PMUY: BPL ರೇಷನ್ ಕಾರ್ಡ್ ಇದ್ದವರಿಗೆ ಸಿಗಲಿದೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್, ಇಂದೇ ಅರ್ಜಿ ಸಲ್ಲಿಸಿ.
ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಈ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್.
Pradhan Mantri Ujjwala Yojana Application Process: ಪ್ರತಿ ತಿಂಗಳ ಆರಂಭದಲ್ಲಿ ಜನರು ಗ್ಯಾಸ್ ಸಿಲಿಂಡರ್ ಬೆಲೆಯ ಇಳಿಕೆಯ ಬಗ್ಗೆ ನಿರೀಕ್ಷಿಸುತ್ತಾರೆ. ಏಕೆಂದರೆ ಸರ್ಕಾರ ಪ್ರತಿ ತಿಂಗಳಿಗೊಮ್ಮೆ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯನ್ನು ಪರಿಷ್ಕರಿಸುತ್ತದೆ. ಹೊಸ ವರ್ಷದ ಆರಂಭದಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡುಬಂದಿಲ್ಲ.
ಸದ್ಯ ಏರಿಕೆಯಾಗುತ್ತಿರುವ Gas Cylinder ಬೆಲೆಗೆ ಬ್ರೇಕ್ ಹಾಕಲು ಸರ್ಕಾರ ಹೊಸ ಹೆಜ್ಜೆ ಇಟ್ಟಿದೆ. ದೇಶದ ಬಡ ಜನರಿಗಾಗಿ Gas Cylinder Subsidy ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಮೋದಿ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ನೀವು ಯೋಜನೆಯ ಲಾಭ ಪಡೆಯಬಹುದು. ಮೋದಿ ಸರ್ಕಾರದ Gas Cylinder Subsidy ಯೋಜನೆ ಯಾವುದು? ಅರ್ಜಿ ಸಲ್ಲಿಕೆಯ ವಿಧಾನ ಹೇಗೆ? ಎನ್ನುವ ಪ್ರಶ್ನೆಗಳ ಇಲ್ಲಿದೆ ಉತ್ತರ.
Pradhan Mantri Ujjwala Yojana
ಕೇಂದ್ರ ಸರ್ಕಾರ ದೇಶದ ಜನತೆಗೆ ಇದೀಗ ಗ್ಯಾಸ್ ಸಿಲಿಂಡರ್ ವಿಚಾರವಾಗಿ ಸಿಹಿಸುದ್ದಿ ನೀಡಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗಳ ಮೇಲೆ 200 ರೂ. ಸಬ್ಸಿಡಿಯನ್ನು ಸರ್ಕಾರ ಘೋಷಿಸಿದೆ. ಇದರ ಜೊತೆಗೆ ಈ ಯೋಜನೆಯಡಿ ಕೇಂದ್ರವು ದೇಶದಲ್ಲಿ 75 ಲಕ್ಷ ಹೊಸ ಎಲ್ ಪಿಜಿ ಸಂಪರ್ಕವನ್ನು ಘೋಷಿಸಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 75 ಲಕ್ಷ ಬಡ ಕುಟುಂಬಗಳಿಗೆ ಉಚಿತ LPG ಸಂಪರ್ಕ ನೀಡುವಂತೆ ಕೇಂದ್ರದ ಮೋದಿ ಸರ್ಕಾರ ನಿರ್ಧರಿಸಿದೆ. ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಈ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಸಂಪರ್ಕ ಸಿಗಲಿದೆ.
PM Ujjwala ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ..?
*https://www.pmuy.gov.in/index.aspx ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
*ವೆಬ್ ಸೈಟ್ ಓಪನ್ ಆದ ತತ್ಕ್ಷಣ HP, Inden ಅಥವಾ Bharat Gas ನಂತಹ ಗ್ಯಾಸ್ ವಿತರಕರನ್ನು ಆಯ್ಕ ಮಾಡಬೇಕು. ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇತರ ವಿವರಗಳನ್ನು ನೀ ಅರ್ಜಿಯನ್ನು ಭರ್ತಿ ಮಾಡಬೇಕು.
*ದಾಖಲೆಗಳ ಸಾಫ್ಟ್ ಕಾಪಿಯನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಬೇಕುತ್ತದೆ.
*ದಾಖಲೆಗಳನ್ನು ಪರಿಶೀಲಿಸಿದ ನಂತರ ಹೊಸ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ.
*ಅರ್ಜಿ ಸಲ್ಲಿಕೆಗೆ Aadhaar card , ಹೆಸರು, ಮೊಬೈಲ್ ಸಂಖ್ಯೆ ಸೇರಿದಂತೆ ಇನ್ನಿತರ ಅನೇಕ ವೈಯಕ್ತಿಕ ದಾಖಲೆಗಳ ಮಾಹಿತಿ ಅಗತ್ಯವಿದೆ.