Shram Yogi: ದೇಶದ ಎಲ್ಲಾ ಕಾರ್ಮಿಕರಿಗೆ ದೀಪಾವಳಿ ಗಿಫ್ಟ್, ಈ ಯೋಜನೆಯಲ್ಲಿ ಪ್ರತಿ ತಿಂಗಳು 3000 ರೂ. ಪಿಂಚಣಿ ಸಿಗಲಿದೆ.

ಈ ಯೋಜನೆಯಲ್ಲಿ ಪ್ರತಿ ತಿಂಗಳು 3000 ರೂ. ಪಿಂಚಣಿ ಪಡೆಯಬಹುದಾಗಿದೆ.

Pradhan Mantri Shram Yogi Mandhan Yojana: ಕೇಂದ್ರ ಸರ್ಕಾರ ಈಗಾಗಲೇ ವಿವಿಧ ಹೂಡಿಕೆಯ ಯೋಜನೆಯನ್ನು ಪರಿಚಯಿಸಿದೆ. ಸಾಮಾನ್ಯವಾಗಿ ಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರು ಪಿಎಫ್(PF) ಯೋಜನೆಗಳಲ್ಲಿ ಹೂಡಿಕೆ ಮಾಡಿ ಲಾಭವನ್ನು ಪಡೆಯಬಹುದು. ಇದೀಗ ಕೇಂದ್ರದ ಮೋದಿ ಸರಕಾರ ಅಸಂಘಟಿತ ವಲಯದ ಕಾರ್ಯಕರ್ತರಿಗೆ ಹೊಸ ಪಿಂಚಣಿ ಯೋಜನೆಯನ್ನು ಪರಿಚಯಿಸಿದೆ.

ಮೋದಿ ಸರ್ಕಾರ ಹೊಸ ಪಿಂಚಣಿಯ ಯೋಜನೆ ಅಡಿಯಲ್ಲಿ 15,000 ಹಾಗೂ ಅದಕ್ಕಿಂತ ಕಡಿಮೆ ಆದಾಯ ಹೊಂದಿದ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ 60 ವರ್ಷ ಮೇಲ್ಪಟ್ಟ ಅಸಂಘಟಿತ ವಲಯ ಕಾರ್ಮಿಕ ಮಾಸಿಕ ಪಿಂಚಣಿಯನ್ನು ಪಡೆಯುವ ಮೂಲಕ ನಿವೃತ್ತಿಯ ನಂತರದ ಜೀವನವನ್ನು ಯಾವುದೇ ಚಿಂತೆಯಿಲ್ಲದೆ ಕಳೆಯಬಹುದಾಗಿದೆ.

Shram Yogi Yojana
Image Credit: Jagran

Pradhan Mantri Shram Yogi Mandhan Yojana
ಸದ್ಯ ಕೇಂದ್ರ ಸರ್ಕಾರ Pradhan Mantri Shramayogi Mandhan ಯೋಜನೆಯನ್ನು ಜಾರಿಗೊಳಿಸುತ್ತಿದೆ. ವಿಶೇಷವಾಗಿ ಅಸಂಘಟಿತ ವಲಯವನ್ನು ಸುರಕ್ಷಿತವಾಗಿಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಾಸಿಕ ಪಿಂಚಣಿಯ ಲಾಭವನ್ನು ಪಡೆಯಬಹುದು. ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರಿಗೆ ಈ ಯೋಜನೆ ಉತ್ತಮ ಆಯ್ಕೆ ಎನ್ನಬಹುದು.

ಈ ಯೋಜನೆಯಲ್ಲಿ ಪ್ರತಿ ತಿಂಗಳು 3000 ರೂ. ಪಿಂಚಣಿ ಸಿಗಲಿದೆ
ಇನ್ನು 18 ರಿಂದ 40 ವರ್ಷ ವಯಸ್ಸಿನ ಜನರು ಮತ್ತು ಅಸಂಘಟಿತ ವಲಯಕ್ಕೆ ಸಂಬಂಧಿಸಿದ ಜನರು ಮಾತ್ರ Pradhan Mantri Shramayogi Mandhan ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನೀವು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನೀವು ಪ್ರತಿದಿನ 1.83 ರೂ. ಗಳನ್ನು ಉಳಿಸಬಹುದು. ನೀವು ಪ್ರತಿ ತಿಂಗಳು 55 ರೂ. ನಿಂದ 200 ರೂ. ಹೂಡಿಕೆ ಮಾಡಬೇಕಾಗುತ್ತದೆ. ನಿಮಗೆ 60 ವರ್ಷ ತುಂಬಿದಾಗ ಮಾಸಿಕ 3,000 ರೂಪಾಯಿ ಪಿಂಚಣಿ ಸಿಗುತ್ತದೆ.

PM Shram Yogi Mandhan Yojana
Image Credit: Haribhoomi

ಈ ದಾಖಲೆಗಳ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಿ
ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತಿಂಗಳಿಗೆ ರೂ. 3 ಸಾವಿರ ಪಿಂಚಣಿ ಪಡೆಯಬಹುದು. ಇನ್ನು https://maandhan.in/ ನಲ್ಲಿ ಶ್ರಮ ಯೋಗಿ Mandhan ಯೋಜನೆಯ ಅಧಿಕೃತ ವೆಬ್‌ ಸೈಟ್‌ ಗೆ ಭೇಟಿ ನೀಡಬಹುದು. ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಗಾತ್ರದ ಫೋಟೋ, ಮೊಬೈಲ್ ಸಂಖ್ಯೆ, ಗುರುತಿನ ಚೀಟಿ, ವ್ಯಾಪಾರ ವಿಳಾಸ, ಆದಾಯ ಪ್ರಮಾಣಪತ್ರ ಮುಂತಾದ ದಾಖಲೆಗಳನ್ನು ನೀಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group

Join Nadunudi News WhatsApp Group