Free Mobile: ದೇಶದ ಪ್ರತಿಯೊಬ್ಬರಿಗೂ ಸಿಗಲಿದೆ ಉಚಿತ ಮೊಬೈಲ್, ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.
ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಕೇಂದ್ರ ಸರ್ಕಾರದಿಂದ ಮೊಬೈಲ್ ಸಿಗುತ್ತದೆ ಅನ್ನುವ ಸುದ್ದಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
Central Government Free Smartphone Scheme: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದಲ್ಲೆಡೆ ಜನಸಾಮಾನ್ಯರ ಅನುಕೂಲಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅದರಲ್ಲೂ ರೈತರಿಗಾಗಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳು ಬಿಡುಗಡೆಗೊಂಡಿವೆ.
ಇನ್ನು ಕೇಂದ್ರದ ಮೋದಿ ಸರ್ಕಾರ ಹೊಸ ಯೋಜನೆಯನ್ನು ಬಿಡುಗಡೆ ಮಾಡುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಿದಾಡುತ್ತವೆ. ಇತ್ತೀಚೆಗಷ್ಟೇ ದೇಶದ ಜನತೆಗೆ ಮೋದಿ ಸರ್ಕಾರ ಉಚಿತವಾಗಿ ಮೊಬೈಲ್ ಫೋನ್ ಗಳನ್ನೂ ನೀಡಲಿದೆ ಎನ್ನುವ ಬಗ್ಗೆ ಮಾಹಿತಿ ಹೊರಬಿದ್ದಿತ್ತು.
ಇದೀಗ ಈ ವೈರಲ್ ಮಾಹಿತಿಯ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವೈರಲ್ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ತಿಳಿಯೋಣ.
ಪ್ರದಾನ ಮಂತ್ರಿ ಸ್ಮಾರ್ಟ್ ಫೋನ್ ಯೋಜನೆ (Pradhan Mantri Smart Phone Yojana)
ಇತ್ತೀಚೆಗಷ್ಟೇ ಪ್ರಧಾನ ಮಂತ್ರಿ ಅವರ ಸ್ಮಾರ್ಟ್ ಯೋಜನೆಯ ಬಗ್ಗೆ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಈ ಯೋಜನೆಯಡಿಯಲ್ಲಿ ದೇಶದ ಜನತೆಗೆ ಮೋದಿ ಸರ್ಕಾರ ಉಚಿತವಾಗಿ ಮೊಬೈಲ್ ಫೋನ್ ಗಳನ್ನೂ ನೀಡಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ವೈರಲ್ ಆಗಿದ್ದವು.
ದೇಶದ ಜನೆತೆಗೆ ಉಚಿತವಾಗಿ ಮೊಬೈಲ್ ಫೋನ್ ಒದಗಿಸುವ ವೈರಲ್ ಮಾಹಿತಿಯ ಬಗ್ಗೆ ಇದೀಗ ಕೇಂದ್ರ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ. ಈ ಬಗ್ಗೆ PIB ಕೂಡ ಸ್ಪಷ್ಟನೆ ನೀಡಿದೆ.
ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
ದೇಶದ ನಾಗರಿಕರಿಗೆ ಮೋದಿ ಸರ್ಕಾರ ಉಚಿತವಾಗಿ ಮೊಬೈಲ್ ಫೋನ್ ಗಳನ್ನೂ ನೀಡಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ವೈರಲ್ ಆಗಿದ್ದವು. ಈ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಈ ಸುದ್ದಿ ಸಂಪೂರ್ಣವಾಗಿ ನಕಲಿ ಎಂದು ತಿಳಿಸಿದೆ. ಈ ವೈರಲ್ ಸುದ್ದಿಯ ಬಗ್ಗೆ PIB ಫ್ಯಾಕ್ಟ್ ಚೆಕ್ ಕೂಡ ಸುದ್ದಿ ಸುಳ್ಳು ಎಂದು ವರದಿ ಮಾಡಿದೆ.
ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿಲ್ಲ ಮತ್ತು ಇದೊಂದು ಸುಳ್ಳು ಸುದ್ದಿ ಎಂದು PIB ಜನರಿಗೆ ಸ್ಪಷ್ಟನೆ ನೀಡಿದೆ. ಸದ್ಯ ಕೇಂದ್ರದ ಸರ್ಕಾರದ ಕೆಲವು ಯೋಜನೆಗಳ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಜನರು ಅದಕ್ಕೆ ತಲೆಕೊಡಬಾರದು ನುಡಿ PIB ತಿಳಿಸಿದೆ.