನೀಡಬೇಕಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು mudra.org.in ಗೆ ಭೇಟಿನೀಡಬೇಕಾಗುತ್ತದೆ. ನಂತರ ಫಾರ್ಮ್ ಭರ್ತಿ ಮಾಡಿ ನಿಮ್ಮ ಹತ್ತಿರದ ಸರ್ಕಾರೀ ಅಥವಾ ಖಾಸಗಿ ಬ್ಯಾಂಕ್ ಗೆ ಸಲ್ಲಿಸಬೇಕಾಗುತ್ತದೆ. ಎಲ್ಲ ದಾಖಲೆಯನ್ನು ಪರಿಶೀಲಿಸಿದ ನಂತರ ಬ್ಯಾಂಕ್ ನಿಮಗೆ ಸಾಲವನ್ನು ನೀಡುತ್ತದೆ.

Join Nadunudi News WhatsApp Group