Postpaid And Prepaid Comparison: 2026 ಆರಂಭವಾಗುತ್ತಿದಂತೆ ಹೊಸ ಹೊಸ ನಿಯಮಗಳು ಜಾರಿಗೆ ಬರುತ್ತಿದೆ. ಇದೀಗ ಸ್ಮಾರ್ಟ್ ಫೋನ್ ಬಳಕೆದಾರರಿಗೆ Prepaid Plan ಮತ್ತು Postpaid Plan ಎಂಬ ಪ್ರಶ್ನೆ ಎದುರಾಗಿದೆ. ಸಾಮಾನ್ಯವಾಗಿ ಹೆಚ್ಚಿನ ಜನರು Prepaid ಸಿಮ್ ಬಳಕೆ ಮಾಡುತ್ತಾರೆ ಮತ್ತು ಕೆಲವು ಮಾತ್ರ Postpaid ಸಿಮ್ ಬಳಕೆ ಮಾಡುತ್ತಾರೆ. ನಾವೀಗ Prepaid Plan ಮತ್ತು Postpaid Plan ನಲ್ಲಿ ಯಾವುದು ಉತ್ತಮ ಅನ್ನುವ ಬಗ್ಗೆ ಮಾಹಿತಿಯನ್ನ ತಿಳಿಯೋಣ.
Prepaid Plan ಮತ್ತು Postpaid Plan
Prepaid ಎಂದರೆ ಒಪ್ಪಂದವಿಲ್ಲದೆ ನಿಗದಿತ ಪ್ರಮಾಣದ ಡೇಟಾ, ಕರೆಗಳು, SMS ಗಾಗಿ ಮುಂಗಡವಾಗಿ ಪಾವತಿಸುವುದು, ಬಜೆಟ್ ನಿಯಂತ್ರಣದಲ್ಲಿರುತ್ತದೆ ಆದರೆ ಕಡಿಮೆ ಸವಲತ್ತುಗಳನ್ನು ನೀಡುತ್ತದೆ. Postpaid ಎಂದರೆ ಮೊದಲು ಸೇವೆಗಳನ್ನು ಬಳಸುವುದು ನಂತರ ಮಾಸಿಕವಾಗಿ ಬಿಲ್ ಪಾವತಿ ಮಾಡುವುದು, ಅನಿಯಮಿತ ಬಳಕೆ ಮತ್ತು ಹೆಚ್ಚುವರಿ ಪ್ರಯೋಜನಗಳನ್ನು (OTT ಚಂದಾದಾರಿಕೆಗಳು, ಕುಟುಂಬ ಯೋಜನೆಗಳು) ನೀಡುತ್ತದೆ.
Prepaid Plan Benefits
- ನೀವು ಬಳಕೆ ಮಾಡುವುದಕ್ಕೆ ಮಾತ್ರ ಹಣವನ್ನ ಪಾವತಿ ಮಾಡುತ್ತಿರಿ, ತಿಂಗಳಾಂತ್ಯದ ಶುಲ್ಕದಿಂದ ತಪ್ಪಿಸಿಕೊಳ್ಳುತ್ತೀರಿ
- ನೀವು ಬಯಸಿದಾಗ ಯೋಜನೆಯನ್ನು ಬಳಸಿಕೊಂಡು ಸಕ್ರಿಯಗೊಳಿಸಿಕೊಳ್ಳಬಹುದು
- ಕ್ರೆಡಿಟ್ ಪರಿಶೀಲನೆಗಳಿಲ್ಲ
- ನಿಮಗೆ ಅಗತ್ಯವಿರುವ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು
- ಕೆಲವು ಯೋಜನೆಗಳಲ್ಲಿ ಅನಿಯಮಿತ ರಾತ್ರಿ ಡೇಟಾ, ಡೇಟಾ ರೋಲ್‌ಓವರ್, Amazon Prime, Netflix, JioHotstar ಹಾಗೆ ಇತರ OTT ಚಂದಾದಾರಿಕೆಯನ್ನು ಪಡೆಯುಕೊಳ್ಲಬಹುದು.
