Jan dhan Yojana: ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೆ ಸರ್ಕಾರವೇ ಕೊಡಲಿದೆ 10 ಸಾವಿರ ರೂ, ಇಂತವರಿಗೆ ಮಾತ್ರ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಮೂಲಕ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಿರಿ.

Pradhana Mantri Jandhan Yojana Account: ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಾಕಷ್ಟು ಜನರು ಸರ್ಕಾರ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ಒಂದು. ಈ ಯೋಜನೆಯಲ್ಲಿ ಇರುವವರಿಗೆ ಇದೀಗ ಒಂದು ದೊಡ್ಡ ಮಟ್ಟದ ಪ್ರಯೋಜನ ಸಿಗಲಿದೆ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ 47 ಕೋಟಿಗೂ ಹೆಚ್ಚು ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಆದರೆ ಬಹುತೇಕರಿಗೆ ಈ ಖಾತೆಗಳ ಮೂಲಕ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಜನ್ ಧನ್ ಖಾತೆದಾರರಿಗೆ ಸರ್ಕಾರ 10 ಸಾವಿರ ರೂಪಾಯಿ ನೀಡಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದಷ್ಟೇ ಅಲ್ಲದೆ ಈ ಖಾತೆಯಲ್ಲಿ 1,30,000 ವರೆಗಿನ ವಿಮೆಯ ಲಭ್ಯತೆಯಂತಹ ಪ್ರಯೋಜನವನ್ನು ಪಡೆಯಬಹುದು.

Benefits of Pradhan Mantri Jan Dhan Yojana
Image Credit: News18

ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಪ್ರಯೋಜನಗಳು
* ಜನ್ ಧನ್ ಖಾತೆಯ ಅಡಿಯಲ್ಲಿ ಖಾತೆದಾರರಿಗೆ ವಿವಿಧ ಪ್ರಯೋಜನಗಳನ್ನು ನೀಡಲಾಗುತ್ತದೆ. ಮೊದಲ ಅನುಕೂಲವೆಂದರೆ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವ ಅಗತ್ಯವಿಲ್ಲ.

* ಹೆಚ್ಚುವರಿಯಾಗಿ ರೂಪೇ ಡೆಬಿಟ್ ಕಾರ್ಡ್ ನೀಡಲಾಗಿದೆ. ಈ ಖಾತೆಯಲ್ಲಿ ನೀವು ಬಯಸಿದರೆ ಓವರ್ ಡ್ರಾಫ್ಟ್ ಗಾಗಿ ಬ್ಯಾಂಕ್ ಗೆ 10,000 ರೂಪಾಯಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಬೇಕು.

* ಆಕಸ್ಮಿಕ ಮರಣ ಸಂಭವಿಸಿದಲ್ಲಿ ಜನ್ ಧನ್ ಖಾತೆದಾರರಿಗೆ 1 ಲಕ್ಷ ರೂಪಾಯಿ ಅಪಘಾತ ವಿಮಾ ಪಾಲಿಸಿ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸತ್ತದೆ.

Join Nadunudi News WhatsApp Group

Benefits of Pradhan Mantri Jan Dhan Yojana
Image Credit: Haribhoomi

* ಹೆಚ್ಚುವರಿಯಾಗಿ 30,000 ರೂಪಾಯಿ ಜೀವ ವಿಮಾ ಪಾಲಿಸಿ ನೀಡಲಾಗುತ್ತದೆ. ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಖಾತೆದಾರರ ಕುಟುಂಬ ಕ್ಕೆ 1 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುತ್ತದೆ. ಮತ್ತೊಂದೆಡೆ ಸಾಮಾನ್ಯ ಸಂದರ್ಭದಲ್ಲಿ ಸಾಯುವ ಸಂದರ್ಭದಲ್ಲಿ 30,000 ರೂಪಾಯಿ ವಿಮಾ ರಕ್ಷಣೆಯ ಮೊತ್ತವನ್ನು ಒದಗಿಸಲಾಗಿದೆ.

* ನಿಮಗೂ ಈ ಪ್ರಯೋಜನಗಳು ಬೇಕಿದ್ದರೆ, ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಯಲ್ಲಿ ನೀವು ಜನ್ ಧನ್ ಖಾತೆಯನ್ನ ತೆರೆಯಬಹುದು. ಇದಕ್ಕಾಗಿ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.

Join Nadunudi News WhatsApp Group