Prakash Raj About Pathan: ಪಠಾಣ್ ಚಿತ್ರದ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್, ಕೆಲವರು ಬೊಗಳುತ್ತಾರೆ ಕಚ್ಚಲ್ಲ.

Prakash Raj About Pathaan Movie Controversy: ಶಾರುಖ್ ಖಾನ್ (Shah Rukh Khan) ಹಾಗೂ v (Deepika Padukone) ಅಭಿನಯದ ಪಠಾಣ್ ಸಿನಿಮಾ (Pathan Movie) ವಿಶ್ವದೆಲ್ಲೆಡೆ ಬಾರಿ ಸದ್ದು ಮಾಡಿದೆ.

ಪಠಾಣ್ ಚಿತ್ರ ರಿಲೀಸ್ ಗು ಮುನ್ನವೇ ಸಾಕಷ್ಟು ವಿವಾದಗಳಿಗೆ ಸಿಲುಕಿತ್ತು. ಪಠಾಣ್ ಚಿತ್ರದ ಬೇಶರಮ್ ರಂಗ್ ಹಾಡಿನ ಕೇಸರಿ ಬಣ್ಣದ ಬಿಕಿನಿ ವಿವಾದದಿಂದಾಗಿ ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡುವಂತೆ ಸಾಕಷ್ಟು ಚರ್ಚೆಗಳು ಆಗಿದ್ದವು.

Prakash Raj About Paathan
Image Source: India Today

ಪಠಾಣ್ ಚಿತ್ರ ರಿಲೀಸ್ ಆಗಬಾರದು, ಪಠಾಣ್ ಅನ್ನು ಬಾಯ್ಕಾಟ್ ಮಾಡುವಂತೆ ಹಿಂದೂ ಪರ ಹೋರಾಟಗಾರರ ದ್ವನಿ ಜೋರಾಗಿಯೇ ಕೇಳಿ ಬಂದಿತ್ತು.

ಇನ್ನು ಬಿಕಿನಿ ವಿವಾದದ ಬೆನ್ನಲ್ಲೇ ಪಠಾಣ್ ಜನವರಿ 25 ರಂದು ತೆರೆ ಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ಪಠಾಣ್ ಚಿತ್ರವನ್ನು ಬಾಯ್ಕಾಟ್ ಮಾಡಿ ಎಂದವರಿಗೆ ನಟ ಪ್ರಕಾಶ್ ರಾಜ್ (Prakash Raj) ಇದೀಗ ಉತ್ತರ ನೀಡಿದ್ದಾರೆ.

Prakash Raj About Paathan
Image Source: India Today

ಪಠಾಣ್ ಟೀಕಿಸಿದವರಿಗೆ ಪ್ರಕಾಶ್ ರಾಜ್ ಟಾಂಗ್
ಪಠಾಣ್ ಸಿನಿಮಾ ಹಿಂದುತ್ವಕ್ಕೆ ವಿರುದ್ದವಾಗಿದೆ. ಹಾಗಾಗಿ ಪಠಾಣ್ ಸಿನಿಮಾವನ್ನು ಬಾಯ್ಕಾಟ್ ಮಾಡಿ ಎಂದವರಿಗೆ ಇದೀಗ ಪ್ರಕಾಶ್ ರಾಜ್ ಉತ್ತರಿಸಿದ್ದಾರೆ. ಇ ಬಗ್ಗೆ ಕೇರಳದ ತಿರುವಂತಪುರಂನಲ್ಲಿ ಪ್ರಕಾಶ್ ರಾಜ್ ಮಾತನಾಡಿದ್ದಾರೆ.

Join Nadunudi News WhatsApp Group

“ಪಠಾಣ್ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ಕೆಲವು ತುಂಬಾ ಅಂದುಕೊಂಡಿದಾರು. ಆದರೆ ಇ ಪಠಾಣ್ ಚಿತ್ರ ಇದೀಗ 700 ಕೋತಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದಿದ್ದಾರೆ. ಮೂರ್ಖರು, ಮತಾಂಧರು ಪಠಾಣ್ ನ ಬ್ಯಾನ್ ಮಾಡಲು ಬಯಸಿದ್ದರು. ಅವರು ಬೊಗಳುತ್ತಾರೆ, ಕಚ್ಚುವುದಿಲ್ಲ” ಎಂದು ನಟ ಪ್ರಕಾಶ್ ರಾಜ್ ಹೇಳಿದ್ದಾರೆ.

Prakash Raj About Paathan
Image Source: India Today

ಪಠಾಣ್ ಈವರೆಗಿನ ಕಲೆಕ್ಷನ್
ಪಠಾಣ್ ಸಿನಿಮಾ ಬಿಡುಗಡೆಯಾಗಿ ಹನ್ನೆರಡು ದಿನದಲ್ಲಿ 830 ಕೋಟಿ ರೂಪಾಯಿ ಅಧಿಕ ಗಳಿಕೆ ಮಾಡಿಕೊಂಡಿದೆ. ಭಾರತದಲ್ಲಿಯೇ ಪಠಾಣ್ ಸಿನಿಮಾ 515 ಕೋಟಿ ರೂ. ಬಾಚಿಕೊಂಡಿದ್ದು ಒಟ್ಟಾರೆಯಾಗಿ ವಿಶ್ವದಾದ್ಯಂತ 832.20 ಕೋಟಿ ರೂ ಬಾಚಿಕೊಂಡಿದೆ. ಪಠಾಣ್ ಸಿನಿಮಾ ಅನೇಕ ಸಿನಿಮಾಗಳ ಧಾಖಲೆ ಮುರಿದು ಭರ್ಜರಿ ಕಲೆಕ್ಷನ್ ಮಾಡಿದೆ.

Prakash Raj About Paathan
Image Source: Times Of India

Join Nadunudi News WhatsApp Group