- ನಿಮಗೆ ಬೇಕಾದ ಮಾನ್ಯತೆಯ ಅವಧಿಗೆ ರಿಚಾರ್ಜ್ ಮಾಡಿ ಪ್ರಯೋಜನವನ್ನು ಪಡೆದುಕೊಳ್ಳಿ
- ಇನ್ನು ವಾರ್ಷಿಕ ಪ್ಲಾನ್‌ಗಳು ದೈನಂದಿನ ಖರ್ಚು ಕಡಿಮೆ ಮಾಡುತ್ತವೆ.
Postpaid Plan Benefits
- ಮೊದಲು ಸೇವೆಯನ್ನು ಪಡೆದುಕೊಂಡು ನಂತರ ಮಾಸಿಕ ಬಿಲ್ ಅನ್ನು ಪಾವತಿಸಬೇಕು
- ಬಿಲ್ ಪಾವತಿ ವಿಳಂಬವಾದರೂ ಪಾವತಿಗೆ ಗ್ರೇಸ್ ಅವಧಿ ನೀಡಿ, ನಿರಂತರ ಸೇವೆ ನೀಡುತ್ತದೆ
- ಬಳಕೆಯಾಗದ ಡೇಟಾಗಳು ಮುಂದಿನ ಬಿಲ್ ಗೆ ವರ್ಗಾವಣೆ ಆಗುತ್ತದೆ.
- ಉಚಿತ OTT ( Netflix, Amazon Prime ) ಚಂದಾದಾರಿಕೆಗಳು, ಅಂತರರಾಷ್ಟ್ರೀಯ ರೋಮಿಂಗ್ ನಂತಹ ವಿಶೇಷ ಪ್ರಯೋಜನಗಳಿಗೆ ಪ್ರವೇಶ ನೀಡುತ್ತದೆ
- ಒಂದೇ ಯೋಜನೆಯ ಅಡಿಯಲ್ಲಿ ಕುಟುಂಬದ ಎಲ್ಲ ಬಳಕೆದಾರರು ಸೇವೆಯನ್ನು ಪಡೆದುಕೊಳ್ಳಬಹುದು
- ಕ್ರೆಡಿಟ್ ಸೌಲಭ್ಯವನ್ನು ನೀಡುತ್ತದೆ ಮತ್ತು ಭದ್ರತೆಗೆ ಗ್ರಾಹಕರ ಪರಿಶೀಲನೆಯ ಅಗತ್ಯವಿರುತ್ತದೆ
- ಹೆಚ್ಚು ಡೇಟಾ ಬಳಕೆದಾರರಿಗೆ ಸೂಕ್ತವಾಗಿದೆ
- ಜಿಯೋದ 349 ಪ್ಲಾನ್ ನಲ್ಲಿ 30GB + ಅನಿಯಮಿತ 5G ಲಭ್ಯ
- ಏರ್ಟೆಲ್ ನ 449 ಪ್ಲಾನ್ ನಲ್ಲಿ 50GB + Xstream ಲಭ್ಯ
- VI ನ 451 ಪ್ಲಾನ್ ನಲ್ಲಿ OTT ಮತ್ತು ರೋಲ್ ಓವರ್ ಲಭ್ಯ
ಯಾವುದು ಉತ್ತಮ?
- ಹೆಚ್ಚುವರಿ ಸವಲತ್ತುಗಳನ್ನು ಬಳಕೆ ಮಾಡಿ, ತಿಂಗಳ ಕೊನೆಯಲ್ಲಿ ಬಿಲ್ ಪಾವತಿ ಮಾಡುವವರಿಗೆ Postpaid Plan ಉತ್ತಮ ಆಯ್ಕೆ ಆಗಿದೆ.
- ಬಜೆಟ್ ನಿಯಂತ್ರಣ, ಒಪ್ಪಂದಗಳಿಲ್ಲ, ಕ್ರೆಡಿಟ್ ಪರಿಶೀಲನೆಗಳಿಲ್ಲದೆ, ಬಳಕೆ ಮಾಡುವುದಕ್ಕೆ ಮಾತ್ರ ಹಣವನ್ನ ಪಾವತಿ ಮಾಡಲು Prepaid Plan ಉತ್ತಮ ಆಯ್ಕೆ ಆಗಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

