Okinawa: 60 ಕಿಲೋ ಮೀಟರ್ ಮೈಲೇಜ್ ಕೊಡುವ ಈ ಸ್ಕೂಟರ್ ಖರೀದಿಸಲು ಮುಗಿಬಿದ್ದ ಜನರು, ಬೆಲೆ ಕೂಡ ಕಡಿಮೆ.
ಓಕಿನಾವಾ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಹಾಗೂ ವಿಶೇಷತೆ ಬಗ್ಗೆ ತಿಳಿಯಿರಿ.
Okinawa Electric Scooter: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಿದೆ. ಗ್ರಾಹಕರಿಗೆ ಬೇಕಾದ ಬೆಲೆಯಲ್ಲಿ ಅಂದರೆ ದುಬಾರಿ ಬೆಲೆಯಿಂದ ಹಿಡಿದು ಕಡಿಮೆ ಬೆಲೆಯವರೆಗೂ ದ್ವಿಚಕ್ರ ವಾಹನವನ್ನು ಖರೀದಿ ಮಾಡಬಹುದು.
ಸದ್ಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಸ್ಕೂಟರ್ ಬಿಡುಗಡೆ ಆಗಿದ್ದು ಕೆಲವೇ ದಿನಗಳಲ್ಲಿ ದಾಖಲೆಯ ಬುಕಿಂಗ್ ಕೂಡ ಆಗಿರುವುದನ್ನ ನಾವು ಗಮನಿಸಬಹುದಾಗಿದೆ.
ಓಕಿನಾವಾ ಲೈಟ್ ಎಲೆಕ್ಟ್ರಿಕ್ ಸ್ಕೂಟರ್
ಓಕಿನಾವಾ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಬಿಡುಗಡೆಯಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ಬಳಸಲಾಗಿದೆ. ಅನೇಕ ಆಧುನಿಕ ವೈಶಿಷ್ಟ್ಯಗಳನ್ನು ಸಹ ಇದರಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇದು ಕಂಪನಿಯ ಅತ್ತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಒಂದಾಗಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ದೀರ್ಘಕಾಲದವರೆಗೂ ಚಾರ್ಜ್ ನೀಡುತ್ತದೆ. ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾಹಿತಿ ತಿಳಿಯೋಣ.
ಓಕಿನಾವಾ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ನ ವಿಶೇಷತೆ
ಓಕಿನಾವಾ ಲೈಟ್ ಎಲೆಕ್ಟ್ರಿ ಸ್ಕೂಟರ್ 1.2 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ನಿಂದ ಶಕ್ತಿಯನ್ನು ಪಡೆಯುತ್ತದೆ. ಕಂಪನಿಯು BLDC ತಂತ್ರಜ್ಞಾನವನ್ನು ಆಧರಿಸಿ 250 W ಎಲೆಕ್ಟ್ರಿಕ್ ಮೋಟಾರ್ ಅನ್ನು ಸಹ ಸ್ಥಾಪಿಸಿದೆ.
ಅದರ ಚಾರ್ಜಿಂಗ್ ಗೆ ಸಂಬಂಧಿಸಿದಂತೆ ಈ ಸ್ಕೂಟರ್ ನ ಬ್ಯಾಟರಿ ಪ್ಯಾಕ್ ಅನ್ನು ಸಾಮಾನ್ಯ ಚಾರ್ಜರ್ ನೊಂದಿಗೆ ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿ ತನ್ನ ಬ್ಯಾಟರಿ ಪ್ಯಾಕ್ ನಲ್ಲಿ 3 ವರ್ಷಗಳ ವಾರಂಟಿಯನ್ನು ಸಹ ನೀಡುತ್ತದೆ. ಇದರಲ್ಲಿ ನೀವು 60 ಕಿಲೋಮೀಟರ್ ಗಳ ಮೈಲೇಜ್ ಮತ್ತು ಗಂಟೆಗೆ 25 ಕಿಲೋಮೀಟರ್ ಗಳ ಗರಿಷ್ಠ ವೇಗವನ್ನು ಸಹ ಪಡೆಯಬಹುದು.
ಓಕಿನಾವಾ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ
ಓಕಿನಾವಾ ಲೈಟ್ ಎಲೆಕ್ಟ್ರಿಕ್ ಸ್ಕೂಟರ್ ನ ವೈಶಿಷ್ಟ್ಯಗಳು ಮತ್ತು ಬೆಲೆ ಕಂಪನಿಯು ಹಲವಾರು ಆಧುನಿಕ ವೈಶಿಷ್ಟ್ಯಗಳೊಂದಿಗೆ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಓಕಿನಾವಾ ಲೈಟ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಡಿಜಿಟಲ್ ಟ್ರಿಪ್ ಮೀಟರ್, ಡಿಜಿಟಲ್ ಸ್ಪೀಡೋಮೀಟರ್, ಪುಶ್ ಬಟನ್ ಸ್ಮಾರ್ಟ್, ಇ- ಎಬಿಎಸ್, ಬ್ರೇಕ್ ಲಿವರ್, ಅಲುಮಿಯಮ್ ಮಿಶ್ರಲೋಹದ ಚಕ್ರಗಳು, ಎಲ್ಲ ಎಲ್ ಇ ಡಿ ದೀಪಗಳು ಮತ್ತು ಡಿಟ್ಯಾಚೇಬಲ್ ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ನ ಆರಂಭಿಕ ಎಕ್ಸ್ ಶೋ ರೂಮ್ 69,999 ಬೆಲೆಯನ್ನು ಹೊಂದಿದೆ.