Ads By Google

Prajwal Revanna: ವಿದೇಶದಲ್ಲಿ ಪ್ರಜ್ವಲ್ ರೇವಣ್ಣಗೆ ಸಹಾಯ ಮಾಡಿದ್ದು ಆಕೆ…? ಅಷ್ಟಕ್ಕೂ ಆಕೆ ಯಾರು ಗೊತ್ತಾ.

Prajwal Revanna Case New Update

Image Credit: Original Source

Ads By Google

Prajwal Revanna Case New Update: ಸದ್ಯ ಹಾಸನದ ಮಾಜಿ ಶಾಸಕ ಪ್ರಜ್ವಲ್ ರೇವಣ್ಣ ಇದೀಗ SIT ವಿಚಾರಣೆಯಲ್ಲಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಾಕಷ್ಟು ಚರ್ಚೆಗೆ ಒಳಪಟ್ಟಿತ್ತು. ಪ್ರಜ್ವಲ್ ರೇವಣ್ಣ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ವಿದೇಶಕ್ಕೆ ಹಾರಿದ್ದರು ಒಂದು ತಿಂಗಳ ಬಳಿಕ ದೇಶಕ್ಕ್ಕೆ ಮರಳಿದ್ದಾರೆ.

ಸದ್ಯ SIT ಪ್ರಜ್ವಲ್ ರೇವಣ್ಣನ್ನು ತೇಣಿಕೆಗೆ ಒಳಪಡಿಸಿದ್ದು, ಸದ್ಯ ಹೊಸ ವಿಚಾರ ಬೆಳಕಿಗೆ ಬಂದಿದೆ. ಹೌದು, ಪ್ರಜ್ವಲ್ ರೇವಣ್ಣ ಪ್ರಕರಣ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಹಾರಲು ಸಹಾಯ ಮಾಡಿದ್ದು ಯಾರು…? ಎನ್ನುವ ಬಗ್ಗೆ ಮಾಹಿತಿ ವೈರಲ್ ಆಗುತ್ತಿದೆ. 

Image Credit: Times Of India

ವಿದೇಶದಲ್ಲಿ ಪ್ರಜ್ವಲ್ ರೇವಣ್ಣಗೆ ಸಹಾಯ ಮಾಡಿದ್ದು ಆಕೆ…?
ಸದ್ಯ ಪ್ರಜ್ವಲ್ ರೇವಣ್ಣ ಎಸ್‌ಐಟಿ ಬಲೆಗೆ ಬಿದ್ದಿದ್ದು, ಇದೀಗ ಮಾಜಿ ಸಂಸದರ ಗೆಳತಿಗೂ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ರಚಿಸಿದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಅವರ ಗೆಳತಿಗೂ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ ಎಂದು ವರದಿಯಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಪ್ರಜಾಲ್ವ್ ರೇವಣ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಹಲವು ಬಾರಿ ಎಸ್‌ಐಟಿ ನೋಟಿಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಇದು ತನಿಖಾಧಿಕಾರಿಗಳಿಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡಿತ್ತು.

ಈ ನಡುವೆ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ವಿದೇಶದಲ್ಲಿದ್ದಾಗ ಸಹಾಯ ಮಾಡಿದವರ ಬಗ್ಗೆ ಮಹತ್ವದ ದಾಖಲೆಗಳನ್ನು ಕಲೆ ಹಾಕಿದ್ದು, ಆಕೆಗೂ ನೋಟಿಸ್ ನೀಡಿ ವಿವರ ಕೇಳಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಆಕೆಯೂ ಆರ್ಥಿಕ ನೆರವು ನೀಡಿರುವ ಶಂಕೆ ಇದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಪ್ರಜ್ವಲ್ ರೇವಣ್ಣ ಸರಿಸುಮಾರು ಒಂದು ತಿಂಗಳು ಪೋಲೀಸರ ಕಣ್ಣಿಗೆ ಮಣ್ಣೆರಚಿ ಅವಿತಿರಲು ಪ್ರಜ್ವಲ್ ರೇವಣ್ಣ ಪ್ರೇಯಸಿ ಪಾಲು ಸಾಕಷ್ಟಿದೆ ಎನ್ನುವುದು ಸದ್ಯದ ಮಾಹಿತಿಯಾಗಿದೆ. ಇನ್ನು ಪ್ರಜ್ವಲ್ ರೇವಣ್ಣ ಗೆಳತಿಯ ಬಗ್ಗೆ ಅಷ್ಟು ಮಾಹಿತಿ ಇಲ್ಲವಾದರೂ ಈ ಬಗ್ಗೆ SIT ಹೆಚ್ಚಿನ ತನಿಖೆ ನಡೆಸುತ್ತಿದೆ.

Image Credit: Business-standard
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in