Ads By Google

Prajwal Revanna: ವೈರಲ್ ಆಯಿತು ಅರೆಸ್ಟ್ ಆಗುವಾಗ ಪ್ರಜ್ವಲ್ ರೇವಣ್ಣ ಧರಿಸಿದ್ದ ಬಟ್ಟೆಯ ಬ್ರಾಂಡ್, ದುಬಾರಿ ಬ್ರಾಂಡ್

prajwal revanna viral news

Image Credit: Original Source

Ads By Google

Prajwal Revanna Arrest: ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಇದೀಗ ಬಂದಿತರಾಗಿದ್ದಾರೆ. ಪ್ರಕರಣ ಬೆಳಕಿಗೆ ಬಂದ ದಿನದಿಂದ 33 ದಿನಗಳು ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಮೇ 30 ರ ಗುರುವಾರ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಅಶ್ಲೀಲ ವಿಡಿಯೋ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಗುರುವಾರ ರಾತ್ರಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲಾಗಿದೆ. ಇದೀಗ ಅರೆಸ್ಟ್ ಆಗುವಾಗ ಪ್ರಜ್ವಲ್ ರೇವಣ್ಣ ಧರಿಸಿದ್ದ ಬಟ್ಟೆಯ ಬ್ರಾಂಡ್ ಬಗ್ಗೆ ವೈರಲ್ ಆಗುತ್ತಿದೆ.

Image Credit: Vistara News

ಅರೆಸ್ಟ್ ಆಗುವಾಗ ಪ್ರಜ್ವಲ್ ರೇವಣ್ಣ ಧರಿಸಿದ್ದ ಬಟ್ಟೆಯ ಬ್ರಾಂಡ್ ಯಾವುದು…?
ಸದ್ಯ ಪೆನ್ ಡ್ರೈವ್ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಬರುವಾಗ ಹಾಕಿಕೊಂಡು ಬಂದಿರುವ ಬಟ್ಟೆಯ ಬಗ್ಗೆ ವೈರಲ್ ಆಗುತ್ತಿದೆ. ಜರ್ಮನಿಯ ಮ್ಯೂನಿಕ್ ನಿಂದ ಬೆಂಗಳೂರಿಗೆ ಬಂದ ಕೂಡಲೇ ಪೊಲೀಸರು ಪ್ರಜ್ವಲ್ ರೇವಣ್ಣ ಅವರನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಪ್ರಜ್ವಲ್ ರೇವಣ್ಣ ಧರಿಸಿದ್ದ ಬೂದು ಬಣ್ಣದ ಹೂಡಿ ಬಟ್ಟೆ ಅಂಡರ್​ ಆರ್ಮರ್​ ಬ್ರಾಂಡ್ ​ನ ಕರಿ ಬಿಗ್ ಸ್ಲ್ಪಾಷ್​ ಹೂಡಿ ಟಿಶರ್ಟ್​. ಇದು ಅಂಡರ್ ಆರ್ಮರ್ ಅಮೆರಿಕ ಮೂಲದ ಸ್ಪೋರ್ಟ್ಸ್​ ಬ್ರಾಂಡ್​. ಈ ಕಂಪನಿ ನಾನಾ ರೀತಿಯ ಸ್ಪೋರ್ಟ್ಸ್​ ಮೆಟೀರಿಯಲ್​ ಅನ್ನು ಉತ್ಪಾದನೆ ಮಾಡುತ್ತದೆ.

ಭಾರತದಲ್ಲೂ ಈ ಬ್ರಾಂಡ್​ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಈ ಬ್ರಾಂಡ್ ನ ಬೆಲೆ ಕನಿಷ್ಠ 6 ಸಾವಿರದಿಂದ ಆರಂಭವಾಗುತ್ತದೆ. ಸದ್ಯ ಪ್ರಜ್ವಲ್ ರೇವಣ್ಣ ಧರಿಸಿದ್ದ ಬಟ್ಟೆ ಬೆಲೆ ಆನ್ಲೈನ್ ನಲ್ಲಿ 7 ಸಾವಿರ ತೋರಿಸುತ್ತಿದೆ. ಈ ಬಟ್ಟೆಯ ಬಗ್ಗೆ ಹುಡುಕಿಕೊಂಡು ಹೋದರೆ ಬೆಲೆಗಳನ್ನು ಡಾಲರ್​ ಲೆಕ್ಕದಲ್ಲಿ ತೋರಿಸುತ್ತಿದೆ. ಪ್ರಜ್ವಲ್ ರೇವಣ್ಣ ಈ ಬಟ್ಟೆಯನ್ನು ಜರ್ಮನಿಯಿಂದಲೇ ಖರೀದಿ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಅಂತಾರಾಷ್ಟ್ರೀಯ ಬ್ರಾಂಡ್​ ಆಗಿರುವ ಕಾರಣ ಅವರು ಅಲ್ಲಿಯೇ ಖರೀದಿ ಮಾಡಿರಬಹುದು. ಹೀಗಾಗಿ ಅವರು ಡಾಲರ್ ಲೆಕ್ಕದಲ್ಲಿಯೇ ದುಡ್ಡು ಪಾವತಿ ಮಾಡಿರಬಹುದು. ಅವರು ಈ ಬಟ್ಟೆಗೆ ಕನಿಷ್ಠ 10 ಸಾವಿರ ರೂಪಾಯಿ ಕೊಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

Image Credit: Kannada Prabha
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in